ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ ೧೦೩ ಒಂದು ದಿನ ಮಹಿಷಿ ಕರ್ಣಾವತಿಯು ಒಬ್ಬಳೇ ಕುಳಿತುಕೊಂಡು ಚಿಂತಿ ಸುತಿದ್ದಳು. ಕಮಲಾದೇವಿಯು ಅವಳ ಬಳಿಗೆ ಬಂದು, 6• ಈಗಲೂ ನಾನು ಹೇಳುವುದನ್ನು ಕೇಳಿದರೆ ಪುನಃ ಯೋಚನೆಗೆ ಕಾರಣವಿರುವುದಿಲ್ಲ. ನನ್ನ ಮಾತು ಕೇಳಬಾರದೆ ? ೨೨ ಎಂದಳು. ಕರ್ಣಾವತಿಯು ಬೇಸರಗೊಂಡು, 66 ಪುನಃ ಮತ್ತೇನು ? ೨೨ ಎಂದಳು. ಕಮಲಾದೇವಿ-ವಿಲಾಸಕುಮಾರಿಯನ್ನು ತಂದೆಯ ಮನೆಯಿಂದ ಕರೆ ತಂದು ಇಲ್ಲಿ ಕೆಲವು ಕಾಲ ಇಟ್ಟುಕೊಂಡಿರೋಣ, ಅದರಿಂದಾದರೂ ಅಮರನ ಮನಸ್ಸು ಸರಿಯಾಗುವುದೋ ಇಲ್ಲವೋ, ನೋಡಬಹುದು, ನಾನು ಹೇಳು ವುದು ನಿಮ್ಮ ಮನಸ್ಸಿಗೆ ತಂದುಕೊಳ್ಳುವುದಿಲ್ಲವೆಂದೇನೋ ಗೊತ್ತಾಗಿದೆ. “ ನಿನ್ನ ಮಾತು ಕೇಳಿದೆ. ಕಡೆಗೆ ಹೀಗಾಗಿರುವುದು ! 99 ಅಭಿಮಾನಿಯಾದ ರಾಜಮಹಿಷಿಯು ಸೊಕ್ಕಿನಿಂದಲೂ ರೋಷದಿಂದಲೂ * ನನ್ನ ಮಾತು ಕೇಳಿ ಹೀಗಾಯಿತಲ್ಲವೆ ! ನೀವು ಅಮರನಿಗೆ ತಾಯಿ, ನಾನವ ನಿಗೆ ಶತ್ರು ! ಕಂಡಹಾಗಾಯಿತೆ ! ಆದುದರಿಂದ ತಿಳಿದು ತಿಳಿದು ಬೇಕೆಂತಲೇ ಕೆಟ್ಟ ಆಲೋಚನೆಯನ್ನು ಕೊಟ್ಟೆ ನಲ್ಲವೆ ? ಅಂತಹ ಚಂದವುಳ್ಳ ಚಲುವೆಯನ್ನು ನಿಮ್ಮ ಮಗನು ಮೆಚ್ಚುವುದಿಲ್ಲವೆಂದು ನಾನು ಕನಸುಕಂಡಿದ್ದೆನೆ ? ಕೈಮೇಲೆ ಗುಣಿಸುವುದಕ್ಕೆ ಬಗ್ಗೆ ಸು ? ಜ್ಯೋತಿಷಶಾಸ್ತ್ರವನ್ನೆಲ್ಲಾ ಒಲ್ಲೆನುವೆ ? ೨೨ ಎಂದಳು. - 66 ಆಗತಕ್ಕುದು ಆಗಿಹೋಯಿತು. ಇನ್ನು ನಿಮ್ಮಗಳ ಆಲೋಚನೆಯಿಂ ದಾಗುವುದೇನು ? 99 - ಕಮಲಾದೇವಿ(ಕಣ್ಣೀರು ಸುರಿಸುತ್ತ)-ಅದೇನೋ ನಿಜ, ನೀವು ಅಮರನನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಪಡೆದವರು ! ನೀವೇ ಅವನಿಗೆ ತಾಯಿ ! ನಾವೆಲ್ಲಾ ಪರಕೀಯರು ನಾನು ಅಭಾಗಿನಿ ! ಮಕ್ಕಳಿಲ್ಲದ ಬಂಜೆ ! ನನ್ನ ಮಾತನ್ನು ಯಾರು ಕೇಳುವರು ? ಇಲ್ಲಿರುವುದಕ್ಕೆ ನನಗಿನ್ನು ಇಷ್ಟವಿಲ್ಲ, ಇನ್ನಿರಲಾರೆ, ಇದ್ದು ಪ್ರಯೋಜನವಿಲ್ಲ. ಈಗಲೇ ಹೋಗಿ ರಾಣಾವಿಗೆ ಹೇಳಿ ತೌರುಮನೆಗೆ ಹೊರಟುಹೋಗುತ್ತೇನೆ. ಕಳುಹಿಸಿಕೊಟ್ಟು ಬಿಡಲಿ. ಇರುವವರು ಇರಲಿ, ನಾನಿರುವುದು ಭೂಮಿಗೆ ಭಾರ. ಪೂರ್ವಜನ್ಮದ ಕರ್ಮ, ಸುಖಪಡುವುದು ನನ್ನ ಹಣೆಯಲ್ಲಿಲ್ಲ ! ನಗುವವರೆದುರಿಗೆ ಜಾರಿಬಿದ್ದ ಹಾಗೆ ಆಡುವವರ ಬಾಯಿಗೆ ಈಡಾದೆ, ನನ್ನ ಅದೃಷ್ಟ !