ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 ಪಾಲುಮಾರಿಗೆ ಪಾಲು ಮಾರಿಕೆ ಯಾವಳೊಬ್ಬ ಹಾಲುಗಿತ್ತಿ ಹಾಲ ಕೊಡವ ತಲೆಯೊಳ ಹೊಳೆಯಾಚೆಗೆ ಕಡೆಯಿತ್ತಿ ಕಡಕೆ ಬಂದಳು ತಡವಿನಿಸಿರೆ ಕಡವ ತೆರೆಯೆ, ಕೊಡವನಿಳಿಸಿ ನೀರನೆರೆಯೆ, ಹಾಲಿನರಕೆ ನೆರೆದು ನೆರೆಯ ತುಂಬಿತಾ ಕೊಡಂ ಅವಸರದಿಂ ದೋಣಿ ಹತ್ತಿ ಕುಳಿತಳಾಕೆ 1ಬಾಣಿಗೊತ್ತಿ: ತಿರುಗಲಂಬಿ ಹಗಲು ಮುಕ್ಕಿ ತಾಕೆಯ ಮೊಗದಿ. ಮು೦ಬಿಸಿಲಲಿ ಬೆವರು ತುರುಗೆ, ಸೂಸಿತು ಕಿರುನಗೆಯ ನಿರಿಗೆ ಜಾಲಾಕ್ಷದಿ ನುಸುಳಿ ಹೊರಗೆ ಸುಳಿವ ಗಾಳಿಯೊ ? ಅನಿಬರ ಗಂಡಸರ ಮುಂತು ಮೊಗವ ತೊಳೆಯದಿರುವಳಂತು ? ಸೆರಗ ಸರಿಸಿ ನಿರಿಯೊಳಾಂತು ತೊರೆಗೆ ಬಗ್ಗಲು, ಸಡಲಿದ ತಿರುಗಣೆಯ ತಿಳಿಯ ದವಳ ಬಲದ ಕಿವಿಯ ಗಿಳಿಯ ನಾಲ ಜಗುಳುವೊಡನೆ ಹೊಳೆಯ ಗುಳುಗುಳೂರೆದುದು. 1 ಕೋಣೆಯ ಒಂದು ಭಾಗ