ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 39 ಭೈರವ ಬಂಗರ ಚೌಟರಜಿಲ ಸಾವಂತರ ಮನೆಮನೆಯಿಂದೇ, ತುಳುವರ ತಾಯ್ತನೆಯುಳಿದರ ಕಾಯ್ಕನೆ - ನೀನೆನ್ನಯ ಮನೆ ಯಂಬೇ ||೨11 ದೇಗುಲಗಳೊ ಧರ್ಮದ ಬಾಗಿಲಗಳೊ? ಪುಣ್ಯ ಘಟಂ ತಟಿನೀತಟಂ! ಬಸದಿಗಳೋ ಕನಸೇ ಕಲ್ಲಾದುವೋ? ನೆಲಬಿರಿದೆದ್ದರೆ ಗೊಮ್ಮಟಂ? ನಿನ್ನ ಪುಲಕವೇ ಪಸುರಿದಂತೆ ಪಸರಿಸಿದೀ ಸಸ್ಯದ ಚೆಲುವೇಂ | ಜೀವನಸಾಮನನಾಡುವ ಪಾಡುವ ಖಗಮೃಗಪತಂಗದೊಲವೇ ! 11 ೩11 ಹಿಂದು ಜೈನ ಮಸ್ಲಿನ ಕೈಸ್ತರಾವೊಂದೇ ಬಾಂಧವರೆನ್ನಾ ತಂದೆ ದೇವರೊಬ್ಬನೆ, ನೀನೊಬ್ಬಳೆ ನಮ್ಮೆಲ್ಲರ ತಾಯಮ್ಮಾ | ಎಂದಿನವಳೇ ನೀನಿಂದಿನವರೆ ನಾವಾದೊಡೆಮ್ಮನಕ್ಕರೆಯಿಂ ನಿನ್ನೆದೆ ತೊಟ್ಟಲೊಳಿಟ್ಟು ಸಾಕುತಿಹೆ, ಸರಸಿಯಂತೆ ತಾವರೆಯಂ || ೪ || ಧನ್ಯನೆನಿತೊ ನಾ ನಿನ್ನಯ ಬಸುರಿಂದುಸುರಿಸಲೀ ಹೂವನ್ನ ! ಕೆಸರೋಳುದುರಲೀಯದೆ, ನಿನ್ನಡಿಗರ್ಪಿಸಿಕೊಳು ಕೌಸವವನ್ನ | ಬೇಡುವೆನವ್ವಾ, ಬೀಳ್ಕೊಡುವಂದೆನ್ನನೆತ್ತಿದಂಕದಿ ನಿನ್ನ, * ಮರಳಿ ಬಾರ, ಕಂದಾ, ನನ್ನುದರದಿ' ಎಂದು ತಬ್ಬಿ ಹರಸೆನ್ನ ! || ೫ || ಚಾ ತ ಕ

  • ಬೇಸಗೆಯ ಬೇಸರಂ ಬೀಸು ಕಾದಿಗೆಯೇ !

ಮೊಗ್ಗರಿಸಿ ಮೊರೆ ಮುಗಿಲೆ ! ಮಿನುಗು ಮೊನೆಮಿಂಚೇ 1 ಮೇಣಿಂತು ಮಳೆಯ ಮುಂಬನಿ ಮಣಿದು ಹೊಂಚ ನಿನ್ನ, ನೀನದನೊಲ್ಲದೆಲ್ಲಿ ಚಾದಗೆಯೇ ? 1 ಮಳೆಗಾಲವಾರಂಧಿಸುವ ಮಾಸ (ಕಾಶಿಕೆ) 1 ಮಣಿಯಂತೆ ಸಣ್ಣಗೆ ದುಂಡಾಗಿ, ಬಗ್ಗಿ