ನಾಶಗೊಳಿಸುವುದು. ನೆರೆಯವರ ಸಂತೋಷವನ್ನು ಕಂಡು ಸೈರಿಸದವರು ರೋಗವಿಲ್ಲದೆಯೇ ಬಾಧೆಪಡುವರು. ನಾವು ಆರನೇಯಾದರೂ ಆವನಿಷಯದಲ್ಲಿಯೂ ಮೋಸಗೊಳಿಸಬಾರದು. ಸಕಲ ವಿಷಯಗಳಲ್ಲಿಯೂ ನ್ಯಾಯವಾಗಿ ಪ್ರವರ್ತಿಸಬೇಕು. ನಾವು ಆರಿಗಾದರೂ ಆವುದಾದರೊಂದು ನ್ಯಾಯ್ಯಯುಕ್ತವಾದ ವಿಚಾರದಲ್ಲಿ ವಾಗ್ದಾನಮಾಡಿದ ಪಕ್ಷದಲ್ಲಿ, ಎಷ್ಟು ಶ್ರಮಪಟ್ಟಾದರೂ ನಾವಾಡಿದಂತೆ ನಡೆದುಕೊಳ್ಳಬೇಕು. ಎಲ್ಲಕ್ಕೂ ವಾಗ್ದಾನಮಾಡದೆ ನಮ್ಮ ಸಾಮರ್ಥ್ಯವನ್ನು ನೋಡಿಕೊಂಡು ಜಾಗರೂಕತೆಯಿಂದ ಮಾತನಾಡಬೇಕು. ವೈರವೂ ಮೈತ್ರಿಯ ಮಾತುಗಳಿಂದಲೇ ಹುಟ್ಟುವುವಾದುದರಿಂದ, ಯಾವಾಗಲೂ ಬಿರುನುಡಿಗಳನ್ನಾಡದೆ, ಮೃದುವಾದ ಮಾತುಗಳನ್ನಾಡುತ್ತಿರಬೇಕು. ತಿಳಿವಿಲ್ಲದವರು ದುಡುಕಿ ನಮ್ಮನ್ನೇನಾದರೂ ನಿಂದಿಸಿದರೂ ಸೈರಿಸಿಕೊಂಡು ಸುಮ್ಮನಿರಬೇಕು. ಯಾವಾಗಲೂ ಯಾರನ್ನೂ ಅವರಿಲ್ಲದ ಕಾಲದಲ್ಲಿ ದೂಷಿಸಲಾಗದು; ಇವರಾಡಿದ ಮಾತನ್ನು ಅವರಬಳಿಯಲ್ಲಿಯೂ ಅವರಾಡಿದಮಾತನ್ನು ಇವರಬಳಿಯಲ್ಲಿಯೂ ಹೇಳದೆ ಆಯಾ ಮಾತುಗಳನ್ನು ಅಲ್ಲಲ್ಲಿಯೇ ಮರೆತಂತಿರಬೇಕು; ಸಕಲರನ್ನೂ ಗೌರವಿಸಬೇಕು; ನಮಗಿಂತ ಹೆಚ್ಚಾದವರ ವಿಷಯದಲ್ಲಿ ಭಕ್ತಿಯುಳ್ಳವರಾಗಿ, ಅವರು ಹೇಳುವ ನ್ಯಾಯ್ಯವಾದ ವಿಷಯಗಳಿಗೆ ಅಧೀನರಾಗಿ ನಡೆದುಕೊಳ್ಳಬೇಕು; ನಮ್ಮ ಸೇವಕರು ಮೊದಲಾದವರ ಮೇಲೆ ನಿಷ್ಕಾರಣವಾಗಿ ಕೋಪಿಸದೆ ಒಳ್ಳೆಯ ಮಾತುಗಳನ್ನಾಡಿಯೇ ಅವರಿಂದ ಕೆಲಸಗಳನ್ನು ಮಾಡಿಸಬೇಕು. ಆವ ವಿಷಯದಲ್ಲಿಯೇ ಆದರೂ ದುಡುಕಲಾಗದು; ಎಲ್ಲ ಕೆಲಸಗಳನ್ನೂ ಚೆನ್ನಾಗಿ ಆಲೋಚಿಸಿ ಯುಕ್ತವೆಂದು ತೋರಿದಬಳಿಕ ಮಾಡಬೇಕು. ಎಲ್ಲರ ವಿಷಯದಲ್ಲಿಯೂ ಸಮಬುದ್ದಿಯುಳ್ಳವರಾಗಿ, ಇತರರು ಆವುದಾದರೊಂದು ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಕೇಳಿದರೆ, ಅವರೊಡನೆ ನಿಷ್ಪಕ್ಷಪಾತವಾಗಿ ನಮಗೆ ತೋರಿದ ವಿಷಯವನ್ನು ಕಪಟವಿಲ್ಲದೆ ಹೇಳಬೇಕು. ನಿಷ್ಕಾರಣವಾಗಿ ಇತರರಿಗೆ ನೋವನ್ನುಂಟುಮಾಡದಂತೆ ಜಾಗರೂಕರಾಗಿರಬೇಕು. ದೈವಾಜ್ಞೆಯಿಂದ ಇತರರಿಗಾರಿಗಾದರೂ ಸಂಘಟಿಸಿರಬಹುದಾದ ಅಂಗವಿಕಾರಗಳನ್ನು ನೋಡಿ ಯಾವಾಗಲೂ ಪರಿಹಾಸಮಾಡಲಾಗದು. ಆರಾದರೂ
ಪುಟ:ಚಂದ್ರಮತಿ.djvu/೪೮
ಈ ಪುಟವನ್ನು ಪ್ರಕಟಿಸಲಾಗಿದೆ
ಏಳನೆಯ ಪ್ರಕರಣ.
೪೧