ರಿಂದಲೂ, ಹೊಗೆಮೊದಲಾದುವುಗಳಿಂದಲೂ, ಗಾಳಿಯು ಕೆಟ್ಟುಹೋಗಿ ಬಹುವಿಧಗಳಾದ ವ್ಯಾಧಿಗಳನ್ನು ಹುಟ್ಟಿಸುವುದಾದುದರಿಂದ, ವಾಸಗೃಹಗಳ ಸಮಾಸದಲ್ಲಿ ಇಂತಹ ಪದಾರ್ಥಗಳನ್ನಾವುದನ್ನೂ ಇರಗೊಡದೆ ಜಾಗರೂಕರಾಗಿ ವಾಸಸ್ಥಾನಗಳನ್ನು ನಿರಂತರವೂ ಶುಚಿಯಾಗಿಟ್ಟಿರಬೇಕು.
ಚಂದ್ರ- ಇಷ್ಟುಬಗೆಯಲ್ಲಿ ಪ್ರತಿದಿನವೂ ಗಾಳಿಯು ಕೆಟ್ಟುಹೋಗಿ ಹಾನಿಕರವಾಗುತ್ತಿದ್ದರೂ ಭಗವಂತನು ಈ ಭಾದೆಯನ್ನು ಪರಿಹರಿಸುವುದಕ್ಕೆ ಆವ ಸಾಧನವನ್ನೂ ಕಲ್ಪಿಸಿಲ್ಲವೇ?
ಗುರು-ನಾವು ಹೊರಕ್ಕೆ ಬಿಡುವ ಕೆಟ್ಟ ಗಾಳಿಯನ್ನು ವೃಕ್ಷಾದಿಗಳು ಗ್ರಹಿಸಿ ನಮಗೆ ಆವಶ್ಯಕವಾದ ಪ್ರಾಣವಾಯುವನ್ನು ಹಗಲ ಹೊತ್ತಿನಲ್ಲಿ ಕೊಡುವುವು. ಹೀಗೆ ವೃಕ್ಷಾದಿಗಳು ಶುದ್ಧಿಗೊಳಿಸುತ್ತಿರುವುದರಿಂದಲೂ, ಗಾಳಿಯು ಬಹುದೂರ ವ್ಯಾಪಿಸಿರುವುದರಿಂದಲೂ, ಹೊಸ ಗಾಳಿಯು ಹಳೆಯದುದನ್ನು ಹೊರಕ್ಕೆ ಎತ್ತಿಕೊಂಡು ಹೋಗುವುದರಿಂದಲೂ, ವಿಷವಾಯುವಿನಿಂದ ನಮಗುಂಟಾಗುವ ಹಾನಿಯು ಪರಿಹಾರವಾಗುವುದು. ಉಸಿರಾಡುವುದೇ ಮೊದಲಾದ ಅನಿವಾರ್ಯಕಾರ್ಯಗಳನ್ನುಳಿದು ಇತರ ದುಷ್ಕಾರ್ಯಗಳಿಂದ ನಾವು ಗಾಳಿಯನ್ನು ಕೆಡಿಸದಿರುವ ಪಕ್ಷದಲ್ಲಿ, ನಮ್ಮ ಆರೋಗ್ಯಕ್ಕೆ ಭಗವಂತನು ಕಲ್ಪಿಸಿರುವ ಸಾಧನಗಳೇ ಸಾಕಾಗಿರುವುವು. ಆದುದರಿಂದ ಮೇಲೆ ತಿಳಿಸಿದ ಲೋಪಗಳನ್ನು ಕುರಿತು ನಾವು ಶ್ರದ್ಧೆಯನ್ನು ವಹಿಸಬೇಕು.
ಚಂದ್ರ-ನಾವು ಶ್ರದ್ಧೆಯನ್ನು ವಹಿಸಿ ಮಾಡಬೇಕಾಗಿರುವ ಕಾರ್ಯಗಳಾವುವು?
ಗುರು-ಗೃಹಾದಿಗಳನ್ನು ನಿರಂತರವೂ ಶುಚಿಯಾಗಿಟ್ಟುಕೊಂಡು, ಗಾಳಿಯ ದುರ್ಗಂಧ ಮೊದಲಾದುವುಗಳೆಲ್ಲಾ ಹೋಗುವಂತೆ ಗೋಡೆಗಳಿಗೆ ಆಗಾಗ ಸುಣ್ಣವನ್ನು ತೊಡೆಯಿಸುತ್ತೆ, ಶುದ್ದ ವಾಯುವು ಧಾರಾಳವಾಗಿ ಒಳಕ್ಕೆ ಪ್ರವೇಶಿಸುವುದಕ್ಕೆ ಅವಕಾಶವಿರುವಂತೆ ಗೋಡೆಗಳ ಮೇಲ್ಬಾಗದಲ್ಲಿ ದೊಡ್ಡ ಕಿಟಕಿಗಳನ್ನಿಡಿಸಿ, ಹೊಗೆ ಮೊದಲಾದುವುಗಳು ಹೊರಕ್ಕೆ ಹೋಗುವುದಕ್ಕೆ ತಕ್ಕ ಮಾರ್ಗಗಳನ್ನೇರ್ಪಡಿಸಿ, ನಮ್ಮ ದೇಹ ಸಂರಕ್ಷಣೆ ಗೋಸುಗ ತಕ್ಕಷ್ಟು ಶ್ರದ್ದೆಯನ್ನು ವಹಿಸಬೇಕು.