೧೫ ಕೋಹಿಸುರು wwwnAtwood ಹೆಂಗಸು ನಿಂತಿದ್ದಾಳೆ ! ಇದೇನು, ಸ್ವರವೆ ? ಯುವಕನು, ತಾನು ಚಾಗರಿ ತನೋ ಅಥವಾ ನಿದ್ರಿತನೋ ಎಂಬುದನ್ನು ನಿಶ್ಚಿಸಿಕೊಳ್ಳಲು ಪುನಃ ನಾಲ್ಕು ಕಡೆಯೂ ನೋಡಿದನು. ಆಕಾಶದಲ್ಲಿ ನಕ್ಷತ್ರಗಳು ಹುಟ್ಟಿವೆ. ಶಶಾಂಕನು ನಗುತ್ತಾನೆ, ಕೆಳಗೆ ನೀಲವಸನವನ್ನು ಟ್ಟು ಚಂಚಲಪ್ರಾಯವುಳ್ಳ ತರಂಗಿಣಿಯು (ನದಿಯ) ನಕ್ಷತ್ರಗಳ ಹಾರವನ್ನು ಧರಿಸಿಕೊಂಡು ನೃತ್ಯ ಮಾಡುತ್ತದೆ. ಹಾಗಾ ದರೆ, ಇದು ಸ್ವಷ್ಟವಲ್ಲ. ಸತ್ಯ ! ರಮಣಿಯು ತಾರಸ್ವರದಲ್ಲಿ, ೧೮ ಏಳು ಏಳು, ಪುನಃ ನಿದ್ರೆ ಹೋಗ ಬೇಡ” ಎಂದು ಹೇಳಿದಳು. ಇದು ಮಧುರವಾಗಿ ತೀವ್ರವಾದ ಮನೋ ಮೋಹನವಾದ ಅದೇ ಕಂಠಸ್ವರ! ಯುವಕನು ಎದ್ದು ಚಕಿತ ನಯನನಾಗಿ ಚಂಚಲಪ್ರಾಣನಾಗಿ ರಮಣಿಯನ್ನು ದೃಷ್ಟಿಸಿನೋಡುತ್ತ ನಿಂತನು. ರಮಣಿಯು ನಿನ್ನಲ್ಲಿ ಕತ್ತಿಯುಂಟೆ ? ೨” ಎಂದು ಕೇಳಿದಳು. ನಿದ್ದೆಯಿಂದೆದ್ದಿದ್ದ ಯುವಕನು ಮುಗ್ಧನಾಗಿ ವಿಸ್ಮಿತನಾದನು. ವಾಕ್ಯ ಕ್ರಿಯಿಲ್ಲ ! ರಮಣಿಯು ಉತ್ತರಕ್ಕೋಸ್ಕರ ಸ್ವಲ್ಪ ಮಾತ್ರ ಸುಮ್ಮನಿದ್ದು ಪುನಃ, " ನಿನ್ನಲ್ಲಿ ಕತ್ತಿಯುಂಟೆ ? ಹೃದಯದಲ್ಲಿ ಸಾಹಸವುಂಟೆ ? ಬಾಹುಗಳಲ್ಲಿ ಬಲ ವುಂಟೆ ? ನರಗಳಲ್ಲಿ ಆರ್ಯರಕ್ಕವುಂಟೆ ? ಹೃ೩ಂಡದಲ್ಲಿ ಸ್ವರ್ಗಕ್ಕಿಂತ ದೊಡ್ಡ ದಾದ ಜನ್ಮ ಭೂಮಿಯ ಮೇಲಣ ಮಮತೆಯುಂಟೆ ? ಉತ್ತರವನ್ನು ಕೊಡು ! ಎಂದು ಕೇಳಿದಳು. SS ಉಂಟು.99 (• ಹಾಗಾದರೆ ನನ್ನ ಸಂಗಡ ಬಾ,೨೨ ದನಾಕಾಯುವವನು ಮಂತ್ರದಿಂದ ಮುಗ್ಧನಾದವನಾಗೆ ಹೆಂಗಸಿನ ಸಂಗರ ಹೋದನು. - ರಮಣಿಯು ಚುಚಲ ಪದವಿಕ್ಷೇಪದಿಂದ ಸ್ವಲ್ಪ ದೂರ ಹೋಗಿ ಒಂದು ಪುರಾತನವಾಗಿ ಬಿದ್ದು ಹೋಗಿದ್ದ ಮಂದಿರದೆದುರಿಗೆ ನಿಂತು ಯುವಕನನ್ನು ಕುರಿತು, “ ನೀನು ಇಲ್ಲಿ ಸ್ವಲ್ಪ ಹೊತ್ತು ನಿಂತಿರು-ಕೂಡಲೆ ಒರುವನ್ನು ೨೨ ಎಂದು ಹೇಳಿ ಮಸಜೀದಿನೊಳಗೆ ಹೋದಳು. ಯುವಕನ ಹೆಚ್ಚು ಹೊತ್ತು ಕಾದಿರಬೇ. ಕಾಗಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ರಮಣಿಯು ಒಬ್ಬ ಮುದುಕ ಮುಸಲ್ಮಾನ ಫಕೀರನನ್ನು ಸಂಗಡ ಕರೆದುಕೊಂಡು ಹೊರಗೆ ಬಂದಳು, ಯುವಕನು ನೋಡ
ಪುಟ:ಕೋಹಿನೂರು.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.