ಮೂರನೆಯ ಪರಿಚ್ಛೇದ. ಇಮ! ತಾಪನು ಮುಣುಗಿಹೋದ ಸ್ಥಳಕ್ಕೆ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಹಡಗು ಹೋಗುತಲಿತ್ತು, ಅವರಲ್ಲಿದ್ದವನೊಬ್ಬನು ಪ್ರತಾಪನು ಮುಣುಗಿದುದನ್ನು ನೋಡಿದನು, ನೋಡಿ, ಅವನು ನೀರಿನಲ್ಲಿ ಧುಮುಕಿದನು, ಹಡಗಿನಿಂದ ಧುಮುಕಿದವನು, ಚಂದ್ರಶೇಖರ ಶರ್ಮ. ಚಂದ್ರಶೇಖರನು ಈಜಿಕೊಂಡು ಬಂದು ಪ್ರತಾಪನನ್ನು ಹಿಡಿದು ಎತ್ತಿ ಹಡಗಿನ ಮೇಲೆ ಹಾಕಿದನು, ಹಡಗಿನಮೇಲೆ ಹಾಕಿ, ಹಡಗನ್ನು ದಡಕ್ಕೆ ತಂದು ಪ್ರತಾಪ ನನ್ನು ಸಂಗಡ ಕರೆದುಕೊಂಡು ಹೋಗಿ ಅವನ ಮನೆಯಲ್ಲಿ ಬಿಟ್ಟು ಹೊರಟು ಹೋಗುತಲಿದ್ದನು. ಪ್ರತಾಪನ ತಾಯಿಯು ಬಿಡಲಿಲ್ಲ. ಚಂದ್ರಶೇಖರನ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿ, ಅವನಿಗೆ ಆದಿನ ಆತಿಥ್ಯವನ್ನು ಮಾಡಿಸಿದಳು. ಚಂದ್ರಶೇಖರನಿಗೆ ಒಳಸಂಗತಿ ಯೊಂದೂ ಗೊತ್ತಿರಲಿಲ್ಲ. ಕೈವಲಿನಿಯು ಪುನಃ ಪ್ರತಾಪನಿಗೆ ಮುಖ ತೋರಿಸಲಿಲ್ಲ. ಆದರೆ ಚಂದ್ರಶೇಖರನು ಅವಳನ್ನು ನೋಡಿದನು, ನೋಡಿ ಮುಗ್ಧನಾದನು. ಚಂದ್ರಶೇಖರನು ಆಗ ಇಲ್ಪ ತೊಂದರೆಯಲ್ಲಿದ್ದನು. ಅವನಿಗೆ ಮೂವತ್ತೆರಡು ವರುಷವಾಗಿಹೋಗಿತ್ತು, ಸನ್ಯಾಸಿಯಲ್ಲ, ಆದರೆ ಮದುವೆಯಾಗಿರಲಿಲ್ಲ. ದಾರಪರಿ ಗ್ರಹದಿಂದ ಜ್ಞಾನೋಪಾರ್ಜನೆಗೆ ವಿಘ್ರ ವುಂಟಾಗುವುದೆಂದು ಮದುವೆ ಮಾಡಿಕೊಳ್ಳುವುದ ರಲ್ಲಿ ನಿರುತ್ಸಾಹಿಯಾಗಿದ್ದನು, ಆದರೆ ಅವನ ತಾಯಿಯು ಸ್ವರ್ಗಸ್ಥೆಯಾಗಿ ವರುಷದ ಮೇಲಾಗಿತ್ತು, ಅದರಿಂದ ಈಗ ಮದುವೆ ಮಾಡಿಕೊಳ್ಳದಿದ್ದರೆ ಜ್ಞಾನೋಪಾರ್ಜನೆಗೆ ವಿಘ್ನ ವುಂಟಾಗುವುದೆಂದು ತೋರಿತು. ಮೊದಲು, ಸ್ವಹಸ್ತದಿಂದ ಸ್ವಯಂಪಾಕ ಮಾಡಿ ಕೊಳ್ಳಬೇಕಾಗಿಬಂದಿತು. ಅದರಲ್ಲಿ ಬಹಳ ಹೊತ್ತು ಹೋಗುತಲಿತ್ತು, ಅಧ್ಯಯನಕ್ಕೂ ಅಧ್ಯಾಪನಕ್ಕೂ ವಿಘ್ನ, ಎರಡನೆಯದು, ದೇವತಾರ್ಚನೆ. ಮನೆಯಲ್ಲಿ ಎರಡುಮೂರು ಕ್ಷೇತ್ರ ಸಾಲಗ್ರಾಮಗಳು, ಅದರ ಪೂಜೆಯನ್ನು ಅವನೇ ಸ್ವಂತವಾಗಿ ಮಾಡಬೇಕು. ಅದರಲ್ಲಿ ಬಹಳ ಕಾಲವು ಹೋಗುವುದು, ದೇವರ ಪೂಜೆಯು ನಿಲ್ಲಕೂಡದು, ನಿಂತರೆ ಗೃಹಸ್ಥ ಧರ್ಮಕ್ಕೆ ಲೋಪವುಂಟಾಗುವುದು. ಹಗಲೆಲ್ಲಾ ಆಹಾರದ ವ್ಯವಸ್ಥೆ ಮಾಡು ವುದೇ ಹಿಡಿಯುವುದು, ಪುಸ್ತಕಗಳು ಕಣ್ಣು ಮರೆಯಾಗಿ ಹೋದುವು. ಹುಡುಕಿದರೂ ನಿಕ್ಕದು, ಸಂಪಾದಿಸಿದ ದುಡ್ಡು ಇಡುವುದೆಲ್ಲಿ ? ಯಾರ ಕೈಯಲ್ಲಿ ಕೊಡಬೇಕು ?
ಪುಟ:ಚಂದ್ರಶೇಖರ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.