ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೨೭ ಕೇಳು ಕೂಡಲ ಸಂಗಮದೇವಾ. ಮರಣವೇ ಮಹಾನವಮಿ !” “ವಿಪತ್ತು ಎದುರಾದಾಗ ಹೆದರಿ ಓಡುವುದರಿಂದ ಧೈರ್ಯವಾಗಿ ನಿಂತು ಪರಿಸ್ಥಿತಿಯನ್ನು ಎದುರಿಸುವುದು ಶರಣನ ಕರ್ತವ್ಯವೆಂದು ಸ್ಪಷ್ಟವಾಗಿ ತಿಳಿಸಿದೆ. ಮೃತ್ಯು ಎದುರಾದರೂ ಕಲ್ಯಾಣವನ್ನು ಬಿಡಲಾಗದೆಂದು ಹೇಳಿದೆ. ರಾಜನಿಂದ ನಿರ್ವಾಸಿತನಾಗಿ, ರಾಜಧಾನಿಯಿಂದ ದೂರವಾದ ಈ ಅಪ್ರಸಿದ್ದ ಗ್ರಾಮದ ಗುರುಕುಲದಲ್ಲಿ ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಂತೆ ಬದುಕು ನಡೆಸುತ್ತಿರುವ ನಾನು ಇದಕ್ಕಿಂತ ಹೆಚ್ಚಿಗೆ ಮಾಡುವುದೇನಿದೆ? ಮೂರು ದಿನಗಳ ಹಿಂದೆ, ತಮ್ಮ ಪೂರ್ವ ನಿರ್ಧಾರದಂತೆ ಶರಣರು ಕಲ್ಯಾಣವನ್ನು ತ್ಯಜಿಸಿ ವಲಸೆ ಹೊರಟ ಸುದ್ದಿ ಕೇಳಿದಾಗ ನನ್ನ ಅಂತರಂಗ ಅಳುಕಿತು, ಭವಿಷ್ಯದ ಭೀತಿಯಿಂದ. “ಶರಣರು ಕಲ್ಯಾಣವನ್ನು ಬಿಟ್ಟ ದಿನವೇ ಬಿಜ್ಜಳರಾಯರ ಕೊಲೆ ನಡೆದದ್ದು ನಮ್ಮ ದುರಾದೃಷ್ಟ. ಈ ರಾಜಕೀಯ ಘಟನೆಯಲ್ಲಿ ಶರಣರ ಪಾತ್ರವೇನು? ಹತ್ಯೆ ನಡೆಯುವುದೆಂದು ಮೊದಲೇ ತಿಳಿದು ಅವರು ವಲಸೆ ಹೊರಟರೆ? ಇವೇ ಮುಂತಾದ ಪ್ರಶ್ನೆಗಳು ಈ ಸಂಬಂಧದಲ್ಲಿ ಸಹಜವಾಗಿ ಉದ್ಭವಿಸುತ್ತವೆ. ಇವುಗಳಿಗೆ ಸಮರ್ಪಕವಾದ ಉತ್ತರ ಕೊಡಲು ಶರಣರು ಸಿದ್ದರಾಗಬೇಕು. ಧಾರ್ಮಿಕ ಹಿತಾಸಕ್ತಿಗಳ ಸಾಧನೆಗಾಗಿ ಬಿಜ್ಜಳರಾಯರ ಸರ್ವಾಧಿಕಾರವನ್ನು ಕೊನೆಗಾಣಿಸುವ, ಆ ಸ್ಥಾನದಲ್ಲಿ ಚಾಲುಕ್ಯ ಪ್ರಭುತ್ವವನ್ನು ಪುನಃಪ್ರತಿಷ್ಠಿಸುವ ಉದ್ದೇಶ ಶರಣರಿಗೆ ಯಾವಾಗಲೂ ಇರಲಿಲ್ಲವೆಂದು ನಾನು ದೃಢವಾಗಿ ಹೇಳುತ್ತೇನೆ. ಬಿಜ್ಜಳರಾಯರು ನಮಗೆ ತಿಳಿಯದ ಯಾವುದೋ ರಾಜಿಕ ಸಂಚಿನ ಫಲವಾಗಿ ಕೊಲೆಯಾದರೆಂದು ನನ್ನ ವಿಶ್ವಾಸ. ಬಿಜ್ಜಳರಾಯರ ವಿರುದ್ಧ ಇಂತಹ ಸಂಚು ನಡೆಯುತ್ತಿತ್ತೆಂಬುದು ಎಲ್ಲರಿಗೂ ತಿಳಿದಿತ್ತು. ಶರಣರು ವಲಸೆ ಹೊರಟ ದಿನವೇ ಈ ಕೃತ್ಯ ನಡೆದದ್ದು ಒಂದು ಕಾಕತಾಳೀಯ ಘಟನೆ. ಇದರಿಂದ ಒದಗಬಹುದಾದ ದುಷ್ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ರಾಜಕೀಯದಿಂದ ಯಾವಾಗಲೂ ದೂರವಾಗಿರಲು ಶರಣರು ಈಗ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾಗಿದೆ. ಅದಕ್ಕೆ ಬೇಕಾದ ಶಕ್ತಿ ಸಂಯಮಗಳನ್ನು ಕೂಡಲ ಸಂಗಮದೇವನು ಅವರಿಗೆ ಕರುಣಿಸಲಿ. ಈ ವಿಷಾದಕರ ದುಃಖಪೂರ್ಣ ಪ್ರಸಂಗದಲ್ಲಿ ನನ್ನ ಮನವಿಯಿದುನಿಮ್ಮ ಬಂಟರ ಬಂಟ ನಾನಯ್ಯ, ನಿಮ್ಮ ಲೆಂಕರ ಲೆಂಕ ನಾನಯ್ಯ