ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಂದ್ರಶೇಖರ. ರಾಮಚರಣನು, ನನ್ನ ಕಾಲು ಸರಿಯಾಗುವಹಾಗೆ ಹುಕುಂ ಕೊಡಿಸಬೇಕೆಂದನು. ಅವಿಯಟನು ನಕ್ಕು, ಒಳ್ಳೆದುದು, ನಮ್ಮ ಸಂಗಡಲೆ ಇರು, ಔಷಧ ಕೊಡುವೆ ನೆಂದನು. ರಾಮಚರಣನಿಗೆ ಅದೇ ಬೇಕಾಗಿತ್ತು, ಪ್ರತಾಪನು ಕೈದಿಯಾಗಿದ್ದನು. ರಾಮು ಚರಣನಿಗೆ ಅವನಸಂಗಡಲೆ ಇರಬೇಕೆಂದು ಇಷ್ಟ ಆದುದರಿಂದ ತಾನಾಗಿಯೆ ಆ ಅಮಿಯಟನ ಸಂಗಡ ಹೋಗಿದ್ದನು. ಅವನ ಕೈದಿಯಾಗಿರಲಿಲ್ಲ. ಯಾವ ರಾತ್ರಿ ಪ್ರತಾಪನು ಪಲಾಯನವಾಗಿ ಹೋದನೋ ಆ ರಾತ್ರಿಯ ರಾಮಚ ರಣನು ಯಾರಿಗೂ ಏನೂ ಹೇಳದೆ ಹಡಗಿನಿಂದಿಳಿದು ಮೆಲ್ಲಮೆಲ್ಲಗೆ ಹೊರಟುಹೋದನು ಹೊರಟುಹೋಗುವಾಗ ರಾಮಚರಣನು ಅನ್ನುವಾದ ಸ್ಮರದಿಂದ, ಈ ಟಸಪುಸು ಮಾತನಾಡುವವರ ತಂದೆ ತಾಯಿ, ತಂಗಿಗಳ ಸಂಬಂಧವಾಗಿ ನಿಂದಾಸೂಚಕವಾದ ಮಾತು ಗಳನ್ನು ಹೇಳಿಕೊಳ್ಳುತ್ತ ಹೋದನು. ಕಾಲು ಸರಿಯಾಗಿ ವಾಸಿಯಾಗಿತ್ತು.