ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಭಾಗ. ೧oX ದರು. ಎರಡನೆಯದು, ಶೈವಲಿನಿಯು ಸತ್ತಳು. ಮೂರನೆಯದು, ನನ್ನನ್ನು ಕೈದಿ ನಲ್ಲಿಟ್ಟಿದ್ದರು. ನಾಲ್ಕನೆಯದು, ಹೀಗೆಯೆ ಬೇರೆ ಜನರಿಗೂ ಅನಿಷವನ್ನುಂಟು ಮಾಡಿದ್ದಾರೆ, ಮುಂದೆಯೂ ಮಾಡುವರು. ಐದನೆದುದು, ನಾನು ನಬಾಬನಿಗೆ ಹೀಗೆಲ್ಲಾ ಸಹಾಯವನ್ನು ಮಾಡಿದರೆ ಅವನು ನನಗೆ ಇನ್ನೂ ಒಂದೆರಡು ತಾಲ್ಲೂಕುಗಳನ್ನು ಜಹ ಗೀರಾಗಿ ಕೊಡುವನು ಎಂದು ಆಲೋಚಿಸಿಕೊಂಡನು. ಆದುದರಿಂದ, ನಾನು ಹೀಗೆಲ್ಲಾ ಮಾಡುವೆನೆಂದು ಖಂಡಿತ ಮಾಡಿಕೊಂಡನು. ಅನಂತರ ಪ್ರತಾಪನು ಮಂತ್ರಿಗಳನ್ನೆಲ್ಲಾ ಸಂತೋಷಗೊಳಿಸಿ, ಆಮೇಲೆ ಹೋಗಿ ನಬಾಬನನ್ನು ನೋಡಿದನು. ಅವನು ನವಾಬನ ಸಂಗಡ ಏನೇನು ಮಾತನಾಡಿದ ಅದು ಹೊರಗಡಲಿಲ್ಲ. ನಬಾಬನನ್ನು ನೋಡಿದಮೇಲೆ ಅವನು ಸ್ವದೇಶಾಭಿಮುಖವಾಗಿ ಹೊರಟುಹೋದನು. ಅನೇಕ ದಿನಗಳನಂತರ ಊರಿಗೆ ಬಂದಮೇಲೆ .ರೂಪಸಿಯು ಚಿಂತೆದು ದೂರವಾ ಯಿತು. ಅವಳು ಕೈವಲಿನಿದು ಮರಣಸಮಾಚಾರವನ್ನು ಕೇಳಿ, ದುಃಖಿತೆಯಾದಳು. ಪ್ರತಾಪನು ಹಿಂದಿರುಗಿ ಬಂದನೆಂದು ಕೇಳಿ ಸುಂದರಿಯು ಅವನನ್ನು ನೋಡುವುದಕ್ಕೆ ಹೋದಳು. ಅವಳೂ ಶೈವಲಿನಿಯು ಮರಣಸಮಾಚಾರವನ್ನು ಕೇಳಿ ಬಹಳ ದುಃಖಪ ಟ್ಕಳು, ಆದರೆ ಆಗತಕ್ಕದ್ದು ಆಗಿಹೋಯಿತು, ಅವಳು ಇರುವುದಕ್ಕಿಂತಲೂ ಸತ್ತದ್ದೆ ಸುಖವಾಯಿತೆಂದು ಯಾವ ಬಾಯಿಯಿಂದ ಹೇಳಲೆಂದಂದುಕೊಂಡಳು. - ಪ್ರತಾಪನು ರೂಪಸಿಯನ್ನೂ ಸುಂದರಿಯನ್ನೂ ನೋಡಿದಮೇಲೆ ಪುನಃ ಗೃಹತ್ಯಾಗ ಮಾಡಿ ಹೊರಟುಹೋದನು. ಅವನು ಹೊರಟುಹೋದ ಸ್ವಲ್ಪ ಕಾಲದಲ್ಲಿಯೇ ಮಾಂಗೀರು ಕಟ್ಟಾ ಮುಂತಾದ ಪ್ರದೇಶಗಳಲ್ಲೆಲ್ಲಾ ಕಳ್ಳರೂ ದೊಣ್ಣೆಯವರೂ ಬಹಳ ಹಾವಳಿ ಮಾಡುತ್ತಾರೆಂದೂ, ಅವರನ್ನೆಲ್ಲಾ ಪ್ರತಾಪನು ಗುಂಪು ಕಟ್ಟಿಕೊಂಡಿದ್ದಾನೆಂದೂ ಪ್ರವಾ ದವು ಎದ್ದಿತು. ಇದನ್ನು ಕೇಳಿ ಗುರಗಣಖಾನನಿಗೆ ಯೋಚನೆಯುಂಟಾಯಿತು. ಸಿ. 14