ಶ್ರೀ
ಚಂದ್ರಮತಿ
ಮೊದಲನೆಯ ಪ್ರಕರಣ
ಪೂರ್ವಕಾಲದಲ್ಲಿ ಚೇದಿದೇಶಕ್ಕೆ ಪ್ರತಿಷ್ಠಾನವೆಂಬ ನಗರವು ರಾಜ ಧಾನಿಯಾಗಿದ್ದಿತ್ತು. ಅದನ್ನು ಉಶೀನರನೆಂಬ ರಾಜನು ಪರಿಪಾಲಿಸುತ್ತಿದನು. ಈತನಿಗೆ ಸುನಂದೆಯೆಂಬ ನಾರೀಮಣಿಯು ಪತ್ನಿಯಾಗಿದಳು. ಈ ದಂಪತಿಗಳಿಗೆ ಬಹುಕಾಲ ಮಕ್ಕಳೇ ಇಲ್ಲದೆ ಕಡೆಗೆ ಒಂದು ಹೆಣ್ಣು ಮಗುವು ಹುಟ್ಟಿತು. ಉಶೀನರನು ಆ ಮಗುವಿಗೆ ಚಂದ್ರಮತಿಯೆಂದು ನಾಮಕರಣ ಮಾಡಿ, ಲೋಕೈಕಸುಂದರಿಯಾಗಿ ಆ ಮಗುವನ್ನು ಬಹು ಪ್ರೀತಿಯಿಂದ ಪೋಷಿಸುತ್ತಿದನು. ಆ ಮಗುವಿನ ಕಾಲಾದರೂ ನೆಲಕ್ಕೆ ಸೋಕದಂತೆ ಮಾತಾಪಿತೃಗಳಿಬ್ಬರೂ ತಮ್ಮ ತೊಡೆಯಮೇಲೆಯೇ ನಿರಂತರವೂ ಅದನ್ನೆತ್ತಿ ಕೊಂಡು ಸಾಕುತ್ತೆ, ತಮ್ಮಮುಂದೆ ಮೆಲ್ಲಮೆಲ್ಲನೆ ದಟ್ಟಡಿಗಳನ್ನಿಟ್ಟು ನಡೆದಾಡುವ ಮಗುವನ್ನು ಮನದಣಿಯೆ ನೋಡಿ ನೇತ್ರೋತ್ಸವವನ್ನು ಹೊಂದಿ ಪರಮಾನಂದಭರಿತರಾಗುತ್ತಿದ್ದರು. ಅವಳ ಅಸ್ಪಷ್ಟವಾದ ಮುದ್ದುಮಾತಾದರೋ ತಾಯ್ತಂದೆಗಳ ಕಿವಿಗಳಿಗೆ ಸುಶ್ರಾವ್ಯವಾದ ಸಂಗೀತನಾದಕ್ಕಿಂತ ಇ೦ಪಾಗಿದ್ದಿತು. ರೂಪದಲ್ಲಿ ರಂಭೆಗಿ೦ತ ಸು೦ದರಿಯರಾದ ಸ್ತ್ರೀಯರೂ ಆ ಚ೦ದ್ರಮತಿಯ ಸೊಬಗನ್ನು ಕಂಡು ತಲೆಬಾಗಿಸುತ್ತಿದ್ದರು. ಸುನಂದೆಯು ತಾನು ವಿದ್ಯಾವತಿಯಾಗಿದ್ದುದರಿಂದ, ವಿದ್ಯೆಯಿಂದುಂಟಾ