ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು ನಮ್ಮೆದೆಯಂ ತಾಯೆ ಬಲಿಸು, ಎಲ್ಲರ ಬಾಯಲ್ಲಿ ನೆಲಸು, ನಮ್ಮ ಮನಮನೊಂದೆ ಕಲಸು | ಇದನೊಂದನೆ ಕೋರುವೆ ನಿನ್ನ ಮೂರ್ತಿ ಜಗತ್ತೀರ್ತಿ ಎಂದಿಗೆಮಗೆ ತೋರುವೆ ? 70 ಬೆ ಕು-ಬೇಡ ಬೇಕೆಂಬುವ ಬಡತನವ ಸ್ನೇಕೆ ಕರೆದುಕೊಳುವೆ ? ಬೇಡದೆ ಬಹ ಬಲುಧನವ ನೋಕಕಟಾ ಕಳವೆ ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೊಪೇಕ್ಷೆ ನೆರೆಯಲೆಂದುಮಳವೆ ? ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ ? ಬೇಡುವಂತ ಬಡವನಾದ ಜಲಧಿಗೆ ಜಲಮೊಳವೆ ನಾದೆ ಬಾಡಬಾನಲನಂ ? 14 ಬೇಕೆನುವೊಡನಿತ್ತೆ ಮೂಢ ಮನಸೆ ಸಂಚಕರಂ ಸ್ಪನಾಶಕಿದೊ ನೆಗಳ ಬೀಡ ನಳಿನಕೊಡ್ಡಿ ಕರಂ |