ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೬೩ ಹರಡಿತು. ಅನೇಕ ಮಂದಿ ಪದಾತಿಗಳು ಮಲಗಿದ್ದಂತೆಯೇ ಹತರಾದರು. ಕುದುರೆಗಳನ್ನು ಸಜ್ಜುಗೊಳಿಸುತ್ತಿದ್ದಂತೆ ರಾಹುತರನೇಕರು ಮಡಿದರು. ಸಾರಥಿಯನ್ನು ಹುಡುಕುತ್ತಿದ್ದ ರಥಿಕರಿಗೆ ಗಣಾಚಾರಿ ಯೋಧರ ಕತ್ತಿಗಳು ಮೃತ್ಯುವಾದವು. ಗಣಾಚಾರಿ ಯೋಧರು ಶೌರ್ಯ ಸಾಹಸಗಳಿಂದ ಮುನ್ನುಗ್ಗಿ ಶಿಬಿರದ ನಡುವೆ ಇದ್ದ ಮಾಧವ ನಾಯಕನ ಗೂಡಾರವನ್ನು ಸುತ್ತುಗಟ್ಟಿದರು. ಆಗ ತಾನೆ ಎಚ್ಚೆತ್ತು ಕಣ್ಮರೆಸಿಕೊಳ್ಳುತ್ತಿದ್ದ ಮಾಧವ ನಾಯಕನು, ಗಲಭೆಯ ಸದ್ದು ಕೇಳಿ, ತಟ್ಟನೆ ಎದ್ದು ಕತ್ತಿ ಹಿಡಿದು ಹೊರಗೆ ಬಂದನು. ಗಣಾಚಾರಿ ಯೋಧರ ಒಂದು ತಂಡ ಅವನಿಗೆ ಎದುರಾಯಿತು. ಸ್ವಯಂ ಮಾಚಿದೇವರು ಅದರ ಮುಂದಾಳಾಗಿದ್ದರು. ಗಣಾಚಾರಿ ನಾಯಕನೂ ಚೆನ್ನಬಸವಣ್ಣನವರೂ ಸಂಗಡಿದ್ದರು. ಮಾಧವ ನಾಯಕನನ್ನು ನೋಡುತ್ತಲೆ ಮಾಚಿದೇವರು, “ಕಲಿದೇವರ ದೇವ ಉಘ ಉಘ !” ಎಂದು ಜಯಕಾರ ಮಾಡಿ ಕತ್ತಿಯನ್ನು ಬೀಸುತ್ತ ಮೇಲೆ ಬಿದ್ದರು. ಶರಣರ ನಾಶಕ್ಕಾಗಿ ಪಣ ತೊಟ್ಟಿದ್ದ ಮಾಧವ ನಾಯಕನ ವಿಚಾರವನ್ನು ತನ್ನೊಬ್ಬರಿಗೆ ಬಿಡಬೇಕೆಂದು ಮಾಚಿದೇವರು ಮೊದಲೇ ಗಣಾಚಾರಿ ನಾಯಕನಿಗೆ ಹೇಳಿದ್ದರು. ಅದರಂತೆ ಗಣಾಚಾರಿ ಯೋಧರು ಮಾಧವ ನಾಯಕನ ಸಹಾಯಕ್ಕೆ ಬಂದ ಶಿಬಿರ ರಕ್ಷಕರನ್ನು ಹಿಂದಕ್ಕಟ್ಟಿ ಮಾಚಿದೇವ ಮಾಧವ ನಾಯಕರ ಕತ್ತಿ ಕಾಳಗಕ್ಕೆ ಎಡೆಮಾಡಿಕೊಟ್ಟರು. ಶಸ್ತ್ರಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಜಂಗಮದೀಕ್ಷೆ ಪಡೆದು ಇಪ್ಪತ್ತು ವರ್ಷಗಳು ಕಳೆದಿದ್ದರೂ ಮಾಚಿದೇವರು ಖಡ್ಡಯುದ್ದದ ವರಿಸೆ ಪಟ್ಟುಗಳನ್ನು ಮರೆತಿರಲಿಲ್ಲ. ಕಾದಿಟ್ಟ ಆಪದ್ಧನದಂತೆ ಅದು ಅವರಿಗೆ ನೆರವಾಯಿತು. ಕೌಶಲದಿಂದ ಅವರು ಕಾಳಗವನ್ನು ಮೊದಲು ಮಾಡಿದರು. ಜಂಗಮವೇಷದ ವೃದ್ದಯೋಧನೊಬ್ಬನು ತನ್ನೊಡನೆ ಸೆಣೆಸಲು ಮುಂದಾದುದನ್ನು ಕಂಡು ಕ್ಷಣಕಾಲ ಸ್ತಬ್ಬನಾಗಿದ್ದ ಮಾಧವ ನಾಯಕನು, ಆಕ್ರಮಣದ ತೀವ್ರತೆಯಿಂದ ಚಮತ್ಕತನಾಗಿ ಮಿಂಚಿನಂತೆ ಹಾರಿ ಕತ್ತಿಯಾಡಿಸುತ್ತ ಪ್ರತಿಭಟಿಸಿದನು. ಪಟ್ಟಿಗೆ ಪಟ್ಟು ವರಿಸೆಗೆ ವರಿಸೆ, ಈ ಅನುಕ್ರಮದಲ್ಲಿ ಕೊಂಚ ಕಾಲ ಕಾಳಗ ನಡೆಯಿತು. ಕೊನೆ ಕೊನೆಗೆ ಮಾಚಿದೇವರ ಕೈಚಳಕ ಹೆಚ್ಚಿತು. “ಉಫ್ } ಉಘ! ಕಲಿದೇವರ ದೇವ !” ಎಂದು ಬೊಬ್ಬಿಡುತ್ತ ಅವರು ಮುನ್ನುಗ್ಗಿ ಕತ್ತಿಯಿರಿದಾಗ ಮಾಧವ ನಾಯಕನು ಆಹತನಾಗಿ ಕೆಳಗುರುಳಿದನು. ಅವನ ಕೊನೆ ಸಮೀಪಿಸಿದಂತೆ ಕಂಡಿತು. ಅಷ್ಟರಲ್ಲಿ ಶಿಬಿರದ ಮತ್ತೊಂದು ಕಡೆಯಿಂದ ತಮ್ಮ ನಾಯಕನ ರಕ್ಷಣೆಗಾಗಿ