ನಾಲ್ಕನೆಯ ಪರಿಚ್ಛೇದ ದಿಂದ, ಈ ಲೋಕದಲ್ಲಿ ಜನರು ತಮಗೆ ಬೇಕಾದ ವಸ್ತುವನ್ನು ಉಡಿಯಲ್ಲಿಟ್ಟು ಕೊಳ್ಳುವರು. ಹರಿದು ಬಿಸಾಡುವುದಿಲ್ಲ” ಎಂದು ಹೇಳಿದಳು. “ ಹಾಗಾದರೆ ನಾನು ಅನುಮಾನಪಡುತಿದ್ದುದು ನಿಜ ! ಜನರು ನಿನ್ನ ವಿಚಾರದಲ್ಲಿ ಹುಟ್ಟಿಸಿರುವ ಅಪವಾದವೂ ನಿಜ | ೨೨ « ರಾಜಕುಮಾರ : ಜನರು ಹುಟ್ಟಿಸಿರುವ ಅಪವಾದವೇನು 99 “ ಜನರು ಅಂಬರದ ರಾಜಕುಮಾರಿಯು ಒಬ್ಬ ಕೃಷಿಕ ಸೈನಿಕನನ್ನು ನೋಡಿ ಮುಗ್ಗೆಯಾಗಿದ್ದಾಳೆಂದು ಹೇಳುತ್ತಾರೆ, 99 ಯುವರಾಜ ! ವೀರಪುರುಷನ ವೀರತ್ವದಲ್ಲಿ ಮುಗ್ಗರಾಗುವುದು ಕ್ಷತ್ರಿಯ ರಮಣಿಯರಿಗೆ ಧರ್ಮ ! ಇದು ಕಳಂಕಕ್ಕೆ ವಿಷಯವಾಗದು, ಸ್ತುತಿಗೆ ವಿಷಯ ವಾದುದಲ್ಲವೆ? ಈ 1 ತಿಳಿದಹಾಗಾಯಿತು ! ಆ ದಿನ ಕೃಷಿಕ ಸೈನಿಕನಿಗೆ ಮಾಲೆ ಯನ್ನು ಪುರಸ್ಕರವಾಗಿ ಕೊಡುವ ಸಮಯದಲ್ಲಿ ನೀವು ಅಕಾರಣವಾಗಿ ನನ್ನ ನ್ನು ಅವಮಾನ ಪಡಿಸಿದ ಕಾಗೆ ಮತ್ತೊಂದು ತಡವೆ ಅವಮಾನಪಡಿಸಬೇಕೆಂದು ಇಷ್ಟವಿತ್ತಲ್ಲವೆ ? !! ರಾಜಕುಮಾರಿಯು ಅಭಿಮಾನದಿಂದ ಕಣ್ಣೀರು ಸುರಿಸಿಕೊಂಡು ಅಲ್ಲಿಂದ ಹೋಗು ಮುಂದಾದ ಕು, ಕೇಸರಿಸಿಂಹನು ಅವಳೆದುರಿಗೆ ಬಂದು ಅಡ್ಡಾಗಿ. ನಿಂತು, ಕೇಳು, ರಾಜಕುಮಾರಿ ! ನಾನು ನಿನ್ನ ಬಳಿಗೆ ಬಂದಿದ್ದ ಉದ್ದೇಶ ವನ್ನು ನಿನಗಿನ್ನೂ ಹೇಳಿಲ್ಲ ೨೨ ಎಂದು ಹೇಳಿದನು. • ಬೇಗನೆ ಹೇಳೊಣಾಗಲಿ, 99 - ಕೇಸರಿಸಿಂಹ-ನಿನ್ನನ್ನು ನನಗೆ ಕೊಟ್ಟು ಮದುವೆಯಾಗಬೇಕೆಂದು ಯೋಧಪುರದ ರಾಜಮಹಿಷಿಯರಿಗೆ ಬಹಳ ದಿವಸದಿಂದ ಇಷ್ಟವಿದ್ದಿತೆಂದು ನೀನು ತಿಳಿದಿರುಸುದು, ಮೊದಲು ನಾನು ನಿನ್ನನ್ನು ನೋಡದಿದ್ದಾಗ ಆ ಪ್ರಸ್ತಾಪ ಕೊಪ್ಪಲಿಲ್ಲ. ಆದರೆ ನಾನು ಈ ದುರ್ಗಕ್ಕೆ ಒಂದು ನಿನ್ನ ಅಲೌಕಿಕ ಅಮೃತ ಮಯವಾದ ರೂಪ ಮಾಧುರ್ಯವನ್ನು ನೋಡಿದ ದಿನ ಉನ್ಮತ್ತನಹಾಗಾಗಿ ಆ ದಿನವೇ ಆತುರದಿಂದ ರಾಜಮಹಿಮೆಯ ಬಳಿ ಹೋಗಿ ಆ ಪ್ರಸ್ತಾಪಕ್ಕೆ ನನ್ನ ಸಮ್ಮತಿಯನ್ನು ಕೊಟ್ಟೆನು, ಆದರೆ ಕಡೆಗೆ ನೀನೊಪ್ಪಲಿಲ್ಲವೆಂದು ಕೇಳಿದೆನು. « ಯುವರಾಜ ! ಹಿಂದೆ ಕಳೆದುಹೋದ ದಿನಗಳ ಹಳೆಯ ಕಥೆಯ.೦ದ ಫಲ ವೇನು ? ನಿಮಗೆ ನನ್ನನ್ನು ಕೊಟ್ಟು ಮದುವೆಯಾಗುವುದು ಅಸಂಭವವೆಂದು
ಪುಟ:ಕೋಹಿನೂರು.djvu/೬೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.