ಹತ್ತನೆಯ ಪರಿಚ್ಛೇದ ಆ ದ್ದನು. ಸ್ವಲ್ಪ ದೂರದಲ್ಲಿ ಯೇ ಛಿನ್ನ ಮುಂಡವಾದ ಕೇಸರಿಸಿ೦ಹನ ಸುಕುಮಾರ ವೀರದೇಹವು ವಸುಮತಿಯ (ಭೂಮಿದೇವಿಯ) ಎದೆಯಮೇಲೆ ಬಿದ್ದಿತು. ಕೇಸರಿತೃಗಾಲಯುದ್ದವು ಮುಗಿಯಿತು, ರಾಜಪೂತ ಯುವರಾಜನ ಭಯಂಕರ ವಾದ ಪಾಪಕ್ಕೆ ಭಯಂಕರವಾದ ಪ್ರಾಯಶ್ಚಿತ್ತವು ಪೂರ್ಣಐಾಯಿತು. ಹಿಂದೂ ವೀರನು ಸಮುಖ ಯುದ್ದದಲ್ಲಿ ಶತ್ರುವಿನ ಶಸ್ತ್ರದಿಂದ ನಶ್ವರವಾದ ನರದೇಹವನ್ನು ಬಿಟ್ಟು ಅನಂತಧಾಮಕ್ಕೆ ಹೊರಟುಹೋದನು. ಹ , ನೆ ಯ ಸ ರಿ ಟೈ ದ. ಅಫಜುಲಖಾನನು ಬಹುದೂರ ಓಡಿ ಹೋಗಿ ಒಂದು ತಡವೆ ಹಿಂದಿರುಗಿ ನೋಡಿದನು. ಒಬ್ಬ ಕುದುರೇ ಸವಾರನು ಮಾತ್ರ ಅವನ ಬೆನ್ನ ಹತ್ತಿ ಬರುತ್ತಿ ದನು. ಖಾನಸಾಹೇಬನು ಮತ್ತಷ್ಟು ವೇಗವಾಗಿ ಓಡಿಹೋಗಿ ತನ್ನ ಅಮ್ಮ ಲ್ಯವಾದ ಪ್ರಾಣವನ್ನು ಕಾಪಾಡಿಕೊಳ್ಳಬೇಕೆಂಬ ಆಸೆಯಿಂದ ಏರುತಗ್ಗು, ಹಳ್ಳ ಕೊಳ್ಳ, ಕಲ್ಲುಮುಳ್ಳು ನೋಡದೆ ಕುದುರೆಯನ್ನು ವಾಯುವೇಗದಿಂದ ಓಡಿಸಲು ಪ್ರಾರಂಭಿಸಿದನು. ಹಾಗೆಯೇ ಸ್ವಲ್ಪ ದೂರ ಹೋಗಿ ಪುನಃ ಹಿಂದಿರುಗಿ ನೋಡಿ ದನು. ಹಿಂದಟ್ಟಿ ತಕ್ಕ ವೇಗದಿಂದಲೇ ಸಮಾಸ ಬಂದಿದ್ದವನ ಮುಖವನ್ನು ನೋಡಿ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಧೈರ್ಯವಂಟಾಯಿತು, ಸವಾರನ ಮುಖವು ಹುಡುಗನ ಮುಖವಾಗಿದ್ದಿತು. ಒಬ್ಬ ಹುಡುಗನೊಂದಿಗೆ ಹೆಣಗಾಡುವುದಕ್ಕೆ ಭಯವೇನೂ ಇರದು. ಹುಡಗನ ಸಹಾಯಕ್ಕೆ ಯಾವಕಡೆಯಿಂದಲೂ ಮತ್ತಾರೂ ಬರಲಾರರು. ಖಾನಸಾಹೇಬನು ನಾಲ್ಕು ಕಡೆಯೂ ಚೆನ್ನಾಗಿ ನೋಡಿ ದನು. ಯಾರೂ ಬರುತ್ತಿರಲಿಲ್ಲ. ನೋಡುತ್ತಿದ್ದ ಹಾಗೆಯೇ ಹುಡುಗನು ಹೆಚ್ಚು ಹತ್ತಿರ ಬಂದನು. ಅಫಜುಲಖಾನನು, “ ಕಾಫರ ಹುಡುಗ ! ಅನ್ಯಾಯವಾಗಿ ನನ್ನ ಕೈಯಿಂದ ಪ್ರಾಣವನ್ನು ಕಳೆದುಕೊಳ್ಳಲು ಬಂದೆ ಏಕೆ ? ೨” ಎಂದನು. ಕಾಫರಹುಡುಗ-ಹುಡುಗನಲ್ಲ, ಮರ್ಖ ! ಚೆನ್ನಾಗಿ ನೋಡು ನಾನು ಹೆಂಗಸು, ಓಡಿ ಹೋಗುವುದು ನಿಲ್ಲಿಸಿ, ಒಂದು ತಡವೆ ಕಾಫರ ಹೆಂಗಸಿನ ಸಂಗಡ ಯುದ್ದ ಮಾಡು.
ಪುಟ:ಕೋಹಿನೂರು.djvu/೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.