ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂಧನೆಯ ಪರಿಚ್ಛೇದ Y೬ ರಮಣಿಯು ಹೀಗೆಂದು ಹೇಳುತ್ತಿದ್ದ ಹಾಗೆ ಅವಳ ಪ್ರಫುಲ್ಲವದನದ ನಗುವು ಗಾಂಭೀರದಲ್ಲಿ ಪರಣಮಿಸಿ ಪುನಃ ಹೇಳತೊಡಗಿದಳು :-“ ನೀನವ ಳನ್ನು ಪ್ರೀತಿಸುತ್ತಿಯೆಂದು ನಾನು ಬಲ್ಲೆನು, ಆದರೆ ಇದು ಪ್ರೀತಿಸುವುದಕ್ಕೆ ಸಮಯವೆ? ಹೇಳು, ನಿನಗೆ ಸ್ವರ್ಗಕ್ಕಿಂತಲೂ ಹೆಚ್ಚಾಗಿರವ ಭಾರತ ಭೂಮಿಯು ಯವನರ ಕಾಲಲ್ಲಿ ಬಿದ್ದು ಹೊರಳುತ್ತಿರುವಾಗ ನಿನ್ನ ಹೃದಯವು ಪ್ರೇಮದಲ್ಲಿ ಕರಗುತ್ತಿದೆ ! ನೀನು ಕ್ಷತ್ರಿಯವೀರನಲ್ಲವೆ? ನಿನಗೆ ನಾಲ್ಕು ಕಡೆಯಲ್ಲಿ, ಪಿಶಾಚಿ ಗಳಿಂದ ದಳಿತವಾದ ಆರ್ಯಜಾತಿಯವರ ಹಾಹಾಕಾರಧ್ವನಿಯೆದ್ದಿದೆ. ನಿನ್ನ ಮನಸ್ಟಾದರೋ, ರಮಣಿಯ ದರ್ಶನಕ್ಕೆ ಆಶೆಪಡುತ್ತದೆ ! 99 - ಕೃಷಿಕ-ರಾಜಕುಮಾರಿ ಅಂಬಾಲಿಕೆಯಲ್ಲಿ ? ರಮಣಿಯು ಪುನಃ ನಕ್ಕಳು. ಅವಳ ಗಾಂಭೀರ್ಯವು ಆ ನಗುವಿನೊ ಳಗೆ ಪುನಃ ಅದೃಶ್ಯವಾಗಿ ಹೋಯಿತು, ಕಪ್ಪಾದ ತರಂಗಿಣಿಯೊಳಗಿನ ಛಾಯಾ ಮಯವಾದ ಗಾಂಭೀರ್ಯದ ಛಾಯೆಯು ಈಗಾಳಿಯಿಂದೆದ್ದ ಚೀರ್ದೆರೆಗಳಲ್ಲಿ ಪುನಃ ಅಳಿಸಿಹೋಯಿತು ! ವಿಶಾಸಕುಮಾರಿಯು ನಕ್ಕು, (ಪುನಃ ಅದೇ ಮಾತು ! ನಾನು ಈಗ್ಗೆ ಕೆಲವು ದಿವಸಗಳಿಂದ ದುರ್ಗಾದಾಸನ ದುರ್ಗದಲ್ಲಿ ವಾಸಮಾಡುತ್ತಿದ್ದೆನು, ಅಂಬಾಲಿಕೆಯ ಬಾಯಿಯಿಂದ ನಿನ್ನ ಸಮಾಚಾರ ನನ್ನೆಲ್ಲಾ ತಿಳಿದುಕೊಂಡಿದ್ದೇನೆ, ಆದರೆ ಈ ವಿಪತ್ಕಾಲದಲ್ಲಿ ನೀನು ಸ್ತ್ರೀಗತ ಪ್ರಾಣನಾಗಿದ್ದರೆ ಯುದ್ಧ ಮಾಡುವವರಾರು ? ಸೇನಾಪತಿಯ ದುರ್ಗಕ್ಕೆ ಹೋಗುವುದಕ್ಕೆ ಮೊದಲು ನೀನು ನನ್ನಲ್ಲಿ ಒಂದು ಪ್ರತಿಜ್ಞೆಯನ್ನು ಮಾಡ ಬೇಕು ೨” ಎಂದಳು. “ ಏನು, ಪ್ರತಿಜ್ಞೆಯೋ, ಹೇಳೊಣಾಗಲಿ, ೨೨ • ಯುದ್ಧವು ಪೂರೈಸುವವರೆಗೂ ಕಾಯಮನೋವಾಕ್ಕಾಗಿ ಕೇವಲ ಶತ್ರುಸಂಹಾರದಲ್ಲಿ ಮನಸ್ಥಿಡುವೆನೆಂದ ಮೊದಲು ಶತ್ರು ವಧೆ ಮಾಡಿ ತರುವಾಯ ಪ್ರೇಮದಲ್ಲಿ ಮನಸ್ಸಿಡುವೆನೆಂದೂ ಪ್ರತಿಜ್ಞೆಯನ್ನು ಮಾಡಬೇಕು. ೨೨ ಕೃಷಿಕ.-ದೇವಿ! ಅನೇಕ ದಿವಸಗಳಿಂದ ಮೈಷ್ಣವಧೆಯ ಮಹಾಮಂ ತ್ರದಲ್ಲಿ ದೀಕ್ಷಿತನಾಗಿದ್ದೇನೆ. ಚಿರಜೀವನ ಶರೀರಪತನದವರೆಗೂ ಆ ಮಂತ್ರ ವನ್ನು ಸಾಧನೆ ಮಾಡುವೆನು.