ತನ್ನ ಶಿಷ್ಯರಲ್ಲಿ ಒಬ್ಬನನ್ನು ಕರೆದು ತತ್ಕ್ಷಣವೇ ಆ ಪಟ್ಟಣದ ರಾಜನ ಬಳಿಗೆ ಕಳುಹಿಸಿದನು. ಕೆಲಹೊತ್ತಿನೊಳಗಾಗಿ ಅರಸನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿವರ್ಗದೊಡನೆ ರುದ್ರಭೂಮಿಗೆ ಬಂದನು. ಆಗ ಸಮಸ್ತ ಜನರೂ ಕೇಳುತ್ತಿರಲು ವಿಶ್ವಾಮಿತ್ರನು ಆ ದಂಪತಿಗಳೇ ಚಂದ್ರಮತೀ ಹರಿಶ್ಚಂದ್ರರೆಂದೂ, ತನಗೂ ವಸಿಷ್ಠನಿಗೂ ಪಂತವುಂಟಾಗಿ ಅವರಿಂದ ಅಸತ್ಯವನ್ನಾಡಿಸಬೇಕೆಂದು ತಾನು ಅವರನ್ನು ಹಲವುಬಗೆಯಾಗಿ ಶ್ರಮಗೊಳಿಸಿ ಕಡೆಗೆ ತಾನೇ ಪರಾಜಿತನಾದೆನೆಂದೂ, ಚಂದ್ರಮತಿಯು ನಿರಪರಾಧಿನಿಯೆಂದೂ, ಅರ್ಧರಾತ್ರೆ ಸಮಯದಲ್ಲಿ ತಾನೇ ತನ್ನ ಶಿಷ್ಯರಿಂದ ರಾಜಾಂತಃಪುರಕ್ಕೆ ಕನ್ನವನ್ನು ಹಾಕಿಸಿ ರಾಜಪುತ್ರನನ್ನು ತರಿಸಿದೆನೆಂದೂ, ಆ ಮಗುವಿನ ಆಭರಣಗಳನ್ನು ಆಕೆಯುಡಿಯಲ್ಲಿ ಹಾಕಿ ಬಳಿಕ ರಾಜಭಟರನ್ನು ಕರೆತಂದು ಅವಳನ್ನವರ ಅಧೀನೆಯನ್ನಾಗಿ ಮಾಡಿದವನು ತನ್ನ ಶಿಷ್ಯನೇ ಎಂದೂ, ನಂಬುಗೆಯುಂಟಾಗುವಂತೆ ಹೇಳಿ, ಆ ಕುಮಾರನನ್ನು ಕರೆಯಿಸಿ ಅರಸನಿಗೆ ಸಮರ್ಪಿಸಿದನು. ರಾಜನೂ ವಿಸ್ಮಿತನಾಗಿ ಆ ದಂಪತಿಗಳನ್ನೂ ವಿಶ್ವಾಮಿತ್ರನನ್ನೂ ಬಹುವಿಧವಾಗಿ ಶ್ಲಾಘಿಸಿ ಹರಿಶ್ಚಂದ್ರನನ್ನಾಲಿಂಗಿಸಿದನು. ಆಗ ಅಲ್ಲಿ ನೋಡುವುದಕ್ಕೋಸುಗ ಬಂದಿದ್ದವರಲ್ಲಿ ಕಾಲಕೌಶಿಕನೂ, ವೀರಬಾಹುವೂ ಇದ್ದರು. ವಿಶ್ವಾಮಿತ್ರನು ಅವರಿಬ್ಬರನ್ನೂ ಅರಸನ ಸಮ್ಮುಖಕ್ಕೆ ಕರೆತಂದು, ಅವರಿಂದ ತೆಗೆದುಕೊಂಡಿದ್ದ ಹಣವನ್ನು ಅವರಿಗೆ ಹಿಂತಿರುಗಿಸಿ, ಚಂದ್ರಮತೀ ಹರಿಶ್ಚಂದ್ರರನ್ನು ದಾಸ್ಯದಿಂದ ವಿಮುಕ್ತರನ್ನಾಗಿ ಮಾಡಿದನು. ತರುವಾಯ ಸರ್ಪದಷ್ಟನಾಗಿ ಮೂಛೆ೯ಯನ್ನು ಹೊಂದಿ ಮೃತನಾದಂತೆ ಮಲಗಿದ್ದ ಲೋಹಿತಾಸ್ಯನ ಬಳಿಗೆ ಹೋಗಿ ತನ್ನ ಸಮಾಪದಲ್ಲಿದ್ದ ದಿವ್ಯೌಷದಗಳನ್ನು ಪ್ರಯೋಗಿಸಿ ಆತನನ್ನು ಸಜೀವನನ್ನಾಗಿ ಮಾಡಿ ಚಂದ್ರಮತಿ ಹರಿಶ್ಚಂದ್ರರಿಗೆ ಅಪರಿಮಿತಾನಂದವನ್ನುಂಟುಮಾಡಿಸಿದನು. ಆಗಳಲ್ಲಿಗೆ ಬಂದಿದ್ದವರೆಲ್ಲರೂ ಚಂದ್ರಮತೀ ಹರಿಶ್ಚಂದ್ರರ ಧೈರ್ಯಸ್ಫೈರ್ಯಗಳಿಗೂ, ಧರ್ಮಪರಾಯಣತೆಗೂ ಮೆಚ್ಚಿ ಬಗೆಬಗೆಯಾಗಿ ಕೊಂಡಾಡಿದರು. ಕೆಲದಿನಗಳಲ್ಲಿ ಅವರ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸಿತು. ಅಷ್ಟರಲ್ಲಿ ಆ ಕಾಶೀದೇಶದ ರಾಜನು ಚಂದ್ರಮತೀ ಹರಿಶ್ಚಂದ್ರರನ್ನು ತನ್ನ ಹಿಂದೆ ಕರೆದು ಕೊಂಡುಹೋಗಿ ಕೆಲದಿನಗಳವರೆಗೂ ತನ್ನ ಮನೆಯಲ್ಲಿಟ್ಟುಕೊಂಡಿದ್ದು, ಸರ್ವವಿಧಗಳಲ್ಲಿಯೂ ಅವರನ್ನು ಸತ್ಕರಿಸಿ, ಅವರಿಗೆ ತನ್ನ ಸೈನ್ಯವನ್ನು
ಪುಟ:ಚಂದ್ರಮತಿ.djvu/೮೩
ಈ ಪುಟವನ್ನು ಪ್ರಕಟಿಸಲಾಗಿದೆ
೭೬
ಚ೦ದ್ರಮತಿ.