ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 104 108 112 ಊರ ಮಕ್ಕಳು ಮೊನ್ನೆ ಕೂಡಿ, ಗೊಂಬೆ ಮದುವೆಯ ಸರಸವಾಡಿ, ಗಲಭೆಯಿಂ ಮೆರವಣಿಗೆ ಮಾಡಿ ಕರೆಯಲೊಬ್ಬಳೆ ಹೋಗಲೆ ? 4ಜೋಗಿ ನಡೆತರೆ ಶಸೋಣದಲ್ಲಿ, ಕುಟ್ಟುತಿರೆ ಕೆಯ್ಸರೆಯನಲ್ಲಿ, ಬಡಿದುದದೆ ಇಮ್ಮಡಿಯಿನಿಲ್ಲಿ ಹಿತ್ತಿಲಿಗೆ ನಾನೋಡಿದೆ. ಇರುಳಿರುಳನಿಂತೆರೆದು ಸರಿಯೆ, ನಾಳೆಗಳ ಕದ ಹೊಂಚಿ ತಿರಿಯೆ, ನೋಡುವಾಸೆಯ ಕುಕ್ಕೆ ಬರಿಯೆ ನಾಳೆಯಿದೆ, ನೀನಿಲ್ಲವೇಂ ? ಮದುವೆಯಂ ಕಾದಂತೆ ಬೆನಕಂ, ನಾಳೆ ನಾಳೆಂದಂದಿನನಕಂ ವಂಚಿಸಲಿ ನಾನೆನ್ನ ಮನಕಂ ನಾಳೆಯಿದೆ, ನೀನಿಲ್ಲವೇ ? ಬರುವಿ ಗಡ ನೀನೆಂದು ಕೋರಿ ಕಾವೆದೆಯೊಳರಮರಿಕೆ ತೂರಿ ಬೆಕ್ಕಿನೋಲು ಹಂಬಲದ ದಾರಿ | ಯಡ್ಡ ನುಗ್ಗು ತಿದೇಕೆ ? ಆಸೆಯನುದಿನಮೇತವೆನ್ನ ತೀವುತೆದೆಯಂ ಸಂಜೆಯನ್ನ, ಇರುಳೊಳಾಡಿಸಿ ಹರೆಯ ಮುನ್ನ ಬರಿಯ ಕಿಮರಿಗೆಯನಿಳಿಪುದು ! 116 120 124 4 ಜೋಗಿಯಂದರೆ ಸಿಂಹಮಾಸದಲ್ಲಿ ತುಳುನಾಡಿನ ಹಳ್ಳಿಗಳಲ್ಲಿ ಮನೆಮನೆಗಳಿಗೆ ಕೊಂಡು ಹೋಗಿ ಆಡಿಸುವ ಒಂದು ವೇಷ 5"ಸೋಣ (ಶ್ರಾವಣ)=ಸಿಂಹಮಾಸ 6 ಏತಯಾಶ (pyootta) 7 ಹರಿ=ಮುಂಜಾನೆ 8 ಏತದಲ್ಲಿ ನೀರನ್ನು ಎತ್ತುವ ಖಾತ್ರ