ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲನೆಯ ಪ್ರಕರಣ.

ಸತ್ತ್ರವರ್ತನವನ್ನೂ ಹೊಂದಿ ಆವುದೋ ಒಂದು ಬಗೆಯಲ್ಲಿ ಗೌರವದಿಂದ ಜೀವನಮಾಡುತ್ತಿರುವುದನ್ನೂ, ಓದದೆ ಇರುವವರು ಬುದ್ಧಿಶಕ್ತಿಯು ಸಾಲದೆ ಒಳ್ಳೆಯ ನಡೆನುಡಿಗಳನ್ನರಿಯದೆ ಕಟ್ಟಿಗೆಯೊಡೆದು ಮಾರುವುದೇ ಮೊದಲಾದ ಕಾರ್ಯಗಳಲ್ಲಿ ನೀಚನಾಗಿ ಜೀವನ ಮಾಡುತ್ತಿರುವುದನ್ನೂ, ನಾವು ಸಮಸ್ತ ದೇಶಗಳಲ್ಲಿಯೂ ನೋಡುತ್ತಿರುವವಲ್ಲವೆ? ಕಳ್ಳತನ, ಕೊಲೆ ಮೊದಲಾದ ದೊಡ್ಡ ತಪ್ಪುಗಳನ್ನು ಮಾಡತಕ್ಕವರು ಸಂಪೂರ್ಣವಾಗಿ ವಿದ್ಯಾಹೀನರಾದ ಹೀನಜಾತಿಯವರೇ ಎಂಬುದು ಸಕಲರಿಗೂ ತಿಳಿದಿರುವುದು. ಸಭೆಗಳಿಗೆ ಹೊಗಿ ಉದ್ಯೋಗಗಳನ್ನು ಮಾಡಲಾರರಾದುದರಿಂದ, ಸ್ತ್ರೀಯರಿಗೆ ವಿದ್ಯೆಯು ಅನಾವಶ್ಯಕನೆಂದೂ, ಅನರ್ಥದಾಯಕವೆಂದೂ ಕೆಲವರು ಅಭಿಪ್ರಾಯಪಡುವರಲ್ಲದೆ ಅದನ್ನು ವಿವೇಕಿಗಳಾದವರು ಮೆಚ್ಚರು. ನಿದ್ದೆಯನ್ನು ಜ್ಞಾನಾಭಿವೃದ್ಧಿಗೋಸುಗ ಅಭ್ಯಾಸಮಾಡಬೇಕಲ್ಲದೆ ಉದ್ಯೋಗಳನ್ನು ಮಾಡುವುದಕ್ಕೋಸುಗವಲ್ಲ. ಫಲಾಪೇಕ್ಷೆಯಿಂದ ನಟ್ಟ ಹಲಸು ಮೊದಲಾದ ಗಿಡಗಳು ನೆಳಲನ್ನು ಕೊಡುವುದು ಮೊದಲಾದ ಅನೇಕ ಕಾರ್ಯಗಳಿಗೆ ಉಪಯೋಗವಾಗವಂತೆಯೇ ತಿಳಿವಿಗೋಸುಗ ಏರ್ಪಟ್ಟ ವಿದ್ಯೆಯು ಇನ್ನೂ ಇತರ ಕಾರ್ಯಗಳಿಗೆ ಉಪಯೋಗವಾಗುವುದು. ವಶುವಿಗಿಂತ ಮನುಷ್ಯನು ಉತ್ತಮನಾಗುವುದಕ್ಕೆ ಜ್ಞಾನವೇ ಮುಖ್ಯವಾದ ಕಾರಣನಾದುದರಿಂದಲೂ, ಸಾಧನವಾದುದರಿಂದಲೂ, ನಮ್ಮ ಹಿರಿಯರು ವಿದ್ಯಾಹೀನನನ್ನು ಎರಡು ಕಾಲಿನ ಪಶುವೆಂದೆಣಿಸುತ್ತಿದ್ದುದು ಯುಕ್ತವೇಸರಿ. ಮಾನುಷ ಧರ್ಮವನ್ನು ಬಿಟ್ಟು ವಶುವೃತ್ತಿಯಲ್ಲಿರಬೇಕೆಂದು ಬಯಸುವವನೊಬ್ಬನಲ್ಲದೆ ಮತ್ತಾವನೂ ಜ್ಞಾನೈಕನಾಧನವಾದ ವಿದ್ಯೆಯನ್ನು ಅನಾವಶ್ಯಕವಾದುದೆಂದು ಅಲೆಗಳೆಯನು. ಹೊರಗೆ ಬೇರೆಬೇರೆಯಾಗಿ ಕಾಣಿಸುತ್ತಿದರೂ ಭಾರ್ಯಾಭರ್ತರಿಬ್ಬರ ಶರೀರವೂ ಒಂದೇ ಎಂದು ಎಲ್ಲಾದೇಶದವರೂ ಹೇಳುವರು. ಹಾಗಾದಪಕ್ಷದಲ್ಲಿ, ಗಂಡನು ವಿದ್ಯಾವಂತನಾಗಿ ನಲಿಯಬೇಕೆಂದೂ, ಹೆಂಡತಿಯು ಅವಿದ್ಯಾವತಿಯಾಗಿ ನರಲಬೇಕೆಂದೂ ಹೇಳುವವರು. ಅರ್ಧಶರೀರವು ಮನುಷ್ಯನಾಗಿಯೂ, ಉಳಿದ ಅರ್ಧಶರೀರವು ಪಶುವಾಗಿಯೂ ಇರಬೇಕೆಂದು ಹೇಳಿದಂತಾಯಿತು. ವಿದ್ಯಾಗಂಧವೇ ಇಲ್ಲದ ವಶುಪ್ರಾಯನೊಡನೆ ವಿದ್ಯಾವಂತನಾದವ