ಕೆಗೂ ಗುರಿಯಾಗಿ ಮಾನಪ್ರಾಣಗಳೂ ನಷ್ಟವಾಗುವುವು. ಮಾನವಂತ ನಾದವನು ತನ್ನ ಪತ್ನಿಯು ಆವ ಅವರಾಧವನ್ನು ಮಾಡಿದರೂ ಸೈರಿಸಬಲ್ಲ ನಲ್ಲದೆ ಅವಳು ವ್ಯಭಿಚರಿಸಿದಾಗ ಮಾತ್ರ ತಿಳಿದು ಸೈರಿಸಿಕೊಂಡಿರಲಾರನು. ಆದುದರಿಂದ ಸ್ತ್ರೀಯು ಸಕಲ ವಿಧಗಳಲ್ಲಿಯೂ ಪಾತಿವ್ರತ್ಯಕ್ಕೆ ಹಾನಿ ಯುಂಟಾಗದಂತೆ ಜಾಗರೂಕಳಾಗಿರಬೇಕು.
ಒಂಭತ್ತನೆಯ ಪ್ರಕರಣ.
ವಿದ್ಯಾಸಮುದ್ರನು ಚಂದ್ರಮತಿಗೆ ಹೇಳಿದ ವಿದ್ಯೆಯಲ್ಲ ಪುಸ್ತಕ ಮಾತ್ರದಿಂದಲೇ ಅಲ್ಲ ಆತನು ಸಾಯಂಕಾಲದ ವೇಳೆಗಳಲ್ಲಿ ಪ್ರತಿದಿನವೂ ಚಂದ್ರಮತಿಯನ್ನು ಕರೆದುಕೊಂಡು ಹೋಗಿ, ಜಗದೀಶ್ವರನ ದಿವ್ಯ ಹಸ್ತ ರಚಿತಗಳಾದ ವಸ್ತುಸಮೂಹಗಳಿಂದ ಪ್ರಕಾಶಿಸುವ ಉದ್ಯಾನಗಳಲ್ಲಿ ನೇತ್ರೋ ತ್ಸವವನ್ನುಂಟುಮಾಡುವ ಫಲವೃಕ್ಷಗಳನ್ನೂ ಹೂವಿನ ಗಿಡಗಳನ್ನೂ ಕಿವಿಗಿಂಪಾಗಿರುವಂತೆ ಮಧುರಧ್ವನಿಯನ್ನು ಮಾಡುವ ಕೋಗಿಲೆ ಗಿಳಿ ಮೊದಲಾದ ಪಕ್ಷಿಗಳನ್ನೂ ತೋರಿಸಿ, ಅವುಗಳ ಮೂಲವಾಗಿ ಭಗವಂತನ ಸಮಸ್ತ ನಿರ್ಮಾಣಕೌಶಲವನ್ನೂ ನೀತಿಗಳನ್ನೂ ಅವಳ ಮನಸ್ಸಿಗೆ ನಾಟು ವಂತೆ ಸಮಯೋಚಿತವಾಗಿ ಬೋಧಿಸುತ್ತಿದ್ದನು. ತಂಗಾಳಿಗಳಲ್ಲಿ ತಿರುಗು ವುದರಿಂದಲೂ ದೇಹಪರಿಶ್ರಮವನ್ನು ಚೆನ್ನಾಗಿ ಮಾಡುವುದರಿಂದಲೂ ಉಂಟಾಗುವ ಸಂತೋಷವನ್ನು ಚಂದ್ರಮತಿಯು ಚೆನ್ನಾಗಿ ಅರಿತವಳಾಗಿ, ನೂರಾರುಮಂದಿ ದಾಸಿಯರಿದ್ದರೂ ತನ್ನ ಕೈತೋಟದಲ್ಲಿರುವ ಪುಷ್ಪಲತೆ ಗಳಿಗೆ ತಾನೇ ನೀರೆರೆಯುತ್ತೆ, ತಾನು ಬೆಳೆಯಿಸಿದ ಮಲ್ಲಿಗೆಯಲ್ಲಿ ಒಂದು ಹೂವು ಅರಳಿದರೂ, ದಾಳಿಂಬೆಯ ಗಿಡದಲ್ಲಿ ಒಂದು ಕಾಯಿ ಕಂಡರೂ, ಹೊರಗಣ ತೋಟಗಳಿಂದ ಗೂಡೆಯತುಂಬ ಹೂಗಳೂ ಕಾಯಿಗಳೂ ಬಂದುದಕ್ಕಿಂತ ಅತಿಶಯವಾದ ಆನಂದವನ್ನು ಹೊಂದುತ್ತಿದ್ದಳು. ಒಂದು ದಿನ ಸಾಯಂಕಾಲ ಚಂದ್ರಮತಿಯು ಗುರುವಿನೊಡನೆ ಹೂದೋಟದಲ್ಲಿ