ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೯೧

ಸಿದ್ದಿಸುವುದೆಂದು ಅವಳು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಉತ್ತೇಜಿತೆಯಾಗಿ ಅವಳು, “ನಿಮ್ಮ ಬಂಧಿಯಾಗಲು ನಾನು ಒಪ್ಪುತ್ತೇನೆ. ನಿಮ್ಮ ಸೆರೆಮನೆಯ ಅಧಿಕಾರಿಗಳನ್ನು ಕರೆಸಿರಿ. ನನ್ನ ತಂದೆ, ಪತಿ, ಮಾವ-ಅವರನ್ನು ಬಂಧಿಸಿರುವ ಶೃಂಖಲೆ ನನ್ನ ಕೈ ಕಾಲುಗಳನ್ನು ಬಂಧಿಸಲಿ. ಸೆರೆಮನೆಯ ವಾಸ ನನ್ನ ತ್ಯಾಗದ ಬಲಿದಾನವಾಗುವುದು,” ಎಂದು ನುಡಿದಳು.

ಬಿಜ್ಜಳನ ಮುಖದಲ್ಲಿ ಮೂಡಿದ್ದ ಸೈರ್ಯದ ಗೆರೆಗಳೂ ಮಿದುನಗೆಯಲ್ಲಿ ಮರೆಯಾದವು. ಕಂಠ ಮೃದುವಾಯಿತು, ಅವನು ಹೇಳಿದನು- “ನಿನ್ನನ್ನು ಬಂಧಿಸಲು ಸೆರೆಮನೆಯ ಅಧಿಕಾರಿಗಳ ಅಗತ್ಯವಿಲ್ಲ, ಲಾವಣ್ಯವತಿ. ನನ್ನ ಹೆಗ್ಗಡತಿಯರು ಆ ಕಾರ್ಯ ಮಾಡುವರು. ಸರ್ವಾಭರಣಭೂಷಿತೆಯಾದ ನಿನ್ನನ್ನು ಹಂಸತೂಲಿಕೆಯ ತಲ್ಪದಲ್ಲಿ ಮೆರೆಸುವರು. ನನ್ನ ಅಂತಃಪುರವಾಸಿನಿಯರಲ್ಲಿ ನೀನು ಅಗ್ರಗಣ್ಯಯಾಗುವೆ. ಬಿಜ್ಜಳನ ಪ್ರೌಢವಯಸ್ಸಿನ ಪ್ರಿಯತಮೆ ಪ್ರೇಯಸಿ ಎನಿಸುವೆ.”

ನುಡಿಯುತ್ತಿದ್ದಂತೆ ಬಿಜ್ಜಳನ ಕಂಠ, ಶೃತಿ ತಪ್ಪಿದ ವೀಣೆಯ ಮಿಡಿತದಂತೆ ಮಧುರವೂ ವಿಕೃತವೂ ಆಗಿ ಕೇಳಿಸಿತು ಲಾವಣ್ಯವತಿಗೆ ಅವನ ಉನ್ನತ್ತ ನೋಟದಲ್ಲಿ ಕಾಮನೆಯ ಕಿಡಿಗಳು ಹಾರುವುದನ್ನು ಅವಳು ಕಂಡಳು. ಅಸಾಮಾನ್ಯರೂಪಿಯಾದ ಅಪ್ಸರೆಯಾಗಿದ್ದಳು ಆಗ ಅವಳು, ಬಿಜ್ಜಳನ ಉದ್ರಿಕ್ತ ಕಣ್ಣುಗಳಿಗೆ.

ಲಾವಣ್ಯವತಿ ಸ್ಥಂಭಿತೆಯಾದಳು. ಅವಳ ವಾಕ್ಯಕ್ತಿ ಉಡುಗಿತು. ಬಿಜ್ಜಳನ ಅತಿಕಾಮಿ ಉಚೃಂಖಲ ವರ್ತನೆಯ ಕಥೆಗಳನ್ನು ಅವಳು ಕರ್ಣಾಕರ್ಣೆಯಾಗಿ ಕೇಳಿದ್ದಳು. 'ಮುಪ್ಪು ಸಮೀಪಿಸಿದಂತೆ ಪ್ರಭುಗಳ ಚಾಪಲ್ಯ ಹೆಚ್ಚುತ್ತಿದೆ, ಚಲುವೆಯರಲ್ಲಿ ಈಗ ಅವರಿಗೆ ಒಂದೇ ಮಂತ್ರ 'ಆರೋಹ ತಲ್ಪಂ...' ಎಂದು ಜನ ಹೇಳುವುದನ್ನು ಅವಳು ಕೇಳಿದ್ದಳು. ತನ್ನ ಸಂದರ್ಶನವೂ ಈ ಮಂತ್ರಪಠಣದಿಂದ ಮುಗಿಯುವುದು ಅಸಂಭವವಲ್ಲವೆಂದು ತಿಳಿದಿದ್ದರೂ, ಶರಣರಿಗೆ ಸಹಜವಾದ ಧೈರ್ಯದಿಂದ ಅವಳು ಒಂಟಿಗಳಾಗಿ ಸಂದರ್ಶನಕ್ಕೆ ಬಂದಿದ್ದಳು. 'ಇದು ನನ್ನ ಅಗ್ನಿಪರೀಕ್ಷೆ ಅದರೊಡನೆ ಬಿಜ್ಜಳನ ಪರೀಕ್ಷೆಯೂ ಆದರೆ ನಷ್ಟವೇನು?' ಎಂದು ಅವಳು ಭಾವಿಸಿದಳು.

ಆ ಸಣ್ಣ ಸಭಾಗೃಹದಲ್ಲೊಂದು ಕಡೆ, ಪೀಠದ ಮೇಲೆ ಬೆಳ್ಳಿಯ ಮಂದಾಸನದಲ್ಲಿ ಕಲಚೂರ್ಯ ರಾಜಲಾಂಛನವಾದ ವೃಷಭದ ಒಂದು ದೊಡ್ಡ ವಿಗ್ರಹ ಚಿನ್ನದ ಮೆರುಗಿನಿಂದ ಫಳಫಳ ಹೊಳೆಯುತ್ತಿತ್ತು. ಕಾಲೊಂದನ್ನು ಮುಂದೆ ಚಾಚಿ, ವಿಜಯ ಗರ್ವದಿಂದ ತಲೆಯೆತ್ತಿ ನೋಡುತ್ತಿರುವಂತೆ ರಚಿತವಾಗಿದ್ದ ಆ ಲೋಹ