ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೩೮೭ ಇದು ನನ್ನ ಕಾಯಕ,' ಎಂದು ಅಣ್ಣನವರು ಹೇಳುತ್ತಾರೆ. "ಪ್ರವಚನ ಕೇಳಲು ಗ್ರಾಮಸ್ಥರು ಹೆಚ್ಚು ಹೆಚ್ಚಾಗಿ ಬರುತ್ತಿರುವರೆ?”ಮಾದರಸರು ಪುನಃ ಪ್ರಶ್ನಿಸಿದರು. “ಮೊದಲೆರಡು ದಿನಗಳು ಹೆಚ್ಚು ಜನರಿರಲಿಲ್ಲವಂತೆ. ಸಮೀಪದ ಗ್ರಾಮಗಳಿಂದ ಜನ ಬರಲು ಈಗ ಪ್ರಾರಂಭವಾಗಿದೆ. ಜನಸಂದಣಿ ದಿನದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರವಚನ ಸಭೆಯ ವ್ಯವಸ್ಥೆಗಾಗಿ ಗುರುಕುಲದ ಅಧ್ಯಾಪಕರು, ಗ್ರಾಮಸ್ಥರು ಒಂದಾಗಿ ಸೇವಾಸಮಿತಿ ರಚಿಸಿಕೊಂಡಿದ್ದಾರೆ. ಹೆಂಗಸರು ಮಕ್ಕಳಿಗೆ ಮಂಡಕ್ಕಿ ಪಾನಕ ಹಂಚುವ ಏರ್ಪಾಡು ನಡೆದಿವೆ.” ಕೂಡಲ ಸಂಗಮದಲ್ಲಿ ಬಸವಣ್ಣನವರ ದಿನಚರಿ ಜೀವನದ ಇನ್ನೂ ಅನೇಕ ವಿವರಗಳನ್ನು ಅವರು ಅಪ್ಪಣ್ಣನಿಂದ ತಿಳಿದುಕೊಂಡರು. ಕೊನೆಗೆ ಚೆನ್ನಬಸವಣ್ಣನವರು ಅಪ್ಪಣ್ಣನನ್ನು ವಿಶ್ರಾಂತಿಗಾಗಿ ಮಹಮನೆಯ ಅತಿಥಿಶಾಲೆಗಾಗಿ ಕಳುಹಿಸಿದರು. ಬಸವಣ್ಣನವರು ಉತ್ತರರೂಪವಾಗಿ ಕಳುಹಿಸಿದ್ದ ವಚನದ ಪರಿಶೀಲನೆ ಆಮೇಲೆ ನಡೆಯಿತು. ಸಕಲೇಶ ಮಾದರಸರು ಹೇಳಿದರು : “ಅನ್ನದ ಹಂಗಿಗಾಗಿ ಬದುಕುವ ಜೋಳವಾಳಿಯಲ್ಲ ನಾನು. ಸಮಯಾಚಾರಕ್ಕಾಗಿ ಪ್ರಾಣಗಳನ್ನಾದರೂ ತ್ಯಜಿಸಲು ಸಿದ್ಧನಾದ ವೇಳೆಯಾಳು. ವಿಪತ್ತು ಎದುರಿಗೆ ನಿಂತಾಗ ಹೆದರಿ ಓಡುವ ಹೇಡಿಯಲ್ಲಿ ನಾನು. ಮರಣವೇ ಮಹಾನವಮಿ ಎಂದು ತಿಳಿದಿರುವ ಶರಣ ಎಂದು ಬಸವಣ್ಣನವರ ವಚನದ ವಾಚ್ಯಾರ್ಥ. ಬಿಜ್ಜಳನ ದಬ್ಬಾಳಿಕೆಯನ್ನು ನಾವು ಪ್ರಾಣಪಣವಾಗಿ ಪ್ರತಿಭಟಿಸ ಬೇಕೆಂದು ಬಸವಣ್ಣನವರು ಹೇಳಿದ್ದಾರೆ. ಪ್ರತಿಭಟನೆ ಯಾವ ರೂಪತಾಳಬೇಕೆಂದು ನಿರ್ಧರಿಸಿಕೊಳ್ಳುವುದು ನಮ್ಮ ಹೊಣೆ. ಕಲ್ಯಾಣದಲ್ಲಿಯೇ ಇದ್ದು ಹೋರಾಟ ನಡೆಸುವುದೆ, ಅಥವಾ ನಗರವನ್ನು ತ್ಯಜಿಸಿ ಆಯಕಟ್ಟಿನ ಸ್ಥಳದಲ್ಲಿ ನಿಂತು ಹೋರಾಟ ನಡೆಸುವುದೇ, ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ.” ಚೆನ್ನಬಸವಣ್ಣನವರು ಹೇಳಿದರು : “ಮರಣವೇ ಮಹಾನವಮಿ ಎಂಬ ಆರ್ಯಸತ್ಯವನ್ನು ಶರಣರೆಲ್ಲ ಒಪ್ಪುತ್ತಾರೆ. ನಮ್ಮ ಪಾಲಿಗೆ ಮೃತ್ಯುವು ಭಯ ಹುಟ್ಟಿಸುವ ಬೀಭತ್ಸ ಅಂತ್ಯವಲ್ಲ. ಸಾರ್ಥಕ ಜೀವನದ ಸಾರ್ಥಕ ಪರಿಣತಿ. ಮನೆಗೆ ಬಂದ ಸನ್ಮಾನ್ಯ ಅತಿಥಿಯಂತೆ ನಾವು ಮೃತ್ಯುವನ್ನು ಸ್ವಾಗತಿಸಿ ಸತ್ಕರಿಸುತ್ತೇವೆ. ಆದರೆ ಅದಕ್ಕೆ ಮೊದಲು ಜೀವನದ ಸಾರ್ಥಕತೆಗಾಗಿ ನಾವು ಮಾಡಬೇಕಾದ ಕರ್ತವ್ಯವೊಂದಿದೆ. ಇನ್ನೆರಡು ದಿನಗಳಲ್ಲಿ ಕಲ್ಯಾಣ ಮಹಾನಗರ ಶರಣರ ಪಾಲಿಗೆ ಮೃತ್ಯುಪಂಜರವಾಗುವುದು. ನಗರದ ಶೈವಮಠಗಳನ್ನೆಲ್ಲ ನಾಶಮಾಡುವುದು