ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಚಂದ್ರಮತಿ.


ವುದಕ್ಕೋಸುಗ ತನ್ನ ಜೊತೆಕಾಗೆಗಳನ್ನು ಕೂಗಿದುದನ್ನೂ ಕಂಡು ನನಗೆ ಆಶ್ಚರ್ಯವುಂಟಾಯಿತಾದುದರಿಂದ ನೋಡುತ್ತಿರುವೆನು.

ಗುರು-ಆ ಕಾಗೆಯು ಬಂಧುಗಳ ವಿಷಯದಲ್ಲಿ ಮನುಷ್ಯರೂ ಹೀಗೆಯೇ ನಡೆದುಕೊಳ್ಳಬೇಕೆಂದು ಬುದ್ದಿಗಲಿಸುವುದು. ಬುದ್ದಿವಂತರಾದವರಿಗೆ ಭಗವತ್ಸ್ರಷ್ಟಿಯಲ್ಲಿರುವ ಪ್ರತ್ಯಲ್ಪವಸ್ತುವಿನಿಂದಲೂ ತಿಳಿದುಕೊಳ್ಳತಕ್ಕ ವಿಷಯಗಳೆಷ್ಟೊ ಕಾಣಿಸುವುವು.

ಚಂದ್ರ-ಹಿಂದೆ ನೀವು ನಂಟರವಿಷಯದಲ್ಲಿ ನಡೆದುಕೊಳ್ಳಬೇಕಾದ ಧರ್ಮಗಳನ್ನು ಕುರಿತು ತಿಳಿಸುವೆನೆಂದು ಅಪ್ಪಣೆ ಕೊಡಿಸಿದ್ದಿರಲ್ಲವೇ? ಈಗ ನನಗಾವಿಷಯವನ್ನು ಚೆನ್ನಾಗಿ ಬೋಧಿಸಬೇಕೆಂದು ಬೇಡಿಕೊಳ್ಳುವೆನು.

ಗುರು-ನಾವು ಸಾಧಾರಣವಾಗಿ ನಂಟರೆಲ್ಲರ ವಿಷಯದಲ್ಲಿಯೂ ಪ್ರೀತಿಯುಳ್ಳವರಾಗಿ ಸಾಧ್ಯವಾದಷ್ಟು ಮಟ್ಟಿಗೂ ಅವರಿಗೆ ನಮ್ಮ ಕೈಲಾದ ಸಾಹಾಯ್ಯನನ್ನು ಯುಕ್ತ ಸಮಯಗಳಲ್ಲಿ ಮಾಡುತ್ತಿರಬೇಕು. ಅಶಕ್ತರಾಗಿ ಹುಟ್ಟ, ನಮಗಿಂತಹುದು ಬೇಕೆಂಬುದನ್ನಾದರೂ ಹೇಳಲಾರದೆ, ಅಳುವುದೊಂದನ್ನುಳಿದು ಮತ್ತಾವುದನ್ನೂ ಮಾಡಲಾರದಿರುವಂತಹ ಬಾಲ್ಯದಶೆಮೊದಲ್ಗೊಂಡು, ನಮ್ಮನ್ನು ಹಲವುಬಗೆಯಾಗಿ ಪೋಷಿಸಿ, ನಮ್ಮ ಇಂಗಿತವನ್ನರಿತು ಹಸಿವಾದಕಾಲದಲ್ಲಿ ಆಹಾರವನ್ನುಣಿಸಿ ನಮ್ಮ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೂ ತಾವು ನಿದ್ರಾಹಾರಗಳಿಲ್ಲದೆ ಪರಿತಪಿಸುತ್ತೆ ಚಿಕಿತ್ಸೆಮಾಡಿಸಿ, ನಮಗೆ ವಿದ್ಯಾಬುದ್ದಿಗಳನ್ನು ಕಲಿಸಿ, ಬೆಳಸಿ, ದೊಡ್ಡವರನ್ನಾಗಿ ಮಾಡಿದ ತಾಯ್ತಂದೆಗಳ ವಿಷಯದಲ್ಲಿ ನಾವು ಬಹು ಕೃತಜ್ಞತೆಯುಳ್ಳವರಾಗಿ, ಅವರಲ್ಲಿ ಅತಿಶಯವಾದ ಪ್ರೇಮವನ್ನೂ ಭಕ್ತಿಯನ್ನೂ ಇಟ್ಟು ನ್ಯಾಯ್ಯವಾದ ಅವರ ಆಜ್ಞೆಗಳನ್ನೆಲ್ಲಾ ಶಿರಸಾವಹಿಸಿ ನಡೆಯಿಸಬೇಕು. ಅವರು ವೃದ್ಧರಾದಾಗಲೂ, ಅಶಕ್ತರಾದಾಗಲೂ ಅವರಿಗೆ ಸಮಸ್ತೋಪಚಾರಗಳನ್ನೂ ಮಾಡುತ್ತೆ ಅವರನ್ನು ಪೋಷಿಸಬೇಕು. ಒಡಹುಟ್ಟಿ, ಒಡನುಂಡು, ಒಡನಾಡಿ, ಒಡವೆಳದು, ಒಡನೆನಿದ್ರಿಸುವ ಅಣ್ಣಂದಿರು, ತಮ್ಮoದಿರು, ಅಕ್ಕ ತಂಗಿಯರು ಮೊದಲಾದವರನ್ನು ಅತಿಶಯವಾದ ಅನುರಾಗದಿಂದ ಗೌರವಿಸಿ ಕನಸಿನಲ್ಲಾದರೂ ಕಲಹವಾಡದೆ ಬಾಳಬೇಕು. ಅತ್ತೆ,