೧೩೦ ಚಂದ್ರಶೇಖರ. ಭಾಸ್ಕರ-ಅದು ನನ್ನಿಂದ ಸಾಗದು, ಅವರು ನನ್ನ ಹಡಗನ್ನು ಹಿಡಿಯುವರಾ ದರೆ ನನ್ನನ್ನು ಪ್ರಾಣದಿಂದ ಹೊಡೆದುಹಾಕಿಬಿಡುವರು. ದಲನೀ-ನಾನು ತಪ್ಪಿಸುವೆನು. ಫಾಸ್ಟ್ರನ-ಅವರು ನಿನ್ನ ಮಾತನ್ನು ಕೇಳುವುದಿಲ್ಲ, ನಿಮ್ಮ ದೇಶದ ಜನರು ಹೆಂಗಸರ ಮಾತನ್ನು ಗ್ರಾಹ್ಯವಾಗಿ ಅಂಗೀಕರಿಸುವುದಿಲ್ಲ. ದಲನಿಯು ವ್ಯಾಕುಲದಿಂದ ವಿವೇಕ ಶೂನೈಯಾಗಿ ಶುಭಾಶುಭವನ್ನರಿಯದೆ ಹೋ ದಳು. ಆ ಚಿಕ್ಕ ಹಡಗು ನಬಾಬನ ಹಡಗಾಗದೆ ಹೋದರೆ ಏನಾದೀತೋ ಅದನ್ನವಳು ಯೋಚಿಸಲಿಲ್ಲ, ಈ ಹಡಗು ನಬಾಬನ ಹಡಗಾಗಿರಲಾರದೆಂಬ ಅಂಶವೇ ಅವಳ ಮನ ಸ್ಸಿಗೆ ಹೊಳೆಯಲಿಲ್ಲ. ವ್ಯಾಕುಲತೆಯ ದೆಸೆಯಿಂದ ತನ್ನನ್ನು ತಾನೇ ವಿಪತ್ತಿಗೊಳಗಾ ದಳು, ಅವಳು ಹಿಂದುಮುಂದೆ ಯೋಚಿಸದೆ, ಹಾಗಾದರೆ ನನ್ನನ್ನು ತೀರದಲ್ಲಿಳಿಸಿಬಿಟ್ಟು ನೀನು ಹೊರಟುಹೋಗೆಂದು ಹೇಳಿದಳು. ಭಾಸ್ಕರನು ಆನಂದದಿಂದ ಸಮ್ಮತಿಸಿ ಹಡಗನ್ನು ದಡಕ್ಕೆ ತಗಲಿಸುವಂತೆ ಅಪ್ಪಣೆ ಮಾಡಿದನು. ಕುಲಸಂ.-ನಾನು ಹಡಗಿನಿಂದ ಇಳಿಯುವುದಿಲ್ಲ. ನಾನು ನಬಾಬನ ಕೈಗೆ ಬಿದ್ದರೆ ಏನಾಗುವೆನೋ ಹೇಳುವುದಕ್ಕಾಗುವುದಿಲ್ಲ. ನಾನು ಸಾಹೆಬನ ಸಂಗಡ ಕಲಿಕತ್ತೆಗೆ ಹೋಗುವೆನು, ಅಲ್ಲಿ ನನಗೆ ಕಂಡ ಜನರು ಇದ್ದಾರೆ. ದಲನೀ-ನೀನೇನೂ ಯೋಚಿಸಬೇಡ. ನಾನು ಬದುಕಿಕೊಂಡರೆ ನಿನ್ನನ್ನು ಬದು ಕಿಸುವೆನು. ಕುಲಸಂ-ನೀನು ಬದುಕಿಕೊಂಡರೆ ನನ್ನ ಗತಿಯೋ ? ಕುಲಸಂ ಏನು ಮಾಡಿದರೂ ಹಡಗನ್ನು ಬಿಟ್ಟು ಇಳಿಯಲು ಸಮ್ಮತಿಸಲಿಲ್ಲ, ದಲ ನಿಯು ಅವಳಿಗೆ ಬಹಳ ವಿನಯದಿಂದ ಹೇಳಿಕೊಂಡಳು. ಅವಳು ಅದಕ್ಕೆ ಕಿವಿಯೇ ಕೊಡಲಿಲ್ಲ. ಫಾಸ್ಟ್ರನು ಕುಲಸಂಬಿಯನ್ನು ಕುರಿತು, ಯಾರಿಗೆ ಗೊತ್ತು, ನಿನಗೋಸ್ಕರವೇ ಹಡಗು ಹಿಂದಟ್ಟಿ ಬರುವುದೇನೋ, ನೀನೂ ಇಳಿಯೆಂದನು. ಕುಲಸಂ-ನೀನು ನನ್ನನ್ನು ಬಿಟ್ಟು ಹೋದರೆ, ನಾನು ಆ ಹಡಗನ್ನೇರಿ ಆ ಅಂಬಿಗರಿ ಗೆಲ್ಲಾ ಹೇಳಿ ನಿನ್ನ ಹಡಗನ್ನು ಎಡಬಿಡದೆ ಬೆನ್ನಟ್ಟುವಹಾಗೆ ಮಾಡುವೆನು. ಭಾಸ್ಕರನು ಈ ಮಾತಿಗೆ ಹೆದರಿ ಏನೂ ಹೇಳಲಾರದೆಹೋದನು. ದನಿಯು ಕುಲಸವಿಗೋಸ್ಕರ ಕಣ್ಣೀರು ಬಿಟ್ಟು ಹಡಗಿನಿಂದ ಇಳಿದು ದಡಕ್ಕೆ ಹೋದಳು. ಆಗ ಸೂಯ್ಯಾಸ್ತಮಯಕ್ಕೆ ಸ್ವಲ್ಪ ಮಾತ್ರ ಹೊತ್ತಿತ್ತು. ಫಾಸ್ಟರನು ಹಡಗನ್ನು ಬಿಚ್ಚಿ ಕೊಂಡು ಹೊರಟುಹೋದನು.
ಪುಟ:ಚಂದ್ರಶೇಖರ.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.