ಈ ಪುಟವನ್ನು ಪ್ರಕಟಿಸಲಾಗಿದೆ
58
ಚ೦ದ್ರಮತಿ.

ತಾನು ಕೊಡುವೆನೆಂದು ವಾಗ್ದಾನವನ್ನು ಮಾಡಲು, ಅಪರಿಮಿತವಾದ ಧನವನ್ನು ಆತನಿಂದ ತೆಗೆದುಕೊಂಡು, ತಾನು ತಿರುಗಿ ಬಂದು ಕೇಳುವವರೆಗೂ ಅವನ್ನೆಲ್ಲ ರಕ್ಷಿಸಿಕೊಂಡಿರಬೇಕೆಂದು ಹೇಳಿ ಆ ಹಣವನ್ನೆಲ್ಲ ಅಲ್ಲಿಯೇ ಇಟ್ಟು ಹರಿಶ್ಚಂದ್ರನನ್ನೊಪ್ಪಿಸಿ ಹೊರಟುಹೋದನು.

ಒಂದೆರಡು ದಿನಗಳಾದ ಬಳಿಕ ಅರಣ್ಯ ಪ್ರಾಂತಗಳಲ್ಲಿರುವ ಗ್ರಾಮಸ್ದರೆಲ್ಲರೂ ಒಟ್ಟಾಗಿ ಬಂದು ಒಡ್ಡೋಲಗದಲ್ಲಿರುವ ಹರಿಶ್ಚಂದ್ರನನ್ನು ಕಂಡು "ಎಲೈ, ಮಹಾಪ್ರಭುವೇ! ನಮ್ಮ ಗ್ರಾಮಗಳಲ್ಲಿ ದುಷ್ಟ ಮೃಗಗಳ ಬಾಧೆಯು ಸಹಿಸಲಸಾಧ್ಯವಾಗಿರುವುದು. ಅವುಗಳನ್ನು ಸಂಹರಿಸಿ, ನಮ್ಮನ್ನೂ ನಮ್ಮ ಬೆಳೆಗಳನ್ನೂ ಸಂರಕ್ಷಿಸಬೇಕು” ಎ೦ದು ಮೊರೆಯಿಟ್ಟರು. ಹರಿಶ್ಚಂದ್ರನು ಅವರ ಮೊರೆಯನ್ನು ಕೇಳಿ ಅಭಯವನ್ನು ಕೊಟ್ಟು ಎಲ್ಲರನ್ನೂ ಕಳುಹಿಸಿ, ಬಲೆ ಬೋನು ಮೊದಲಾದ ಸಾಧನಗಳೊಡನೆ ಬೇಟೆಯ ನಾಯಿಗಳನ್ನು ಸಂಗಡ ಬಿಟ್ಟುಕೊಂಡು ಬರಬೇಕೆಂದು ಬೇಟೆಗಾರರಿಗಾಜ್ಞಾಪಿಸಿ, ವಿನೋದವನ್ನು ನೋಡಲೋಸುಗ ಪತ್ನಿಯನ್ನೂ ಪುತ್ರನನ್ನೂ ಕರೆದುಕೊಂಡು ತಾನೂ ಬೇಟೆಗೆ ಹೊರಟನು.

ಹೀಗೆ ಮೃಗಯಾವಿಹಾರಾರ್ಥಿಯಾಗಿ ಹೋಗಿ ಹರಿಶ್ಚಂದ್ರನು ಹುಲಿಗಳನ್ನೂ ಕಾಡುಹಂದಿಗಳನ್ನೂ ಚಿರತೆಗಳನ್ನೂ ಕೊಂದು, ನಾನಾವಿಧ ಮೃಗಗಳನ್ನು ಆ ಬೇಟೆಗಾರರಿಗೆ ಬಹುಮಾನವನ್ನಾಗಿ ಕೊಟ್ಟು ಕಳುಹಿಸಿ ಸಮುಚಿತಪರಿವಾರದೊಡನೆ ಹೊರಟು ಒಂದು ದೊಡ್ಡ ಗುಡಾರವನ್ನು ಹಾಕಿಸಿ, ವನಸಂಚಾರದಿಂದ ಬಳಲಿದ್ದವನಾದುದರಿಂದ ಆ ಹೊತ್ತು ಅಲ್ಲಿಯೇ ನಿಂತು ಪತ್ನಿ ಪುತ್ರರೊಡನೆ ಸುಖಿಸುತ್ತಿದ್ದನು. ಪತ್ನಿಯು ಯೋಗ್ಯಳಾದರೆ ಪತಿಗೆ ಮಹಾರಣ್ಯವಾದರೂ ದಿವ್ಯಭವನವಾಗಿ ತೋರುವುದೂ, ಪತ್ನಿಯು ಅಯೋಗ್ಯಳಾಗಿದರೆ ಪತಿಗೆ ಸುಂದರವಾದ ಭವನವೂ ಮಹಾರಣ್ಯವಾಗಿ ತೋರುವುದೂ ಸಹಜವೇ ಅಲ್ಲವೇ? ಹರಿಶ್ಚಂದ್ರನು ಪತ್ನಿಯೊಡನೆ ವಿನೋದವಾಗಿ ಸಲ್ಲಾಸಮಾಡುತ್ತಿರುವಾಗ, ಲೋಹಿತಾಸ್ಯನು ಸಮಾಜದಲ್ಲಿ ಆಡಿಕೊಳ್ಳುತ್ತೆ ದೂರದಲ್ಲಿದ್ದ ಒಂದು ಹುಲ್ಲೆಯಮರಿಯನ್ನು ಕಂಡು ಅದನ್ನು ತಂದುಕೊಡೆಂದು ತಂದೆಯನ್ನು ಕೇಳಿದನು. ಹರಿಶ್ಚಂದ್ರನು ತತ್‌ ಕ್ಷಣವೇ ಎದ್ದು ಹುಲ್ಲೆಯ ಮರಿಯನ್ನು ಸಜೀವವಾಗಿಯೇ ತಂದುಕೊಡ