ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಚ೦ದ್ರಮತಿ.


ಒಳಗಣಿಂದ ಬಂದು, ಚಂದ್ರಮತಿಯು ಏನುಮಾಡುವಳೋ ನೋಡಬೇಕೆಂದು ಮರೆಯಲ್ಲಿ ನಿಂತು ನೋಡುತಲಿದ್ದನು. ಚಂದ್ರಮತಿಯು ಸ್ವಲ್ಪ ಕಾಲ ಆಲೋಚಿಸಿ, ತಾನು ಹಣ್ಣುಗಳನ್ನು ಕೊಂಡುಕೊಳ್ಳಬೇಕೆಂದು ತಂದಿದ್ದ ದುಡ್ಡನ್ನು ಸೆರಗಿನಿಂದ ಬಿಚ್ಚಿ ತೆಗೆದು, ಅವರಲ್ಲಿ ತರುಣರಾಗಿದ್ದವರಿಗಾರಿಗೂ ಕೊಡದೆ ಒಬ್ಬ ಮುದುಕನಿಗೆ ಕೊಟ್ಟು ಕಳುಹಿಸಿಬಿಟ್ಟಳು. ಅನಂತರ ವಿದ್ಯಾಸಮುದ್ರನು ಹೊರಕ್ಕೆ ಬಂದು, ಚಂದ್ರಮತಿಯನ್ನು ನೋಡಿ “ಎಲೌ! ಇಲ್ಲಿ ನಿಂತಿದ್ದ ಆ ಜನರೊಡನೆ ಏನು ಮಾತಾಡುತ್ತಿದ್ದೆ?” ಎಂದು ಕೇಳಿದನು.

ಚಂದ್ರ ಅವರು ಇಲ್ಲಿಗೆಬಂದು ತಮಗೇನಾದರೂ ಕೊಡಬೇಕೆಂದು ನನ್ನನ್ನು ಬಹುವಾಗಿ ಪೀಡಿಸಿದರು. ಎಲ್ಲರೂ ಕಷ್ಟಪಟ್ಟು ಕೆಲಸಮಾಡಬೇಕೆಂದು, ಜೀವನೋಪಾಯಕ್ಕೋಸುಗ ಕಷ್ಟಪಡಲು ಸಮರ್ಥರಾಗಿರಲೆಂದೇ ಭಗವಂತನು ಎಲ್ಲರಿಗೂ ಕೈ ಕಾಲು ಮೊದಲಾದ ಅವಯವಗಳನ್ನು ದಯೆಪಾಲಿಸಿರುವನೆಂದೂ ಮೊನ್ನೆಯದಿನ ತಾವು ಅಪ್ಪಣೆಕೊಡಿಸಿರಲಿಲ್ಲವೆ? ಆದುದರಿಂದ ಒಬ್ಬರಿಗೊಬ್ಬರು ಕೊಡಬೇಕಾದ ಆವಶ್ಯಕವಿಲ್ಲವೆಂದು ನನಗೆ ತೋರಿತು. ಆದರೂ ಅವರ ಸಮೂಹದಲ್ಲಿದ್ದ ಒಬ್ಬ ವೃದ್ದನನ್ನು ನೋಡಿದಾಗ ಅವನನ್ನು ಸುಮ್ಮನೆ ಕಳುಹಿಸಿ ಬಿಡುವುದಕ್ಕೆ ಮನಸ್ಸು ಬಾರದೆ ತಿಂಡಿ ಗೋಸುಗ ತಂದಿದ್ದ ದುಡ್ಡನ್ನು ಅವನಿಗೆ ಕೊಟ್ಟುಬಿಟ್ಟೆನು.

ಗುರು--ನೀನು ತಿಳಿಯದೇ ಮಾಡಿರುವದಾದರೂ ಆ ಮುದುಕನಿಗೆ ಕೊಟ್ಟುದು ಬಲು ಒಳ್ಳೆಯದಾಯಿತು. ಅನ್ಯರನೇ ನಂಬಿಕೊಂಡಿರದೆ ತನ್ನ ಜೀವನಕ್ಕೋಸುಗ ತಾನೇ ಪಾಡುಪಡಬೇಕಾದುದು ಪ್ರತಿಮನುಷ್ಯನಿಗೂ ಆವಶ್ಯಕವೇ ಆಗಿದ್ದರೂ, ಮಹಾರಾಜನು ಮೊದಲ್ಗೊಂಡು ಗರ್ಭದರಿದ್ರನವರೆಗೂ ಅನ್ಯೋನ್ಯಸಾಹಾಯ್ಯವು ಆವಶ್ಯಕವಾಗಿ ಬೇಕಾಗಿರುವುದು. ನೀವು ಪ್ರತಿದಿನವೂ ಭುಂಜಿಸುವ ಪಂಚಭಕ್ಷ್ಯಪರಮಾನ್ನಗಳಿಗೆ ಬೇಕಾಗುವ ಪದಾರ್ಥಗಳು ಹೇಗೋ, ಬಡವರು ಕುಡಿಯುವ ಗಂಜಿಗೆ ಬೇಕಾಗುವ ಅಕ್ಕಿಯೂ ಹಾಗಯೇ ಹಲವರು ಶ್ರಮಪಟ್ಟಲ್ಲದೆ ಲಭಿಸದು ಒಬ್ಬ ಭಗವಂತನಿಂದಲೇ ಸಕಲರೂ ಸೃಜಿಸಲ್ಪಟ್ಟು ರಕ್ಷಿತರಾಗಿರುವುದರಿಂದ ಜನರೆಲ್ಲರೂ ಏಕಕುಟುಂಬದವರಂತೆ ಇರಬೇಕಾದುದು ಪರಮಾವ