ಐದನೆಯ ಪರಿಬ್ಬಚ wianmmmwwwmammmmmonwa ಡಲ್ಗೊಂಡು ವ್ಯಾಧಿಯುಂಟಾಗಿದೆ. ಇದ್ದಕ್ಕಿದ್ದಹಾಗೆ ನನ್ನ ಹೊಕ್ಕಿಹುಲ್ಲಿ ಬುಕಿ ಬಿದ್ದ ಹಾಗಾಗಿ, ಒಂದು ಕ್ಷಣ ಮಾತ್ರ ಹಾಗಿದ್ದು ಉರಿಯು ನಿಂತು ಹೋಗುತ್ತದೆ. ಇನ್ನು ಮುಂದೆ ಹೀಗಾಗದಹಾಗೆ ನೋಡಿಕೊಳ್ಳುತ್ತೇನೆ ನೀನು ಹೇಳುತಿದ್ದುದನ್ನು ಹೇಳು. ರಾಜಸಮುದ್ರ ಕೆರೆಯ ಕಟ್ಟೆಯಮೇಲೆ ನೀನವನನ್ನು ಒಂದು ತಡವೆ ನೋಡಿದ್ದೆ, ಬಳಿಕ, ಏನು ?” ಎಂದು ಕೇಳಿದಳು, ಅಂಬಾಲಿಕೆಯು ವಿಲಾಸಕುಮಾರಿಯ ಮುಖವನ್ನು ನೋಡಿ ಕ್ಷಣಮಾತ್ರ ಸುಮ್ಮನಿದ್ದು, ಪುನಃ ಹೇಳತೊಡಗಿದಳು ;- ಹಾ, ಸಖಿ ! ಆಗ ನಾನು ಹುಡುಗಿ ! ಪ್ರೇಮವೆಂದರೆ ಏನುತಾನೇ ಕಂಡಿದ್ದೆ ? ಆದರೆ ಅದು ಮೊದಲ್ಗೊಂಡು ರಾತ್ರಿ ಹಗಲೂ ಎಚ್ಚರದಲ್ಲೂ ಸ್ವಪ್ನದಲ್ಲ ಅವನಾತರುಣ ಅರುಣಮೂತಿ ಯನ್ನು ಹೃದಯದಲ್ಲಿಟ್ಟು ಕೊಂಡು ಧ್ಯಾನಮಾಡುತ್ತೇನೆ. ನನ್ನನ್ನು ಮುಟ್ಟ ಬೇಡ ನನ್ನನ್ನು ನೋಡಿದರೆ ಅಲಗಳಿಯುತ್ತಿರು. ಇನ್ನು ಮುಂದೆ ನನ್ನನ್ನು ರಾಜಕುಮಾರಿಯೆಂದು ಕರೆಯಬೇಡ, ಸಖಿ ! ನಿಜವನ್ನು ಹೇಳುತ್ತೇನೆ, ಕೇಳು ಆ ದಿನ ಮೊದಲ್ಗೊಂಡು ನನ್ನಿ ಶರೀರವು ಆ ನೀಚವಂಶದಲ್ಲಿ ಹುಟ್ಟಿರುವ ದೀನನಾದ ಕೃಷಿಕನ ಪ್ರೇಮದಲ್ಲಿ ಪರಿಪುಷ್ಟಿಯಾಗಿದೆ ! ಈ ಪ್ರಾಣವು ಅವರ ಜ್ಞಾಪಕದಿಂದುಳಿದುಕೊಂಡಿವೆ ! ನನ್ನಿ ಶರೀರದಲ್ಲಿ ರುವ ರಕ್ತದ ಪ್ರತಿಯೊಂದು ಬಿಂದುವಿನಲ್ಲಿಯೂ ಅವನ ಮೇಲಿನ ಪ್ರೇಮವು ಸೇರಿಹೋಗಿದೆ ! ಇನ್ನೂ ಕೇಳು ಸಖಿ ! ಆಬೂ ಬೆಟ್ಟದಿಂದ ಹಿಂದಿರುಗಿ ಬರುತಿದ್ದಾಗ ಫಕೀರನ ಮಂದಿರ ದಲಿ ಮೊದಲು ಹನ್ನೆರಡು ವರ್ಷದವನಾಗಿದ್ದ ಹುಡುಗನು, ಇದ್ದಕ್ಕಿದ್ದಹಾಗೆ ಎಚ್ಚರದಲ್ಲೇ ಕನಸು ಕಂಡಹಾಗೆ, ಭುವನಮೋಹನ ಮಹೇಂದ್ರನ ರೂಪದಲ್ಲಿ ಪುನಃ ನನಗೆ ದರ್ಶನವನ್ನು ಕೊಟ್ಟು ನನ್ನ ಕಾಲಲ್ಲಿ ಬಿದ್ದನು, ಪಾರ್ಶ್ವದಲ್ಲಿ ಕಾಜಮಹಿಷಿಯು ನಿಂತಿದ್ದಳು, ನಾನು ಆಶ್ಚರ್ಯದಿಂದಲೂ ಉಲ್ಲಾಸದಿಂದಲೂ ಲಜ್ಜೆಯಿಂದಲೂ ಜ್ಞಾನ ತಪ್ಪಿದವಳಾಗಿ ನೆಲದಮೇಲೆ ಬಿದ್ದೆನು! ಈಗ ನೀನು ಹೇಳು ಸಖಿ ! ಪ್ರಾಣವು ಈ ದೇಹಕ್ಕೆ ಅಂಟಿಕೊಂಡಿರುವವರೆವಿಗೂ ಅವನನ್ನು ಮಶೆಯುವುದಕ್ಕೆ ಹೇಗಾದೀತು ? ಮರುದಿನ, ಕೇಳು ಸಖಿ ! ದಾರಿಯಲ್ಲಿ ಇನ್ನೂ ತುಮಂದಿ ಯವನರು ನಮ್ಮನ್ನು ಆಕ್ರಮಣ ಮಾಡಿದರು. ದೇವಕತ ಯುಳ್ಳಾ ವೀಶ ಯುವಕನು ನಮಗೋಸ್ಕರ ತನ್ನ ಪ್ರಾಣವನ್ನು ಬಿಡಲು ಸಿದ್ದ ನಾಗಿ ಒರು ತರವೆ ಅವನಾ ಅಲರ್ಗಣ್ಣುಗಳಿಂದ ನನ್ನನ್ನು ನೋಡಿ, ಬಕ
ಪುಟ:ಕೋಹಿನೂರು.djvu/೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.