ಮೂ ರ ನೆ ಯ ಸ ರಿ ಟೈ ದ , ಕಾಳಿಂದಿನದಿಯ ತೀರದಲ್ಲಿ ಮುಸಲಮಾನ ಮಂದಿರದಲ್ಲಿ ವೃದ್ದ ಫಕೀರನು ನೆಲದಮೇಲೆ ಕುಳಿತಿದ್ದಾನೆ. ಅವನೆದುರಿಗೆ ಕಂಬಳಾಸನದಲ್ಲಿ ದುರ್ಗಾದಾಸನು ಕುಳಿತಿದ್ದಾನೆ. ದುರ್ಗಾದಾಸನ ಕೆಂಪೇರಿದ್ದ ಕಣ್ಣುಗಳಿಂದ ವಾರಿಧಾರೆಯು ಸುರಿಯುತ್ತಿದೆ. ದುರ್ಗಾದಾಸನು ಕಣ್ಣೀರನ್ನೊರಸಿಕೊಂಡು ಫಕೀರನ ಮುಖ ಮಂಡಲವನ್ನು ನೋಡುತ್ತ ಕೈಮುಗಿದುಕೊಂಡು, 14 ದೇವ ! ಇಷ್ಟು ದಿನಗಳ ಬಳಿಕ ತಮ್ಮ ಬಾಯಿಯಿಂದ ಈ ನಿಷ್ಟುರವಾದ ಮಾತನ್ನು ಕೇಳಿದೆನೇಕೆ ? ೨೨ ಎಂದು ಹೇಳಿದನು. * ಫಕೀರ-ವತ್ಸ ! ವಿಧಾತನ ಸಂಕಲ್ಪವನ್ನು ವಿಾರುವುದು ಮನುಷ್ಯನಿಗೆ ಸಾಧ್ಯವಲ್ಲ. ಆದುದರಿಂದ ಸ್ವಲ್ಪ ಕಾಲದಮಟ್ಟಿಗೆ ಯವನ ಯುದ್ಧದಿಂದ ವಿರತ ನಾಗೆಂದು ಹೇಳಿದೆನು, ಈ ಕೆಲವು ವರುಷಕಾಲ ನಡೆದ ಯುದ್ಧದಿಂದ ಬಹು ಸಂಖ್ಯೆ ಹಿಂದೂ ವೀರರು ಕಾಲಾಧೀನವಾಗಿ ಹೋಗಿದ್ದಾರೆ. ಈಗೀರಕ್ಕೆ ಪ್ರವಾಹ ವನ್ನು ನಿಲ್ಲಿಸಿರುವುದು ಆವಶ್ಯಕ. ಯೋಧಪುರದ ಶಿರಾಜನನ್ನು ಶೈಲಶಿಖರ ದಲ್ಲಿನ್ನು ಏಕಾಂತವಾಗಿಟ್ಟಿರುವುದರಿಂದ ಪ್ರಯೋಜನವಿಲ್ಲ. ಅವರಂಗಜೇಬನು ಈಗ ವಿಷದ ಹಲ್ಲನ್ನು ಕಿತ್ತು ಹಾಕಿದ ಸರ್ಪದಂತಿಹನು, ಶಿಶರಾಜನ ಅಂಗಸ್ಪರ್ಶ ಮಾಡುವುದಕ್ಕೆ ಅವನಿಗೆ ಸಾಧ್ಯವಿಲ್ಲ. ನನ್ನ ಇಹಜೀವನದ ಪರಿಣಾಮವು ಒದಹುತ್ತ ಬಂದಿದೆ. ಜೀವನವು ಪೂರೈಸುವುದಕ್ಕೆ ಮೊದಲು ಈ ರಕ್ತಪ್ರವಾಹವು ನಿಂತಿರುವುದನ್ನು ನೋಡಿ ಸುಖದಿಂದ ದೇಹವನ್ನು ಬಿಡುವೆನು. ದುರ್ಗಾದಾಸ- (ಕಣ್ಣೀರು ತುಂಬಿದವನಾಗಿ)- ಇದೇನು ? ವಿಧಾತನೆ ಸಂಕಲ್ಪವೆ ? ನಾನದನ್ನು ನಂಬುವುದಿಲ್ಲ. ನಿಖಿಲ ಜಗಕ್ಕೆ ಅಧಿಪತಿಯಾದವನು ಅಷ್ಟು ನಿಷ್ಟುರನೆ ? ಇದೇ, ಅವನ ಮಂಗಳಮಯವಾದ ವಿಧಾನ ? ಹಾ, ದೇವ! ಕಡೆಗೆ ಈ ನಿಷ್ಠುರವಾದ ಆಲೋಚನೆಯನ್ನು ತಮ್ಮ ಬಾಯಿಯಿಂದ ಕೇಳಬೇಕಾಯಿತೆ ? ಮೇಚ್ಚರ ಉಚ್ಛೇದದ ಮಹಾವ್ರತಕ್ಕೆ ಒಲಾಂಜಲಿಯನ್ನು ಕೊಟ್ಟು ದುರ್ಗಾದಾಸನು ಜೀವನ ಧಾರಣ ಮಾಡಬೇಕೆ ? ಬಂಗಾರದಂತಹ ಭಾರತ ವರ್ಷವು ದಿನೇ ದಿನೇ ರಸಾತಲಕ್ಕೆ ಹೋಗುವುದನ್ನು ತನ್ನ ಕಣ್ಣು ಗಳಿಂದ ನೋಡುತ್ತ ನಿಶ್ಚಿಂತನಾಗಿರಬೇಕೆ ? ಅನಂತ ಜ್ಞಾನಶಾಲಿಗಳಾಗಿ
ಪುಟ:ಕೋಹಿನೂರು.djvu/೧೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.