ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦೬ ಕ್ರಾಂತಿ ಕಲ್ಯಾಣ ಶರಣರಿಗೆ ಇರಲಿಲ್ಲವೆಂಬುದು ಸ್ಪಷ್ಟವಾಗಿದೆ. ಬಿಜ್ಜಳನು ಜೀವಿಸಿದ್ದಿದ್ದರೆ ನಾವು ಎದುರಿಸಬೇಕಾಗಿದ್ದ ಕಷ್ಟಗಳಿಗಿಂತ ಹೆಚ್ಚಿನ ಕಷ್ಟಗಳನ್ನು ಬಿಜ್ಜಳನ ಮರಣದ ಫಲವಾಗಿ ಮುಂದೆ ನಾವು ಅನುಭವಿಸಬೇಕಾಗುತ್ತದೆ. ಆಗಲೇ ಮಾಧವನಾಯಕನು ಬಿಜ್ಜಳನ ಸಹೋದರ ಕರ್ಣದೇವನನ್ನು ಬಂಧಿಸಿಟ್ಟಿದ್ದಾನೆ. ಕುಮಾರ ಸೋಮೇಶ್ವರನೂ ಅವನ ಸಹೋದರರೂ ಮಂಗಳವೇಡೆಯಿಂದ ಕಲ್ಯಾಣಕ್ಕೆ ಹಿಂದಿರುಗಿದಾಗ ಸರ್ವಾಧಿಕಾರಿ ಪದವಿಗಾಗಿ ಹೋರಾಟ ಪ್ರಾರಂಭವಾಗುವುದು. ಎರಡೂ ಸೈನ್ಯಗಳ ಘರ್ಷಣೆಯಲ್ಲಿ ಕಲ್ಯಾಣ ಹಾಳಾಗುವುದು. ಶರಣರು ಮಡಿಯುವರು. ಅವರನ್ನು ರಕ್ಷಿಸಲು ಪ್ರಯತ್ನಿಸುವುದು ಉರಿಯುವ ಬೆಂಕಿಯಲ್ಲಿ ಹಾರಿಬಿದ್ದಂತೆ.” * ಮಾಚಿದೇವರ ನುಡಿಗಳಿಂದ ಗಣಾಚಾರಿ ಯೋಧರ ಉತ್ಸಾಹ ಕುಗ್ಗಲಿಲ್ಲ. “ಅದು ಎಂತಹ ಕಠಿಣ ಕಾರ್ಯವೇ ಆಗಿರಲಿ, ಒಂದು ಸಾರಿ ನಾವು ಪ್ರಯತ್ನಿಸಿ ನೋಡುವವು. ದಯಮಾಡಿ ಅಣ್ಣನವರು ಅನುಮತಿ ಕೊಡಬೇಕು,” ಎಂದು ಅವರು ಮತ್ತೆ ಬಿನ್ನವಿಸಿಕೊಂಡರು. ಮಾಚಿದೇವರು ಕೊಂಚ ಹೊತ್ತು ಯೋಚಿಸುತ್ತಿದ್ದು, “ಅನುಮತಿ ಕೊಡುತ್ತೇನೆ. ನಗರದ ಪರಿಸ್ಥಿತಿ ಏನಾಗುವುದೆಂಬುದನ್ನು ಎರಡು ದಿನ ಕಾದು ನೋಡಿ ಅನಂತರ ನೀವು ಹೋಗಬೇಕು,” ಎಂದರು. ಯೋಧರು ಒಪ್ಪಿದರು. ಪರಿಚಯ ಸಭೆ ಮುಗಿಯಿತು. ಆ ದಿನ ಅಪರಾಹ್ನ ಶರಣೆಯರಿಗೆ ಗೊತ್ತಾಗಿದ್ದ ಮಂಟಪದಲ್ಲಿ ಗಂಗಾಂಬಿಕೆ ನೀಲಲೋಚನೆಯರು ಆ ವಿಚಾರವಾಗಿ ಮಾತಾಡುತ್ತಿದ್ದರು. ನೀಲಲೋಚನೆ ಹೇಳಿದಳು : “ಅಣ್ಣನ ಕೊಲೆಯ ಸುದ್ದಿ ಕೇಳಿದಾಗಿನಿಂದ ನನ್ನ ಮನಸ್ಸು ತಳಮಳ ಗೊಂಡಿದೆ. ಅಂತ್ಯ ದರ್ಶನಕ್ಕಾಗಿ ಕಲ್ಯಾಣಕ್ಕೆ ಹೋಗಿಬರಲೇ ಎಂದು ಯೋಚಿಸುತ್ತಿದ್ದೇನೆ. ಅಣ್ಣ ಬದುಕಿದ್ದಾಗ ಮಾಡದಿದ್ದ ಕಾರ್ಯವನ್ನು ಈಗೇಕೆ ಮಾಡಬಾರದು ? ಕರ್ಣದೇವನ ಕಾಲುಗಳ ಮೇಲೆ ಬಿದ್ದು ಶರಣರನ್ನು ಬಿಟ್ಟು ಕೊಡುವಂತೆ ಕೇಳುತ್ತೇನೆ. ಕಲ್ಯಾಣದಲ್ಲಿ ಉಳಿದಿರುವ ಶರಣರನ್ನು ಸುರಕ್ಷಿತವಾಗಿ ಹೊರಗೆ ಕರೆತರುತ್ತೇನೆ. ಇಲ್ಲವೆ ಆ ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡುತ್ತೇನೆ.” ಇಷ್ಟೆಲ್ಲ ಸಾಹಸ ಹೆಂಗಸಿಗೆ ಸಾಧ್ಯವಲ್ಲವೆಂದು ಗಂಗಾಂಬಿಕೆಗೆ ತಿಳಿದಿತ್ತು. ಆದರದನ್ನು ನೀಲಲೋಚನೆಗೆ ತಿಳಿಯಪಡಿಸುವುದು ಹೇಗೆ ? ಅಣ್ಣನ ದುರಂತ ಮರಣದಿಂದ ಈಗವಳು ಉದ್ರಿಕೆಯಾಗಿದ್ದಾಳೆ. ಹೆಣ್ಣು ಏನನ್ನು ಮಾಡಬಲ್ಲಳು, ಏನು ಮಾಡಲಾರಳು, ಎಂಬ ಪರಿಜ್ಞಾನ ಅಳಿದಿದೆ ಅವಳಲ್ಲಿ. ಶರಣರ ರಕ್ಷಣೆಯಲ್ಲಿ ಬಲಿದಾನವಾಗುವ ಪರಮೋದ್ದೇಶ ಅವಳನ್ನು ಪ್ರಚೋದಿಸುತ್ತಿದೆ. ಎಂದು ಗಂಗಾಂಬಿಕೆ