ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೪೫


ಕಾದಿದೆಯೆಂದು ನೆನೆಸಿರಲಿಲ್ಲ. ನನಗಾದ ಈ ಅನುಭವ ಬದುಕಿನ ಅಸ್ಥಿರ ಅನಿಶ್ಚಿತತೆಗಳಿಗೆ ನಿದರ್ಶನ. ಬದುಕಿನ ವಿಭವ ಪರಾಭವಗಳನ್ನು ಶಿವನ ಕೊಡುಗೆಯೆಂದು ತಲೆಬಾಗಿ ಮಸ್ತಕದಲ್ಲಿ ಧರಿಸಬೇಕೆಂದು ಶರಣಧರ್ಮದ ಮೊದಲ ಪಾಠ. ಮರ್ತ್ಯದಲ್ಲಿ ರಾಜನು ಆ ಜಗನ್ನಿಯಂತ್ರಣ ತತ್ವದ ಪ್ರತಿಷ್ಠಿತ ಪ್ರತಿನಿಧಿ. ರಾಜಾಜ್ಞೆಯನ್ನು ನಾನು ಶಿವನ ಆಜ್ಞೆಯೆಂದೇ ತಿಳಿದು ಮಸ್ತಕದಲ್ಲಿ ತಳೆದು ಮನ್ನಿಸುತ್ತೇನೆ.

ಆಜ್ಞಾಪತ್ರದಲ್ಲಿ ಆಪಾದಿಸಿರುವಂತೆ ನನ್ನಿಂದ ಯಾವ ಅಪರಾಧವೂ ನಡೆದಿರುವುದಿಲ್ಲ. ಶಿವನು ನನಗೆ ಕೊಟ್ಟ ಆಕಾರೇಂಗಿತಗಳನ್ನು, ಗುರುಕರುಣೆಯಿಂದ ಲಭಿಸಿದ ಕಿಂಚಿದಭಿಜ್ಞತೆಯನ್ನು, ಸ್ತ್ರೀಪುರುಷರನ್ನು ಆಕರ್ಷಿಸುವ ಅಲ್ಪ ಪ್ರಯೋಜನಕ್ಕಾಗಿ ನಾನು ಯಾವಾಗಲೂ ಉಪಯೋಗಿಸಿಲ್ಲ. ಕಾಮೇಶ್ವರಿ ಕುಸುಮಾವಳಿಯರು ಪ್ರಬುದ್ಧ ಶೀಲವಂತ ಸಭ್ಯ ಮಹಿಳೆಯರಾಗಿದ್ದರು. ಸ್ವರ್ಗಸ್ಥರಾದ ಅವರ ಮೇಲೆ ನನ್ನ ಹೆಸರಿನಿಂದ ಈ ಅಪಪ್ರಚಾರ ನಡೆಯುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ.

“ಲಾವಣ್ಯವತಿ ನನ್ನ ವಿವಾಹಿತ ಪತ್ನಿ. ಅವಳನ್ನು ನಾನು ಪ್ರೀತಿಸುವುದು ಧರ್ಮವಿರುದ್ಧವಲ್ಲದ ಸಹಜವರ್ತನೆ. ಮದುವೆಯಾಗುವ ಮೊದಲು ನಾನು ವಂಚನೆಯಿಂದ ಅವಳ ಶೀಲಭಂಗ ಮಾಡಿದನೆಂದು ಅಪಾದಿಸುವುದು ದಾನವೀವರ್ತನೆಯ ಅಧರ್ಮ ಲಜ್ಞಾಹೀನ ನಿದರ್ಶನ. ಅದು ಅಸತ್ಯವೂ ನಿರಾಧಾರವೂ ಆದುದೆಂದು ನ್ಯಾಯಪೀಠದ ಮುಂದೆ ಪ್ರತಿಜ್ಞೆ ಮಾಡಿ ಹೇಳುತ್ತೇನೆ. ಆಜ್ಞಾಪತ್ರದಿಂದ ಆ ಆಪಾದನೆಯನ್ನು ತೆಗೆದುಹಾಕಿ ಚಾಲುಕ್ಯ ಧರ್ಮಾಧಿಕರಣದ ಧರ್ಮ ಸತ್ಯ ನಿಷ್ಠೆಗಳನ್ನು ರಕ್ಷಿಸಬೇಕಾಗಿ ನನ್ನ ಪ್ರಾರ್ಥನೆ.”

ಹೇಳಿಕೆ ಮುಗಿದು ಭಟರು ಶೀಲವಂತನನ್ನು ಸೆರೆಮನೆಗೆ ಕರೆದುಕೊಂಡು ಹೋದಾಗ ಘೋರ ಭೀಭತ್ಸಕೃತ್ಯವೊಂದನ್ನು ಕಂಡು ದಿಗ್ಭ್ರಮೆಗೊಂಡಂತೆ ಕೆಲವು ಕ್ಷಣಗಳು ನ್ಯಾಯಾಲಯದಲ್ಲಿ ಸ್ಮಶಾನಶಾಂತಿ ನೆಲೆಸಿತು. ಬಳಿಕ ಕ್ರಮಿತನು ಆ ಗಭೀರತೆಯನ್ನು ಭೇದಿಸುವಂತೆ ವಿಕಟವಾಗಿ ನಕ್ಕು,

“ಈ ಎರಡು ದಿನಗಳೂ ನ್ಯಾಯಪೀಠ ತನ್ನ ಹೊಣೆಯನ್ನು ದಕ್ಷತೆಯಿಂದ ನಿರ್ವಹಿಸಿತೆಂಬುದು ನಮಗೆಲ್ಲ ಅಭಿಮಾನದ ವಿಚಾರ. ಈ ಸಂತೋಷ ಸಮಯದಲ್ಲಿ ನಿಮ್ಮ ಮೌನಚಿಂತೆ ನನ್ನನ್ನು ಅಚ್ಚರಿಗೊಳಿಸಿದೆ,” ಎಂದು ಮೂದಲಿಸಿ ನುಡಿದನು.

ಕರಣಿಕ ಕಾರ್ಯಕರ್ತರು ಭೀತಿಯಿಂದ ತಲೆಬಾಗಿದರು. ರುದ್ರಭಟ್ಟ ಆತಂಕದಿಂದ ಮಂಚಣನ ಮುಖ ನೋಡಿದನು. ನ್ಯಾಯಾಲಯದಲ್ಲಿ ಮಸಗಿದ್ದ