ಈ ಪುಟವನ್ನು ಪ್ರಕಟಿಸಲಾಗಿದೆ
೧೨
ಚ೦ದ್ರಮತಿ.

ಗುರು- ಆತನು ಮಾಡದಿರುವ ಪದಾರ್ಥವಾವುದೂ ಇಲ್ಲ. ನೀನು ಭೂಮಿಯಲ್ಲಿ ನೋಡಿದರೂ, ಅಂತರಿಕ್ಷದಲ್ಲಿ ನೋಡಿದರೂ, ಮತ್ತೆಲ್ಲಿ ನೋಡಿದರೂ, ಆತನು ಮಾಡಿರುವ ಅನೇಕ ಸುಂದರಪದಾರ್ಥಗಳು ಕಣ್ಣುಗಳಿಗೆ ಆನಂದವನ್ನುಂಟುಮಾಡುತ್ತಿರುವುವು. ನಮಗೆ ಕಾಣಿಸುತ್ತಿರುವ ಪದಾರ್ಥಗಳನ್ನೆಲ್ಲ ಸೃಷ್ಟಿಸಿದವನಾತನೇ.

ಚಂದ್ರ-ನೀವು ಹೇಳುವುದನ್ನು ಕೇಳಿದರೆ, ಈ ವೃಕ್ಷರಾಜಿಯನ್ನೂ, ಸೂರ್ಯಚಂದ್ರರನ್ನೂ ಆತನೇ ಸೃಷ್ಟಿಸಿದವನೆಂದು ತೋರುವುದು.

ಗುರು-ಸೂರ್ಯಚಂದ್ರಾದಿ ಜಡಪದಾರ್ಥಗಳನ್ನು ಮಾತ್ರವಲ್ಲದೆ, ಪಶುಪಕ್ಷ್ಯಾದಿ ಸಮಸ್ತ ಜೀವರಾಶಿಗಳನ್ನೂ, ನಿನ್ನನ್ನೂ, ನನ್ನನ್ನೂ, ಸಮಸ್ತ ಮನುಷ್ಯಕೋಟಿಯನ್ನೂ ಸೃಷ್ಟಿಸಿ ಕಾಪಾಡುತ್ತಿರುವವನಾಮಹಾತ್ಮನೇ ಚರಾಚರಗಳಾದ ಸಮಸ್ತ ಪದಾರ್ಥಗಳೂ ಆತನಿಂದಲೇ ಸೃಷ್ಟಿಸಲ್ಪಟ್ಟುವು ಗಳಾಗಿವೆ. ಇವುಗಳಲ್ಲದೆ ನಮ್ಮ ಕಣ್ಣುಗಳಿಗೆ ಕಾಣಿಸದಿರುವಂತಹ ವಸ್ತುಗಳನ್ನೂ ಅಸಂಖ್ಯಾಕವಾಗಿ ಸೃಷ್ಟಿಸಿರುವನು.

ಚಂದ್ರ-ಇಂತಹ ಅದ್ಭುತಶಕ್ತಿಯನ್ನುಳ್ಳ ಆ ಸರ್ವೆಶ್ವರನ ಮಹತ್ವಾದಿಗಳನ್ನು ಸಂಪೂರ್ಣವಾಗಿ ಹೇಳಬೇಕೆಂದು ನನಗೆ ಆಸೆಯುಂಟಾಗಿರುವುದು. ತಾವು ಅದನ್ನು ನನಗೆ ವಿವರಿಸಬೇಕು.

ಗುರು-ಆತನ ದಿವ್ಯಗುಣಗಳಲ್ಲಿ ಸಹಸ್ರಾಂಶಗಳಲ್ಲೊಂದನ್ನಾದರೂ ನಾನು ವರ್ಣಿಸುವುದಕ್ಕೆ ಸಮರ್ಥನಲ್ಲ. ಈಗ ಇಷ್ಟೇ ಸಾಕು. ನಿನಗೆ ಜ್ಞಾನಾಭಿವೃದ್ಧಿಯುಂಟಾದಹಾಗೆಲ್ಲ, ನೀನೇ ಆತನ ಗುಣಗಳನ್ನು ತಿಳಿದುಕೊಂಡು ಸಂತೋಷಪಡವೆ.