ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ဂC ಕ್ರಾಂತಿ ಕಲ್ಯಾಣ ತಿರುಗಿ, “ಗಂಗಾದೇವಿಯವರನ್ನೇಕೆ ಸಂಗಡ ಕರೆತರಲಿಲ್ಲ, ಅಣ್ಣ ?” ಎಂದು ಕೇಳಿದಳು. - “ಅವಸರ ಪ್ರವಾಸದ ಆಯಾಸ ಸಹಿಸುವ ಶಕ್ತಿ ಈಗವಳಿಗಿಲ್ಲ, ಅಕ್ಕನವರೆ. ಆರೋಗ್ಯ ಸರಿಯಾಗಿಲ್ಲದೆ ಈಗೆರಡು ದಿನಗಳಿಂದ ಹಾಸಿಗೆ ಹಿಡಿದು ಸಮೀಪ ಗ್ರಾಮದ ಗೌಡರ ಮನೆಯಲ್ಲಿದ್ದಾಳೆ,” ಎಂದು ಮಾರಯ್ಯ ಉತ್ತರಿಸಿದರು. ಶಿಬಿರದ ಗಣಾಚಾರಿ ನಾಯಕನು ಅಪರಿಚಿತರಿಬ್ಬರನ್ನು ಸಂಗಡ ಕರೆತರುತ್ತಿರುವುದನ್ನು ಕಂಡು ನಾಗಲಾಂಬೆ ಅಲ್ಲಿಂದ ಸರಿದಳು. ಅಪರಿಚಿತರಲ್ಲೊಬ್ಬನ ಕಪಿನಿ ಅಂಗವಸ್ತ್ರಗಳು, ನೀಳವಾದ ಜಟೆ, ಗಡ್ಡ, ಕೈಯಲ್ಲಿ ಹಿಡಿದಿದ್ದ ಕಮಂಡಲು, ಕಂಕುಳಲ್ಲಿದ್ದ ಯೋಗದಂಡ, ಇವು ಅವನು ಯಾವುದೋ ವಿಶಿಷ್ಟ ಸಂಪ್ರದಾಯದ ಶೈವಮತಿ ಎಂಬುದನ್ನು ತಿಳಿಸುತ್ತಿತ್ತು. ಸಂಗಡಿದ್ದ ಯುವಕನು ಅವನ ಸೇವಕನೋ ಅಂತೇವಾಸಿಯೋ ಆಗಿದ್ದನು. “ಇವರು ಸಿದ್ದರಾಮೇಶ್ವರ ಶಿವಯೋಗಿಗಳನ್ನು ನೋಡಲು ಬಂದಿದ್ದಾರೆ, ಅಣ್ಣ” ಎಂದು ನಾಯಕನು ಪರಿಚಯ ಹೇಳಿದನು. ಶೈವಯತಿ ಸಿದ್ದರಾಮೇಶ್ವರರಿಗೆ ವಂದಿಸಿ, “ನಿಮಗೆ ನನ್ನ ನೆನಪಿದೆಯೆ, ಅಣ್ಣನವರೇ?” ಎಂದು ಕೇಳಿದನು. ಸಿದ್ಧರಾಮೇಶ್ವರರು ಉತ್ತರ ಕೊಡಲಿಲ್ಲ. ಅವರ ತೀಕ್ಷ್ಮ ದೃಷ್ಟಿ ಅಗ್ನಿಜ್ವಾಲೆಯಂತೆ ಹೊಸಬನ ಮೇಲೆ ಬಿದ್ದಿತ್ತು. ಮಾಚಿದೇವರು ಅವರನ್ನು ಕಂಡು ಅಚ್ಚರಿಯಿಂದ, “ಕೆಲವು ದಿನಗಳ ಹಿಂದೆ ಮಹಮನೆಯಲ್ಲಿದ್ದ ಬ್ರಹೇಂದ್ರ ಶೀವಯೋಗಿಗಳಲ್ಲವೆ ನೀವು? ನಿಮ್ಮ ಸಂಗಡಿರುವವನು ನಿಮ್ಮ ಅಂತೇವಾಸಿ ಹರೀಶ ರುದ್ರ !” ಎಂದರು. ಅಪರಿಚಿತ ಯತಿ ಕೃತಕ ನಗೆ ಬೀರಿ ತಲೆಯಾಡಿಸಿ ಹೇಳಿದನು : “ನಾನು ಬ್ರಹೇಂದ್ರ ಶಿವಯೋಗಿಯಲ್ಲ, ಮಾಚಿದೇವಯ್ಯನವರೆ. ಅವನ ಅವಳಿ ಸಹೋದರ. ಇಬ್ಬರೂ ಏಕಕಾಲದಲ್ಲಿ ದೀಕ್ಷೆ ತೆಗೆದುಕೊಂಡೆವು. ಈಗ ಕೆಲವು ದಿನಗಳ ಹಿಂದೆ ನನ್ನ ಸಹೋದರ ಕಲ್ಯಾಣಕ್ಕೆ ಹೋಗುವುದಾಗಿ ಹೇಳಿ ಆಶ್ರಮ ಬಿಟ್ಟವನು ಇದುವರೆಗೆ ಹಿಂದಿರುಗಿಲ್ಲ. ಹುಡುಕುತ್ತಾ ನಾವಿಲ್ಲಿಗೆ ಬಂದೆವು. ಅವನ ವಿಚಾರ ನಿಮಗೇನಾದರೂ ತಿಳಿದಿದೆಯೆ?” ವೇಷವಿನ್ಯಾಸಗಳಲ್ಲಿ ಬ್ರಹ್ಮಂದ್ರ ಶೀವಯೋಗಿಯಂತೆ ಕಂಡರೂ ಅವನೇ ಬೇರೆ, ಇವನೇ ಬೇರೆ ಎಂದು ಮಾಚಿದೇವರು ತಿಳಿದರು. ನಡೆ ನುಡಿ ಕಂಠಗಳಲ್ಲಿ ಸಾಕಷ್ಟು ವ್ಯತ್ಯಾಸವಿತ್ತು.