ಐದನೆಯ ಪರಿಚ್ಛೇದ ಜಿ. wwwxwwwwws ಇಬ್ಬರು ಮಾತ್ರ ! ಕತ್ತಿಗೆ ಇರುವ ರಕ್ತದ ಕೃಷಿಯೇನೋ ತೃಪ್ತವಾಗುವುದುಆದರೆ ರಾಜಮಹಿಷಿಯನ್ನೂ ರಾಜಕುಮಾರಿಯನ್ನೂ ರಕ್ಷಿಸುವವರಾರು ??? ಎಂದನು. ಯುವಕನು, “ ಮಾರ್ಗವು ಅತಿ ಇಕ್ಕಟ್ಟಾಗಿದೆ ! ಒಂದೇ ಕಾಲ ದಲ್ಲಿ ಹೆಚ್ಚು ಮಂದಿ ಕುದುರೆ ಸವಾರರು ಮುಂದಾಗಲಾರರು ! ತಾವು ರಾಜ ಮಹಿಷಿಯನ್ನೂ ರಾಜಕುಮಾರಿಯನ್ನೂ ಸಂಗಡ ಕರೆದುಕೊಂಡು ಹೋದರೆ ಶತ್ರುಸೈನ್ಯವು ಮುಂದಾಗಿ ಬರದಹಾಗೆ ಇಲ್ಲಿಯೇ ತಡೆದಿರುವೆನು 99 ಎಂದು ಹೇಳಿದನು. ದುರ್ಗಾದಾಸನು ಕ್ಷಣಮಾತ್ರ ಯೋಚಿಸಿ, ಯುವಕನ ಸುಕುಮಾರ ಮುಖವನ್ನು ನೋಡುತ್ತ, “ ಅದುಹೊರತು ಬೇರೊಂದುಪಾಯವು ತೋರುವು ದಿಲ್ಲ, ಸಾಧು / ವೀರಪಾಲಕ ! ವೀರನಹಾಗೆ ಪ್ರಾಣವನ್ನು ವಿಸರ್ಜನಮಾಡುಸ್ವರ್ಗದಲ್ಲಿ ಅದಕ್ಕೆ ಪುರಸ್ಕಾರವುಂಟು ! 99 ಎಂದು ಹೇಳಿ, ರಾಜನಹಿತಿಯನ್ನು ನೋಡಿ, '• ರಾಜಮಹಿಷಿ ! ಸಾವಕಾಶಕ್ಕೆ ಸಮಯವಿಲ್ಲ-ಕುದುರೆಯಮೇಲೆ ಹತ್ತೊಣಾಗಲಿ ?ಎಂದನು. ಕೃಷಿಕನು ಫುಲ್ಲನಯನನಾಗಿ ಪೂರ್ಣದೃಷ್ಟಿಯಿಂದ ರಾಜಕುಮಾರಿಯ ಮುಖವನ್ನು ಕುರಿತು ನೋಡದನು, ರಾಜಕುಮಾರಿಯು ಆ ದೃಷ್ಟಿಯಲ್ಲಿ ಕೃಷಿ ಕನು, “ ನೋಡಿರಿ, ನಿಮಗೊಸ್ಕರ ಪ್ರಾಣವನ್ನು ಬಿಡುವುದೂ ಸುಖ' ವೆಂದು ಹೇಳುವಹಾಗೆ ಇ೦ತವಾಡಿದನೆಂದು ತಿಳಿದುಕೊಂಡಳು, ದುರ್ಗಾದಾಸನ ವಿಷಾದದಿಂದಲೂ ಅಭಿಮಾನದಿಂದಲೂ ಕಣೋ ರಸಿಕೊಂಡು ಕುದುರೆಯನ್ನು ಹತ್ತಿದನು, ರಾಜಮಹಿಷಿಯ ಅಂಬಾಲಿಕೆಯನ್ನೆತ್ತಿಕೊಂಡು ಅಶ್ವಾರೋಹಣ: ಮಾಡಿದಳು ಅಂಬಾಲಿಕೆಯು ಕುದುರೆಯ ಕಡಿವಾಣವನ್ನು ಹಿಡಿದೆಳೆದು ಕುದುರೆ ಯನ್ನು ನಿಲ್ಲಿಸಿ, “ ದುರ್ಗಾದಾಸ ! ನೀವು ಕ್ಷತ್ರಿಯವೀರರಲ್ಲವೆ ! ಈ ದಿನ ಪ್ರಾಣಭಯಕ್ಕೆ ಶತ್ರುಗಳಿಗೆ ಬೆನ್ನನ್ನು ತೋರಿಸುವಿರಾ ? ಎಂದು ಕೇಳಿದಳು. ದುರ್ಗಾದಾಸ-(ಗಂಭೀರಸ್ವರದಿಂದ)- ಈಗ ಹುಡುಗಿಯ ಉಪದೇಶ ವನ್ನು ಕೇಳುವುದಕ್ಕೆ ಸಮಯವಿಲ್ಲ. ರಾಜಮಹಿಷಿ ! ಕುದುರೆಯನ್ನು ಬಿಡೋ ಣಾಗಲಿ-ನಿಂತು ಸಾವಕಾಶ ಮಾಡಿದರೆ ನಿಮ್ಮನ್ನು ರಕ್ಷಿಸುವುದು ನನಗೆ ಸಾಧ್ಯ ವಾಗದು,
ಪುಟ:ಕೋಹಿನೂರು.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.