ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ನಾಲ್ಕನೆಯ ಭಾಗ. ಸ್ಥಿರವಾಗಿ, ಗಂಭೀರವಾಗಿ, ಮಾಧುರಮದುವಾಗಿ, ಚಾಂಚಲ್ಯದಿಂದ ಕೂಲಸ್ಥಾವಿ ಯಾಗಿ, ತರಂಗಭಂಗದಿಂದ ಭೀಣಷವಾಗಿ, ಅಗತ್ಯವಾಗಿ, ಅಜೇಯವಾಗಿ ಭಯುಂ ಕರವಾಗಿರುವುದು ! ಅದನ್ನು ಏತಕ್ಕೆ ತಿ ದುಕೊಳ್ಳಲಾರದೆ ಹೋದೆ. ಏತಕ್ಕೆ ಮನ ೬ನಲ್ಲಿ ಗ್ರಹಣಮಾಡಲಾರದೆ ಹೋದೆ. ಏತಕ್ಕೆ ನನಗೆನಾನೇ ಪ್ರಾಣವನ್ನು ಕೊಟ್ಟು ಬಿಟ್ಟೆ ! ನಾನು ಎಷ್ಟರವಳು ? ಆತನಿಗೆ ಯೋಗ್ಯಳೆ ? ನಾನು ಬಾಲೆ, ಅಜ್ಞಾನಿ, ಅನಕ್ಷರಸ್ಥೆ, ಅಸತಿ ; ಆತನ ಮಹಿಮೆಯನ್ನರಿಯುಲಶಕ್ಕೆ; ಆತನ ಮುಂದೆ ನಾನೇನು ! ತೃಣಕ್ಕೂ ಸವನಲ್ಲ. ಸಮುದ್ರದಲ್ಲಿ ಚಿಪ್ಪಿನಹಾಗೆ, ಕುಸುಮದಲ್ಲಿ ಕೀಟದ ಹಾಗೆ, ಚಂದ ನಲ್ಲಿ ಕಳಂಕದಹಾಗೆ, ಚರಣದಲ್ಲಿ ರೇಣುಕಣದ ಹಾಗೆ ಇರುವವಳು ! ಆತನ ಮುಂದೆ ನಾನು ಯಾವುದೂ ಅಲ್ಲ. ಜೀವನದಲ್ಲಿ ದುಸ್ಸಪ್ನ ದಹಾಗೆ, ಹೃದಯದಲ್ಲಿ ವಿಸ್ಕೃತಿಯಿದ್ದ ಹಾಗೆ, ಸುಖಕ್ಕೆ ವಿಘ್ನ ನಿದ್ದ ಕಾಗೆ, ಆಕೆಯಲ್ಲಿ ಅಪನಂಬಿಕೆಯಿದ್ದ ಹಾಗೆ ಇದ್ದೇನೆ. ಆತನ ಮುಂದೆ ನಾನು ಯಾರು ? ಕೇವಲ ತುಚ್ಛಳು, ಸರೋ ವರದಲ್ಲಿ ಕೆಸರಿನಹಾಗೆ, ಮೃಣಾಳದಲ್ಲಿ ಕಂಟಕವಿದ್ದ ಹಾಗೆ, ಮೃದುವಾದ ಗಾಳಿಯಲ್ಲಿ ಧೂಳಿಯೆ ದಹಾಗೆ, ಅನಲದಲ್ಲಿ ಪತಂಗದಹಾಗೆ ಇರುವವಳು ! ನಾನು ಮುಣುಗಿದೆ. ಸಾಯಲಿಲ್ಲವೇತಕ್ಕೆ ? ಎಂದು ಹೀಗೆಲ್ಲಾ ಶೈವಲಿನಿದು ಮನಸ್ಸಿಗೆ ತೋರಿಬಂದಿತು. ಈ ಪ್ರಕಾರವಾಗಿ ಸ್ವಾಮಿಯು ಧ್ಯಾನವನ್ನು ಮಾಡೆಂದು ಹೇ ದಾತನು ಅನಂತವಾದ ಮಾನವ ಹೃದಯಸಮುದ್ರಕ್ಕೆ ಕಾಂಡಾರಿಯೇ ಸರಿ. ಎಲ್ಲಾ ತಿಳಿದವನು. ಆತನು ಈ ನಂತ ದಿಂದ, ಪ್ರವಾಹಿತವಾದ ನದಿಯನ್ನು ಬೇರೆ ದಿಕ್ಕಿಗೆ ತಿರುಗಿಸಲು ಬಲ್ಲವನು, ಈ ಮಂತ್ರದಿಂದ ಸರ್ವತವನ್ನು ಭೇದಿಸತಕ್ಕವನು, ಗಂಡೂಪದಿಂದ ಸಮುದ್ರವನ್ನೇ ಶುಷ್ಕ ವಾಗಿ ಪಾನಮಾಡಬಲ್ಲವನು. ಈ ಮಂತ್ರದಿಂದ ನಾದುವನ್ನು ಸ್ವಂಭಿತ ಮಾಡತಕ್ಕೆ ವನು, ಶೈವಲಿನಿಯ ಚಿತ್ರದಲ್ಲಿ ಚಿರಸವಾಹಿತವಾಗಿದ್ದ ನದಿಯು ಬೇರೆ ಮಾರ್ಗಕ್ಕೆ ತಿರುಗಿತು, ಬಟ್ಟವು ಒಡೆದು ಬಿದ್ದಿತು. ಸಮುದವು ಶೋಷಿಸಿತು, ವಾಯುವು ಸ್ತಂಭಿ ತವಾಯಿತು, ಶೈವಲಿನಿಯು ಪ್ರತಾಪನನ್ನು ಮರೆತು ಚಂದ್ರಶೇಖರನನ್ನು ಅತ್ಯಂತ ವಾಗಿ ಪ್ರೀತಿಸಿದಳು. ಮನುಷ್ಯನ ಇಂದ್ರಿಯಗಳು ಹೋಗುವ ಮಾರ್ಗವನ್ನು ಕಟ್ಟಬಿಡು, ಇಂದ್ರಿಯ ವನ್ನು ವಿಲುಪ್ತವಾಡು, ಮನಸ್ಸನ್ನು ಹಿಡಿದು ಕಟ್ಟು, ಕಟ್ಟ ಒಂದೇ ಮಾರ್ಗದಲ್ಲಿ ಬಿಡು, ಬೇರೆ ಮಾರ್ಗವನ್ನು ಕಟ್ಟಬಿಡು. ಮನಸ್ಸಿನ ಶಕ್ತಿಯನ್ನು ಅಪಹೃತನಾಡು. ಇಷ್ಟಾದಮೇಲೆ ಮನಸ್ಸು ಏನುತಾನೇ ಮಾಡಬಲ್ಲದು ? ಅದು, ತೋರಿಸಿಕೊಟ್ಟ ಒಂದೇ ವರ್ಗದಲ್ಲಿ ಹೋಗುವುದು, ಅದರಲ್ಲಿಯೇ ಸ್ಥಿರವಾಗುವುದು, ಅದರಲ್ಲಿಯೇ ಮಗ್ನ ವಾಗುವುದು, ಕೈವಲಿನಿದು ಐದು ದಿನಗಳಲ್ಲಿ ತಂದ ಫಲವಲಗಳನ್ನು ತಿನ್ನ ಲಿಲ್ಲ. ಆರನೆಯ ದಿನ ಫಲಮೂಲಗಳನ್ನು ತರಲು ಹೋಗಲಿಲ್ಲ. ಏಳನೆದು ದಿನ ಬೆಳಿಗ್ಗೆ, ಸ್ಮಾ ವಿಯ ಸಂದರ್ಶನವಾದರೂ, ಆಗದಿದ್ದರೂ ಇಂದು ಸಾಯುವೆನೆಂದು ಭಾವಿಸಿಕೊಂಡಳು. 15