ಈ ಪುಟವನ್ನು ಪರಿಶೀಲಿಸಲಾಗಿದೆ

೨೪೨

ಕ್ರಾಂತಿ ಕಲ್ಯಾಣ


“ಹಿಂದೆ ಅಂತಹ ಸಂಬಂಧ ಇದ್ದಿದ್ದರಲ್ಲವೆ ಪುನರಾರಂಭವಾಗುವುದು. ನ್ಯಾಯಾಧೀಶರು ಇಂತಹ ಪ್ರಶ್ನೆಗಳನ್ನು ಕೇಳಬಾರದಾಗಿ ಪುನಃ ಬೇಡುತ್ತೇನೆ.”

ಕ್ರಮಿತನು ಕೃತಕದ ನಗೆ ಹಾರಿಸಿ, “ಸಂಬಂಧವಿರಲಿ, ಇಲ್ಲದಿರಲಿ, ಶರಣರು ದೇವಗಿರಿಗೆ ಯಾತ್ರೆ ಹೋದಾಗ ನೀವು ಮತ್ತು ಕುಸುಮಾವಳಿ ಸಂಗಡ ಹೋದಿರಿ, ಅಲ್ಲವೆ?” ಎಂದು ಪ್ರಶ್ನಿಸಿದನು.

“ಮೊದಲೆ ಗೊತ್ತಾಗಿದ್ದಂತೆ ದೇವಗಿರಿಯ ಒಂದು ಗುಹಾಲಯದ ಜೀರ್ಣ ಚಿತ್ರಗಳ ಉದ್ಧಾರಕ್ಕಾಗಿ ನಾನು ಅಲ್ಲಿಗೆ ಹೋದದ್ದು. ಯಾತ್ರಾದಳದಲ್ಲಿ ಕುಸುಮಾವಳಿ ಇರುವಳೆಂದು ನನಗೆ ತಿಳಿದಿರಲಿಲ್ಲ.”

ಅದೇನೇ ಇರಲಿ, ದೇವಗಿರಿಯ ಒಂದು ಗುಹೆಯಲ್ಲಿ ಕುಸುಮಾವಳಿ ನಿಮಗಾಗಿ ಬಲಿದಾನವಾದಳು. ಹಾವು ಕಚ್ಚಿ ಸ್ಮೃತಿಭಗ್ನವಾಗಿ ನೀವು ಕಲ್ಯಾಣದ ಆರೋಗ್ಯ ಧಾಮಕ್ಕೆ ಹಿಂದಿರುಗಿದಿರಿ. ಅಲ್ಲಿ ನೀವು ಮಧುವರಸನ ಮಗಳು ಲಾವಣ್ಯವತಿಯನ್ನು ನೋಡಿದಿರಿ, ಅಲ್ಲವೆ?”

ಶೀಲವಂತ ಒಪ್ಪಿಕೊಂಡನು.

ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿಯ ನೆನಪಾಗಿರಬೇಕಲ್ಲವೆ?” -ಈ ಪ್ರಶ್ನೆಯಿಂದ ಸ್ತಂಭಿತನಾದ ಶೀಲವಂತ ತಟ್ಟನೆ ಉತ್ತರ ಕೊಡಲಿಲ್ಲ.

ಕ್ರಮಿತನು ಮುಂದುವರಿದು ಹೇಳಿದನು : “ಲಾವಣ್ಯವತಿ ಕುಸುಮಾವಳಿಯರಿಬ್ಬರೂ ಸಮಾನ ರೂಪವತಿಯರು. ಆಕಾರೇಂಗಿತಗಳಲ್ಲಿ ಅವರಿಗೆ ಹೆಚ್ಚು ಹೋಲಿಕೆಯಿದ್ದಿತು. ಒಂದೇ ಮಾದರಿಯ ಉಡಿಗೆ ತೊಡಿಗೆಗಳನ್ನು ಧರಿಸಿದಾಗ ಅವರಲ್ಲಿ ಲಾವಣ್ಯವತಿ ಯಾರು, ಕುಸುಮಾವಳಿ ಯಾರು ಎಂದು ಗುರುತುಹಿಡಿಯಲು ಪರಿಚಿತರಿಗೂ ಕಷ್ಟವಾಗುತ್ತಿತ್ತು, ಎಂದು ಹೇಳುವುದನ್ನು ಕೇಳಿದ್ದೇನೆ. ಇದು ನಿಜವೆ?”

ಇದ್ದ ಅಲ್ಪ ಹೋಲಿಕೆಯನ್ನು ಜನ ಅತಿಶಯವಾಗಿ ಹೇಳುತ್ತಿದ್ದರು. ಅವರಿಬ್ಬರೂ ಒಂದೇ ಮಾದರಿಯ ಉಡುಪು ಧರಿಸಿದ್ದುದನ್ನು ನಾನು ಯಾವಾಗಲೂ ನೋಡಿಲ್ಲ.”

“ಹೋಲಿಕೆ ಇತ್ತೆಂಬುದನ್ನು ನೀವು ಒಪ್ಪುವಿರಲ್ಲವೆ?”
“ಒಪ್ಪುತ್ತೇನೆ.”

“ಆರೋಗ್ಯಧಾಮದಲ್ಲಿ ನೀವು ಮೊದಲಸಾರಿ ಲಾವಣ್ಯವತಿಯನ್ನು ನೋಡಿದಾಗ ನಿಮಗೆ ಕುಸುಮಾವಳಿ ಮೃತಳಾದ ವಿಚಾರ ತಿಳಿದಿರಲಿಲ್ಲ. ನೀವು