ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧00 ಚಂದ್ರಶೇಖರ. ಮಸ್ತಕದಲ್ಲಿ ನಕ್ಷತ್ರ ಕಿರೀಟವನ್ನು ಧರಿಸಿ ಭುವನಮೋಹನವಾದ ನಗುವನ್ನು ನಗುತ್ತ ಭುವನವನ್ನು ಮೋಹಗೊಳಿಸಿದೆ. ಗಂಗೆಯ ಕುದ್ರೋರ್ಮಿಗಳನ್ನು ಪುಷ್ಪಮಾಲೆಗಳ ಸ್ನಾಗಿ ಕಟ್ಟಿ ಪುಪ್ಪಪುಪ್ಪದಲ್ಲಿಯ ಚಂದ್ರನನ್ನು ತೂಗಲಾಡಿಸಿದೆ. ಗಂಗೆಯು ಹೃದ ಯದಲ್ಲಿ ಮಧುರವಾದ ನೀಲಿಮಾವನ್ನು ಹರಡಿ ಅದರಲ್ಲಿ ಎಷ್ಟೋ ಸುಖದಿಂದ ಯುವತಿ ಯುವಕರನ್ನು ತೇಲಾಡಿಸಿದೆ. ನಿನಗೆ ಎಷ್ಟು ಆದರ ! ನೀನು ಎಷ್ಟು ಆದರ ಮಾಡಿದೆ ! ಇಂದೇನು, ಹೀಗೇತಕ್ಕೆ? ನೀನು ನಂಬಗೆಗೆ ಯೋಗ್ಯವಲ್ಲದ ಸರನಾತಿನೀ, ನೀನು ಪ್ರಾಣಿಗಳನ್ನು ಹೀಗೇತಕ್ಕೆ ಪೀಡಿಸುವೆಯೋ ಗೊತ್ತಾಗುವುದಿಲ್ಲ. ನಿನಗೆ ಬುದ್ದಿ ಯಿಲ್ಲ, ಜ್ಞಾನವಿಲ್ಲ, ಚೇತನವಿಲ್ಲ. ಆದರೆ ನೀನು ಸರಮಯಿ, ಸರಕೃರ್ತಿ: ಸರನಾಶಿನಿ ಮತ್ತು ಸರ ಶಕ್ಕೆ, ನೀನು ಈಶ್ವರನ ಮಾಯೆ, ನೀನು ಈಶ್ವರನ ಕೀರ್ತಿ, ನೀನೇ ಅಜೇಯ, ನಿನಗೆ ಕೋಟಿಕೋಟಿ ನಮಸ್ಕಾರಗಳು ! - ಬಹಳ ಹೊತ್ತಿನಮೇಲೆ ಎಳೆದು ನಿಂತಿತು. ಬಿರುಗಾಳಿಯು ನಿಲ್ಲಲಿಲ್ಲ. ಸ್ವಲ್ಪ ಕಡಮೆಯಾಯಿತು, ಅಂಧಕಾರವು ಗಾಢತರವಾಯಿತು. ಬೆವಲಿನಿಯು ಮಳೆ ಬಂದು ಜಾರಿಕೆಯಾಗಿರುವ ಕಾರಣ ಪರ್ವತವನ್ನು ಹತ್ತುವುದೂ ಇಳಿಯುವುದೂ ಎರಡೂ ಅಸಾ ಧ್ಯವೆಂದು ತಿಳಿದಳು, ಅವಳು ಅಲ್ಲಿಯೇ ಕುಳಿತುಕೊಂಡು ಆ ಚಳಿಯಲ್ಲಿ ನಡುಗುತ್ತಿ ದೃಳು. ಆಗ ಅವಳ ಗಾರ್ಹಸ್ಟಸುಖಪೂರ್ಣವಾದ ವೇದಗ್ರಾಮವಾದ ಪತಿಯು ಗೃಹವು ಜ್ಞಾಪಕಕ್ಕೆ ಬಂದಿತು. ಅವಳ ಮನಸ್ಸಿನಲ್ಲಿ ಇನ್ನೊಂದು ತಡವೆ ಆ ಸುಖಾಗಾರವನ್ನು ನೋಡಿದರೆ ಸುಖದಿಂದ ಸಾಯುವೆನು, ಅದು ಹಾಗಿರಲಿ, ಇನ್ನು ಸರೋದಯ ವನ್ನೂ ನೋಡಲಾರೆನೆಂದು ತೋರುತ್ತದೆ. ಬಾರಿಬಾರಿಗೂ ನಾನು ಕೋರುತ ಲಿದೆ ಮೃತ್ಯುವು ಇಂದು ಸನ್ನಿಹಿತವಾಗಿದೆಯೆಂದು ಯೋಚಿಸುತಲಿದ್ದಳು, ಈ ಸಮುದುದಲ್ಲಿ ಆ ಮನುಷ್ಯ ಶೂನ್ಯವಾದ ಪರ್ವತದಲ್ಲಿ, ಆ ಅಗಮ್ಯವಾದ ವನಮಧ್ಯ ದಲ್ಲಿ, ಆ ಮಹಾಘೋರವಾದ ಅಂಧಕಾರದಲ್ಲಿ ಯಾರೋ ಒಬ್ಬ ಮನುಷ್ಯನು ಶೈವಲಿನಿಯ ಮೈಮೇಲೆ ಕೈಯಿಟ್ಟಹಾಗಾಯಿತು. - ಶೈವಲಿನಿಯು ಮೊದಲು ಬರಾವದೊ ಅಡವಿಯ ಮೃಗವಿರಬೇಕೆಂದು ತಿಳಿದಳು. ಕೈವಲಿನಿಯು ಕುಳಿತೇ ಇದ್ದಳು. ಆದರೆ ಆ ಹಸ್ತ ಸ್ಪರ್ಶವಾಯಿತು. ಸ್ಪಷ್ಮವಾಗಿ ಮನುಷ್ಯನ ಹಸ್ತಸ್ಪರ್ಶ: ಕತ್ತಲೆಯಲ್ಲಿ ಯಾವದೂ ಗೊತ್ತಾಗದು, ಶೈವಲಿನಿಯು ಭಯದಿಂದ ವಿಕೃತವಾದ ಸ್ವರದಿಂದ, ನೀನು ಯಾರು ? ದೇವತೆಯೊ, ಮನುಷ್ಯನೊ ? ಎಂದು ಕೇಳಿದಳು, ಮನುಷ್ಯನಿಂದ ಶೈವಲಿನಿಗೆ ಭಯವಿಲ್ಲ, ಆದರೆ ದೇವತೆಯಾಗಿ. ದ್ದರೆ ಭಯ, ಏತಕ್ಕೆಂದರೆ, ದೇವತೆಗಳು ದಂಡವಿಧಾಯಕರು. ಯಾರೂ ಉತ್ತರವನ್ನು ಕೊಡಲಿಲ್ಲ. ದೇವತೆಯ ಆಗಲಿ, ಮಾನವನೆ ಆಗಲಿ ಅವಳನ್ನು ಎರಡು ಕೈಗಳಿಂದಲೂ ಹಿಡಿದುಕೊಂಡಹಾಗಾಯಿತು. ಅವಳ ಭುಜದ ಮೇಲೆ ಉಪ್ಪವಾದ ನಿಶ್ವಾಸವು ಬಿದ್ದ ಹಾಗೆ ಅನುಭವ ಮಾಡಿದಳು. ಬಂದು ಕೈಯ