ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ MMಯ my ಅಫಜುಲ! ಆದುದರಿಂದಲೇ ಈ ನನ್ನ ವಿಸ್ತಾರವಾದ ರಾಜ್ಯದಲ್ಲಿ ಈ ಕಿವಿಗ ಇನ್ನು ಮುಚ್ಚಿ ಬಿಡುವ ಹಾಹಾಕಾರ ಧ್ವನಿಯು ಹುಟ್ಟಿರುವುದಲ್ಲವೆ? ಆದುದ ರಿಂದಲೇ ನನಗೆ ಪ್ರಿಯತಮರಾಗಿದ್ದ ಸಹೋದರರಾದ ದಾರಾ, ಪೂಜಾ ಮೊರಾದ ಇವರ ರಕ್ತದಿಂದಲೂ ಪರಮಾರಾಧ್ಯನಾಗಿದ್ದ ಪಿತನ ಕಣ್ಣೀರಿಂದಲೂ ಪವಿತ್ರಾಣರಾದ ಹಿಂದೂ ವೀರರ ಹೃದಯದ ರಕ್ತದಿಂದಲೂ ನನ್ನ ಈ ದಾನವ ಯಜ್ಞದ ದುರಾಕಾಂಕ್ಷೆಯೆಂಬ ಅಗ್ನಿಯಲ್ಲಿ ಹೋಮಮಾಡಿದೆನಲ್ಲವೆ? ೨೨ ಭಾರತ ಸಮಾಜನು ಅಶ್ರು ನಯನನಾಗಿ ಮೇಲೆ ನೋಡುತ್ತಾ ಹೇಳ ತೊಡಗಿದನು :-“ ರಾಜಕುಲಕ್ಕೆ ಗುರುವಾದ ದೇವ ಅಕಬರ ! ನಿನ್ನ ದಿವ್ಯ ಚಕ್ಕುಗಳಿಂದ ಒಂದು ತಡವೆ ನೋಡು-ನಿನ್ನ ವಂಶದಲ್ಲಿ ಕುಲಾಂಗಾರನಾ ಗಿಯೂ ನೀಚಾಶಯನಾಗಿಯೂ ಹುಟ್ಟಿರುವ ಅವರಂಗಜೇಬನ ಮೂರ್ಖತನದಿಂದ ಬಂಗಾರದಂತಹ ಭಾರತ ವರ್ಷವು ಸುಟ್ಟು ಬೂದಿಯಾಗಿ ಹೋಗಿದೆ ! ನಿನಗೆ ಪ್ರಿಯವಾಗಿದ್ದ ರಾಜ್ಯವು ಪಾಪಸಾಗರದಲ್ಲಿ ಮುಳುಗಿಹೋಗಿದೆ, ಮರ್ತ್ಯ ಲೋಕದಲ್ಲಿ ನೀನು ಪ್ರತಿಷ್ಠೆ ಮಾಡಿದ್ದ ಆನಂದಮಯವಾಗಿದ್ದ ನಂದನವನವನ್ನು ಪಿಶಾಚನಾದ ಅವರಂಗಜೇಬನು ಈಗ ಹಾಹಾಕಾರಮಯವಾದ ಘೋರಾ ರಣ್ಯವಾಗಿ ಮಾಡಿದ್ದಾನೆ ! ೨೨ ಅವರಂಗಜೇಬನು ಗೃಹದೊಳಗೆ ಬೇಗಬೇಗನೇ ಕಾಲುಹಾಕಿ ಶತಪಥ ತಿರುಗುತ್ತ ಪುನಃ ಹೇಳತೊಡಗಿದನು ;- ಇಲ್ಲ ! ಇಲ್ಲ ! ಇನ್ನು ಸಮಯವಿಲ್ಲ ! ಪ್ರೇತಯಜ್ಞದ ಈ ಪ್ರಚಂಡವಾದ ಅಗ್ನಿ ಯು ಇನ್ನು ಅಳಿಸಿಹೋಗುವುದೆ ? ತ್ರಿಕಾಲದರ್ಶಿಯಾಗಿಯೂ ನರರೂಪಿಯಾಗಿಯೂ ಇರುವ ಫಕೀರ : ನೀನು ಮನುಷ್ಯನಲ್ಲವೆಂದು ತಿಳಿಯುತ್ತೇನೆ. ಸಾಕ್ಷಾತ್ತು ದೇವ ಮಹಮ್ಮದರ ದೂತ ನಾಗಿ ಈ ರಾಕ್ಷಸ ಅವರಂಗಜೇಬನ ದರ್ಪವನ್ನು ಪೂರ್ಣವಾಗುವುದಕ್ಕೆ ಸ್ವರ್ಗದಿಂದಿಳಿದುಬಂದು ಈಗ ಸಂದರ್ಶನವನ್ನು ಕೊಟ್ಟಿರುತ್ತೀ-ಆದರೆ, ದೇವ ! ಈಗ್ಗೆ ಇಪ್ಪತ್ತು ವರ್ಷಕ್ಕೆ ಮೊದಲು ಒಂದು ತಡವೆ ಈ ಪಿಶಾಚಿಯುದುರಿಗೆ ಬಂದು ದರ್ಶನಕೊಡಲಿಲ್ಲವೇಕೆ ? ನನಗೆ ಈಗ ಅವಕಾಶ ಸಾಲದು ಈ ಪ್ರಚಂಡವಾದ ಅಗ್ನಿ ಶಿಖೆಯನ್ನು ನಿರ್ವಾಣಮಾಡುವುದಕ್ಕೆ ನನ್ನ ಯತ್ನಕ್ಕೆ ಮಾರಿ ಹೋಗಿದೆ, ಈ ಬೆಂಕಿಯು ಭರತಖಂಡವನ್ನು ಸುಟ್ಟು ಬೂದಿಮಾಡಿದ ಕೂರು ಅಳಿಸಿಹೋಗದು ! ಈಗ ಅವಕಾಶವು ಸಾಲದು ! ಏಳು, ಗುಲದ !