ಕೋಹಿನೂರು ಸಾವಿತ್ರಿ ದಮಯಂತಿರ ಹಾಗೂ ಸರ್ವಗುಣ ಸಂಪನ್ನರಾಗಿ, ಮರ್ತ್ಯ ಲೋಕ ದಲ್ಲಿ ದೇವರಮಣಿಯರ ಹಾಗಿದ್ದ ಪವಿತ್ರ ಮಯರಾದ ಆರ್ಯಲಲನೆಯರು ವಿಶಾಚ ಭಯದಿಂದ ಅಂತಃ ಪುರದಲ್ಲಿ ಔತುಕೊಂಡಿದ್ದರು. ಏಕೆಂದರೆ, ಲಲನೆ ಯರ ಕಲವು ಸೃಷ್ಟಿಯಾಗಿರುವುದಕ್ಕೆ ಇಂದ್ರಿಯ ಪರಿತೃಪ್ತಿಯೇ ಮುಖ್ಯೋ ದೇಶವೆಂದು ಯವನನು ತನ್ನ ಮತವಾಗಿ ಪ್ರಚಾರಗೊಳಿಸಿ ಅದಕ್ಕೆ ತಕ್ಕ ಹಾಗೆ ದುರ್ವೃತ್ರನಾಗಿ ಪಶುಪ್ರಾಯನಾಗಿ ವ್ಯವಹರಿಸುತಿದ್ದನು ರತ್ನ ವನ್ನು ಪ್ರಸವಿ ಸುತಿದ್ದ ಭಾರತಭೂಮಿಯು ಅಡವಿಯಾಗಿ ಪರಿಣಮಿಸಿತು ಕೃಷಿಕನಿಗೆ ಕೃಷಿ ಕಾರ್ಯಕ್ಕೆ ಹೋಗಲು ಧೈರ್ಯವು ತಪ್ಪಿ ಹೋಯಿತು, ಅವನು ದನಕರುಗಳನ್ನು ಏಕಾಂತವಾಗಿ ರಾತ್ರಿಯಹೊತ್ತು ಅಡುಗೆ ಅಟ್ಟಿ ಮನೆಯ ಬಾಗಿಲಿಗೆ ಬಿರಿಯನ್ನು ಹಾಕಿಕೊಂಡು ನೆಲದಮೇಲೆ ಬಿದ್ದು ಹೊರಳಾಡುತ್ತ ರೋದನವಾಡುತ್ತಿರು ವನು- ಏಕೆಂದರೆ ಗೋಮಾಂಸವನ್ನು ತಿನ್ನದಿದ್ದರೆ ಯವನರ ಜಠರಾಗ್ನಿ ಯು ತೃಪ್ತಿಯನ್ನು ಹೊಂದಲಾರದುದಾಗಿದ್ದಿತು. ಅವರಂಗಜೇಬನು ದುರಾಶೆಯಂದುಂಪಾದ ದುರ್ದ ಮನೀಯವಾದ ಮೋಹದಲ್ಲಿ ಮಗ್ನನಾಗಿ ತನ್ನ ಆಳಿಕೆಯಿಂದ ನಿಸ್ತಬ್ಬವಾಗಿ ಸತ್ಯದುದಾಗಿದ್ದ ಆರ್ಯಾವರ್ತದಿಂದ - ಹಿಂದೂ ” ಎಂಬ ಹೆಸರು ನಿರ್ನಾಮವಾಗಿ ಹೋಗುವು ದೆಂದು ತಿಳಿದುಕೊಂಡಿದ್ದನು. ಆದರೆ ಪ್ರಕೃತಿಯು ಸಂಹಾರಮೂರ್ತಿಯನ್ನು ತಾಳುವುದಕ್ಕೆ ಮೊದಲು ಶಾಂತಮೂರ್ತಿಯನ್ನು ತಾಳಿರುವುದೆಂದು ಪಾಪಕೃತ್ಯ ಪರಂಪರೆಯಿಂದ ಮೋಸಹೋಗಿದ್ದ ಯವನ ಸಾಜನು ತಿಳಿದಿರಲಿಲ್ಲ ; ಸ್ವಲ್ಪ ಕಾಲದಲ್ಲೇ ಸತ್ತಂತಯರಾಗಿದ್ದ ಅಸಂಖ್ಯ ಆರ್ಯಸಂತಾನರು ಇದ್ದ ಹಾಗೆ ಚೇತನ ಲಾಭವನ್ನು ಹೊಂದಿ ಪ್ರಚಂಡ ಚಂಡಮಾರುತದಿಂದ ಸಂಕ್ಷುಬ್ದ ವಾದ ಸಮು ದ್ರದ ಅಲೆಗಳ ಹಾಗೆ ಘೋರಗರ್ಜನೆ ಮಾಡುತ್ತ ಎದ್ದಿದ್ದಾರೆಂದು ಕೇಳಿ ಸವಾ ಒನು ಸೃಂಭಿತನಾದನು, ಅರಾವಳಿ ಪರ್ವತದ ಉಪತ್ಯಕೆಯಲ್ಲಿ ಹರಿಯುವ ಲೂನಾ ನದಿಯ ತೀರದಲ್ಲಿ ಅಕ್ಟೋಪಲಕ್ಷ ಒರೆಗಳಿದ ಕತ್ತಿಗಳಲ್ಲಿ ಇಪ್ಪತ್ತು ರಾಜರ ಕಿರೀಟಗಳನ್ನಲಂಕರಿಸಿದ್ದ ವಜ್ರಗಳ ಪ್ರಭೆಯು ಪ್ರತಿಫಲಿತವಾಗಿದ್ದುದನ್ನು ನೋಡಿ ಭೀತಿಗೊಂಡು ಚಕಿತನಾದನು. ಸ್ವಲ್ಪ ಕಾಲದಲ್ಲೇ ಅವರಂಗಜೇಬನು ದೀಪಶಿಖೆಯಿಂದ ಸಮುದ್ರವನ್ನು ಶೋಷಣವಡುವುದೂ ಬಾಯಿಯ ಉಸಿರಿ' ನಿಂದೆ ತಪನ ರಶ್ಮಿಯನ್ನು ಅಳಿಸ ವುದೂ ಮನುಷ್ಯನಿಗೆ ಸಾಧ್ಯವಾದ ಕೆಲಸವಲ್ಲ ವೆಂದು ತಿಳಿದುಕೊಂಡನು. 1 * * * * 1,
ಪುಟ:ಕೋಹಿನೂರು.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.