ಕೋಹಿತರು ಕರೆತಂದು ಕುಳ್ಳಿರಿಸಿಕೊಂಡು ಹಿರಿಯ ರಾಜಮಹಿಷಿಯನ್ನು ಬರಹೇಳುವುದಕ್ಕೆ ಅವಳ ಬಳಿಗೆ ಪರಿಚಾರಿಕೆಯನ್ನು ಕಳುಹಿದಳು. ರಾಜಮಹಿಷಿ ಕರ್ಣಾವತಿದೇವಿಯು ಈ ಆನಂದೋತ್ಸವದ ಸಮಯದಲ್ಲಿ ತನ್ನ ಕೊಟಡಿಯಲ್ಲೊಬ್ಬಳೇ ವಿಷಣ್ಣವದನೆಯಾಗಿ ಕುಳಿತುಕೊಂಡು ಕಾಗದವ ಮೈದುತಿದ್ದಳು, ಹಿಂದಿನ ರಾತ್ರಿ ನಾಥದ್ವಾರದಿಂದ ದೂತಿಯೊಬ್ಬಳು ಒಂದು ಕಾಗದವನ್ನು ತಂದೊಪ್ಪಿಸಿದ್ದಳು. ರಾಒಮಹಿಷಿಯು ಸ್ವಲ್ಪ ಹೊತ್ತು ಚಿಂತಾ ಕ್ರಾಂತೆಯಾಗಿದ್ದು ಪುನಃ ಕಾಗದವನ್ನು ಬಿಚ್ಚಿ ಓದುವುದಕ್ಕೆ ತೊಡಗಿದಳು :-
- ರಾಜಪೂತ ರಾಜೇಶ್ವರಿ ! ೨೨
ತಮ್ಮ ಪುತ್ರ ಕುಮಾರ ಅಮರಸಿಂಹನು ಒಬ್ಬ ಸನ್ಯಾಸಿನಿಯನ್ನು ಮದುವೆ ಮಾಡಿಕೊಳ್ಳುವನೆಂದೂ ಅತಿ ಶೀಘ್ರವಾಗಿ ಮಹಾ ಸಮಾರೋಹದಿಂದ ನಾಥ ದ್ವಾರಕ್ಕೆ ಬರುವನೆಂದೂ ವರ್ತಮಾನವನ್ನು ಕೇಳಿದೆನು, ಈ ಜನ್ಮದುಃಖಿನಿ ಯಾದ ಆಂಒರದ ರಾಜಕುಮಾರಿ ಅ೦ಬಾಲಿಕೆಯು ರಾಧಾಶ್ಯಾಮನ ಚರಣಗಳಲ್ಲಿ ಆಶ್ರಯವನ್ನು ಹೊಂದಿದ ದಿನ ಅವಳು ಈ ಪವಿತ್ರವಾದ ಆಶ್ರಮದಲ್ಲಿ ಮನುಷ್ಯರ ಅಧಿಕಾರವಿದೆಯೆಂದು ಸ್ವಪ್ನದಲ್ಲಿ ಯೂ ತಿಳಿದಿರಲಿಲ್ಲ. ರಾಜಾಧಿರಾಜ ಜಯ ಸಿಂಹನು ದಯಧರ್ಮಗಳಿಗೆ ಜಲಾಂಜಲಿಯನ್ನು ಕೊಟ್ಟು ಸ್ವಂತವಾಗಿ ಒಂದು ಪ್ರಪಂಚವನ್ನು ತ್ಯಜಿಸಿ ಸನ್ಯಾಸಿನಿಯಾದ ಈ ದುರ್ಭಾಗ್ಯಳನ್ನು ರಾಧಾನಾಥನ ಚರಣಗಳಿಂದ ಬಲವಂತವಾಗಿ ಅಪಹರಣ ಮಾಡಿಕೊಂಡು ಹೋಗಲು ಸಂಕಲ್ಪಿಸಿ ದ್ದಾನೆಂದು ಕೇಳಿ ಆಶ್ಚರ್ಯ ಪಟ್ಟೆನು, ಆದರೆ ಆ ತ್ರಿದಿವನಾಧನಿಗೆ ದಾಸಿಯಾ ದವಳು ಮರ್ತ್ಯಲೋಕದ ರಾಜನನ್ನು ಗ್ರಹಣ ಮಾಡಿ ಮುಖವೆತ್ತಿ ನೋಡುವಳೆ ! ಆದರೆ ತಾವು ಮಹಾರಾಜನನ್ನು ಈ ನಿಷ್ಟುರವಾದ ಪಾಸಮಯವಾದ ದುರಭಿ ಸಂಧಿಯಿಂದ ತಪ್ಪಿಸಲಾರಿರಾ ! ಹಾಗೆ ಮಾಡದಿದ್ದರೆ, ತಮ್ಮ ಮಗನು ನರನ ಉಡುಪಿನಲ್ಲಿ ಮಹಾ ಸಂಭ್ರಮದಿಂದ ಅನೇಕ ಜನರೊಡಗೂಡಿ ನಾಥದ್ಯಾಥಕ್ಕೆ ಬಂದು, ಸನ್ಯಾಸಿನಿ ಅಂಬಾಲಿಕೆಯು ರಾಧಾವಲ್ಲಭನ ಚರಣತಲದಲ್ಲಿ ಪ್ರಾಣವ ನ್ಯೂ ಪಿಸಿರುವುದನ್ನು ನೋಡುವನೆಂದು ಖಂಡಿತವಾಗಿ ತಿಳಿದಿರಬೇಕು. ತಾಯಿ ತಂದೆಗಳಿಲ್ಲದೆ ನಿಸ ಹಾಯಕಳಾಗಿರುವ ಅಂಬರದ ರಾಜಕುಮಾರಿಯ ಪ್ರಾಣ ವನ್ನು ಕಾಪಾಡುವುದಕ್ಕೆ ತಮಗೆ ಇಷ್ಟವಿದ್ದರೆ ಈಗಲೂ ಮಹಾರಾಜರನ್ನು ಈ ಏವಾಹದ ಪ್ರಯತ್ನದಿಂದ ನಿವೃತ್ತರನ್ನಾಗಿ ಮಾಡಬೇಕೆಂಬುದೇ ನನ್ನ ಭಿಕ್ಷೆ ಯಾಗಿದೆ-ಸನಸಿನೀ ಅಂಬಾಲಿಕೆ, 99