ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಚ೦ದ್ರಮತಿ.


ವೇಳೆಗೆ ತಲೆಯನ್ನು ಬಾಚಿಕೊಂಡು ಒಳ್ಳೆಯಸೀರೆಯನ್ನುಟ್ಟು ಶುಚಿಯಾಗಿದ್ದು, ಆತನಿಗೆಬೇಕಾದ ಪದಾರ್ಥಗಳನ್ನು ಅಣಿಮಾಡಿಕೊಟ್ಟು ಉಪಚರಿಸಬೇಕಲ್ಲದೆ, ನೆರೆ ಹೊರೆಯವರೊಡನೆ ನಡೆದ ಜಗಳಗಳನ್ನೂ ಮನೆಯಲ್ಲಿರುವ ದುಃಖಗಳನ್ನೂ ಹೇಳಬಾರದು; ಮನೆಯನ್ನು ಶುಚಿಯಾಗಿಟ್ಟುಕೊಂಡು, ನಾಲಗೆಗಿಂಪಾಗಿರುವಂತೆ ಅಡಿಗೆಮಾಡಿ ಬಡಿಸಿ ಪತಿಯನ್ನು ಮೆಚ್ಚಿಸಬೇಕು. ಒಡವೆಗಳನ್ನಾಗಲೀ ಅನರ್ಘಗಳಾದ ವಸ್ತ್ರಗಳನ್ನಾಗಲಿ ತರಬೇಕೆಂದು ಪೀಡಿಸಬಾರದು. ಸ್ತ್ರೀಯರಿಗೆ ಯಾವಾಗಲೂ ಸುಗುಣಗಳೇ ಅಲಂಕಾರಗಳೆನಿಸುವುದಾದುದರಿಂದ ರತ್ನಭೂಷಣಗಳೂ ಹೆಚ್ಚುಬೆಲೆಯ ವಸ್ತ್ರಗಳೂ ಅಲಂಕಾರಗಳಲ್ಲ. ಸಾಧಾರಣವಾಗಿ ಹತ್ತುಹದಿನೈದು ರೂಪಾಯಿಗಳಿಂದ ಒಬ್ಬ ಬಡವನ ಕುಟುಂಬವು ಒ೦ದುತಿ೦ಗಳವರಿಗೆ ಸುಖವಾಗಿ ಜೀವಿಸಬಹುದು; ಸಹಸ್ರ ಸಹಸ್ರ ಕುಟುಂಬಗಳು ಸುಖವಾಗಿ ಜೀವಿಸುವುದಕ್ಕೆ ಉಪಯೋಗಿಸಬಹುದಾದ ಧನವನ್ನು ನಿಷ್ಪ್ರಯೋಜನವಾಗಿ ಒಬ್ಬ ಅಬಲೆಯು ದೇಹದಮೇಲೆ ಧರಿಸಿಕೊಂಡು ತಿರುಗುವುದು ಯಾವನ್ಯಾಯ? ಮನೆಗೆ ಬೇಕಾದುದನ್ನು ಗಳಿಸಿ ತರುವುದು ಪುರುಷರ ಕಾರ್ಯ. ತಂದುದನ್ನು ಮಿತವಾಗಿಬಳಸುತ್ತೆ ಹುಲ್ಲುಕಡ್ಡಿಯಾದರೂ ವ್ಯರ್ಥವಾಗದಂತೆ ಜಾಗರೂಕತೆಯಿಂದ ನೋಡಿಕೊಳ್ಳುವುದು ಸ್ತ್ರೀಯರಕಾರ್ಯ. ಆದುದರಿಂದ ಸ್ತ್ರೀಯರು ಮಿತಿಮೀರಿ ವ್ಯಯಮಾಡದೆ ಉಚಿತರೀತಿಯಿಂದ ನಡೆದುಕೊಳ್ಳಬೇಕು. ಅತಿ ಭೋಜನದಿಂದ ಅಜೀರ್ಣಾದಿರೋಗಗಳು ಹುಟ್ಟುವ೦ತೆಯೇ ಅತಿನಿದ್ರೆಯಿಂದಲೂ ಮಾಂದ್ಯ ಬಲಹೀನತೆ ಮೊದಲಾದುವು ಉಂಟಾಗಿ ದೇಹದಾರ್ಡ್ಯವು ತಪ್ಪಿ ಹೋಗುವುದು. ಸೋಮಾರಿತನವನ್ನು ಬಿಟ್ಟು ಮನೆಗೆಲಸಗಳನ್ನೆಲ್ಲ ತಾವೇ ಮಾಡಿಕೊಳ್ಳುವಂತಹ ಸ್ತ್ರೀಯರಿಗೆ ಇಂತಹ ಕೇಡುಗಳಾವುವೂ ಉಂಟಾಗಲಾರವು. ಕಬ್ಬುಣವನ್ನು ಮಣ್ಣು ತಿನ್ನುವಂತೆಯೇ ಸೋಮಾರಿತನವು ನಮ್ಮ ದೇಹದ ಸಾರವನ್ನೆಲ್ಲ ತಿಂದು ಬಿಡುವುದು. ತಾನು ಮಹಾರಾಜನ ಕುಮಾರಿಯಾಗಿದ್ದರೂ ಗಂಡನಿಗೆ ದಾಸಿಯೇ ಆಗುವಳಾದುದರಿಂದ, ಎಷ್ಟು ಮಂದಿ ಪರಿಚಾರಿಣಿಯರಿದ್ದರೂ ಪತಿಗೆ ಬೇಕಾದ ಉಪಚಾರಗಳನ್ನೆಲ್ಲ ಸ್ತ್ರೀಯು ತಾನೇ ಮಾಡಬೇಕು. ಸ್ತ್ರೀಯು ಪುರುಷನನ್ನು ವಶಗೊಳಿಸಿಕೊಳ್ಳುವುದಕ್ಕೆ ಮಾಡಬೇಕಾದ