ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಡೆಯ ನಾಲ್ಕು ಮಾತು ೪೮೭ ಆಂದೋಳನಗಳಿಗೂ, ಪರಿಪರಿಯ ಅತ್ಯಾಚಾರ ಪರಂಪರೆಗೂ ದಾರಿಯನ್ನು ತೋರಿಸಿಕೊಟ್ಟು ಜನಾಂಗವನ್ನು ಅಶಾಂತಿಗೂ ನಾನಾ ಕಷ್ಟಗಳಿಗೂ ಈಡುಮಾಡಿತು.” “....ಶಾಸನಗಳಲ್ಲಿ ಬಿಜ್ಜಳನ ರಾಜ್ಯ ಸಂಪಾದನೆಯ ವಿಧಾನವನ್ನು ಹೀಗೆ ವಿವರಿಸಿದೆ : ಆ ಪೆರ್ಮಾಡಿನೃಪಾಳಂಗಾಪಾದಿತ ಸಕಲ ಕುಲತಲೋರ್ವಿ ರಾಜ್ಯಂ ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನಾದನಾ ಬಿಜ್ಜನೃಪಂ' ಈ ಕಂದಪದ್ಯದಲ್ಲಿಯ 'ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನ್” ಎಂದು ಬಿಜ್ಜಳನನ್ನು ವಿಶ್ಲೇಷಿಸುವ ಪದವನ್ನು ನಾವು ಲಕ್ಷಿಸಬೇಕು. ಇದರಲ್ಲಿ ಬಿಜ್ಜಳನು ಚಾಲುಕ್ಯ ಮನೆತನದ ಅನೇಕ ರಾಜಪುತ್ರರನ್ನು ಕೊಲೆಮಾಡಿದನೆಂದು ಸ್ಪಷ್ಟವಾಗಿ ಹೇಳಿದೆ. ಈ ಕೊಲೆಗಡುಕನ ಕ್ರೂರ ಖಡಕ್ಕೆ ಸ್ವತಃ ಮುಮ್ಮಡಿ ತೈಲಪನೂ ಅವನ ಬಾಂಧವರೂ ಆಹುತಿಯಾಗಿರಬೇಕು.” ಕರ್ನಾಟಕದ ಕಲಚುರಿಗಳು” ಶ್ರೀ ದೇಸಾಯಿ ಪಾಂಡುರಂಗರಾಯರ, ಎಂ.ಎ. ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಜೂನ್-ಡಿಸೆಂಬರ್ ೧೯೫೩ ಈ ಉಲ್ಲೇಖಗಳಿಂದ ಚಾಲುಕ್ಯ ಇತಿಹಾಸದಲ್ಲಿ ಕಲಚೂರ್ಯ ಅಂತರಾಯ ಮತ್ತು ಅದರ ಮುಖ್ಯವ್ಯಕ್ಕಿ ಬಿಜ್ಜಳನ ಬಗೆಗೆ ಇತಿಹಾಸಕಾರರ ಅಭಿಪ್ರಾಯವೇನೆಂಬುದನ್ನು ಸ್ಕೂಲವಾಗಿ ತಿಳಿಯಬಹುದು. ವಿಲಾಸಾಸಕ್ತನಾಗಿದ್ದ ಮುಮ್ಮಡಿ ತೈಲಪನ ಕಾಲದಲ್ಲಿ ಪ್ರಾರಂಭವಾದ ಈ ರಾಜ್ಯಾಪಹಾರ ಹಂತ ಹಂತವಾಗಿ ಮುಂದುವರಿದು ಬಿಜ್ಜಳನನ್ನು ಕೌಲ್ಯ, ಹಿಂಸೆ, ಅತ್ಯಾಚಾರಗಳ ಅಧಃಪಾತಾಳಕ್ಕೆ ತಳ್ಳಿ ಕಲ್ಯಾಣದಲ್ಲಿ ರಕ್ತದ ಕೋಡಿ ಹರಿಸಿತು. ಚಾಲುಕ್ಯರಾಜ್ಯದ ಅವಸಾನಕ್ಕೆ ಕಾರಣವಾದ ಈ ದುರಂತ ಕತೆಯನ್ನು ಈ ಕಾದಂಬರೀ ಮಾಲೆಯ ಕೊನೆಯ ಮೂರು ಭಾಗಗಳಲ್ಲಿ ಪುನರ್ಘಟಿಸಲು ಪ್ರಯತ್ನಿಸಿದೆ. - ಬಿಜ್ಜಳನ ಅನಂತರ ನಾಲ್ಕು ನೂರು ವರ್ಷಗಳು ಕಳೆದ ಮೇಲೆ ಯೂರೋಪ್ ಖಂಡದಲ್ಲಿ ಪ್ರಾರಂಭವಾದ ಸಾಹಿತ್ಯ ವಾಸ್ತುಶಿಲ್ಪ ಮತ್ತು ಕಲೆಗಳ ಪುನರುಜ್ಜಿವನಗಳ ನವಯುಗದ (Renaissance) ಪ್ರವರ್ತಕರಲ್ಲಿ ಒಬ್ಬನಾದ ಇರಾಸ್‌ಮಸ್‌ನು ತನ್ನ ಕಾಲದ ಅರಸರನ್ನು ಕುರಿತು, ".... The Kings are eagles who fatten their eaglets on the flesh ofthe innocent birds. At this scream ofthe eagle, the people tremble, the senate yields, the nobility crings, the judges concur,