ಐದನೆಯ ಭಾಗ. ೧೩೯ ಮಹಮದತಕಿಯು ನಬಾಬನಿಗೆ ಕಳುಹಿಸಿದ ಅರ್ಜಿಯಲ್ಲಿ, ಬೇಗಂ ದಳನಿದು ಅಮಿ ಯಟನ ಹಡಗಿನಲ್ಲಿ ಸಿಕ್ಕಿದವಳನ್ನು ತಕ್ಕ ಮರ್ಯಾದೆಯಿಂದ ಕೋಟೆಗೆ ಕರೆತಂದುದಾ ಯಿತು, ಆದರೆ ಆಕೆಯನ್ನು ಪುನಃ ಸರ್ಕಾರದ ಅಪ್ಪಣೆಯಿಲ್ಲದೆ ಹುಜೂರಿಗೆ ಕಳುಹಿಸಿ ಲಾರದವನಾಗಿದ್ದೇನೆ, ಇಂಗ್ಲೀಷರ ನಕರವಾನೇರು, ನಾವಿಕರು, ಸಿಖಾಯಿ ಮುಂತಾದ ಈಗ ಜೀವಿತರಾಗಿರುವವರು ಕಂಡೋಕ್ತವಾಗಿ ಹೇ ದುದರಲ್ಲಿ, ಬೇಗಂ ದಳನಿಯು ಅಮಿಯತನ ಉಪಪತ್ನಿ ಯಾಗಿ ಹಡಗಿನಲ್ಲಿ ವಾಸಮಾಡುತಲಿದ್ದಳೆಂದೂ, ಅವರಿಬ್ಬರೂ ಬಂದೇ ಶಯ್ಕೆಯಲ್ಲಿ ಮಲಗುತಲಿದ್ದರೆಂದೂ ತಿಳಿದುಬಂದುದಲ್ಲದೆ, ಈಗವಳು ಕ್ರಿಸ್ತನುತ ವನ್ನವಲಂಬಿಸಿದ್ದಾಳೆ, ಮಾಂಗೀರಿಗೆ ಬರುವುದಕ್ಕೆ ಆಕೆಗೆ ಇಷ್ಯವಿಲ್ಲ. ಆಕೆಯನ್ನು ಕೇಳಿದುದಕ್ಕೆ ತನ್ನನ್ನು ಬಿಟ್ಟುಬಿಡಬೇಕೆಂದೂ ತಾನು ಕಲಿಕತ್ತೆಗೆ ಹೋಗಿ, ಅಲ್ಲಿ ಅವಿ ಯಟನ ಸ್ನೇಹಿತರೊಂದಿಗೆ ವಾಸಮಾಡುವುದಾಗಿಯೂ, ಹಾಗೆ ಬಿಡದಿದ್ದರೆ ಯಾರಿಗೂ ಹೇಳದೆ ಓಡಿಹೋಗುವುದಾಗಿಯೂ, ಮಾಂಗೀರಿಗೆ ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊ ೪ುವುದಾಗಿಯೂ ಹೇಳುವಳು, ಈ ಸಂದರ್ಭದಲ್ಲಿ ಆಕೆಯನ್ನು ಮಾಂಗೀರಿಗೆ ಕಳುಹಿಸ ಬೇಕೇ ಅಥವಾ ಇಲ್ಲಿಯೇ ಇಟ್ಟುಕೊಂಡಿರಬೇಕೇ ಅಥವಾ ಬಿಟ್ಟುಬಿಡಬೇಕೇ ಎಂಬುವ ವಿಚಾರದಲ್ಲಿಯ ಅಪ್ಪಣೆಯನ್ನು ಇದಿರು ನೋಡಿಕೊಂಡಿದ್ದೇನೆ. ಆಪ್ಪಣೆಯಾಗುವ ಮೇರೆ ನಡೆದುಕೊಳ್ಳುವೆನು, ಎಂದು ಬಂದರ್ಜಿಯನ್ನು ಬರೆದು ನಬಾಬನಿಗೆ ಕಳುಹಿ ಸಿದನು. ಅರ್ಜಿಯನ್ನು ಕುದುರೆಯ ಸವಾರನು ತೆಗೆದುಕೊಂಡು ಮಾಂಗೀರಿಗೆ ಹೊರಟುಹೋ ದನು. ಕೆಲವರು ನಮಗೆ ತಿಳಿಯದೆ ದೂರದಲ್ಲಿ ಉಂಟಾಗುವ ಅಮಂಗಳ ಘಟನೆಯು ನಮ್ಮ ಗೋಚರಕ್ಕೆ ಬರುವುದೆಂದು ಹೇಳುವರು. ಇದು ನಿಜವೆಂದು ಹೇಳುವುದಕ್ಕಾಗುವು ದಿಲ್ಲ. ಆದರೆ ಯಾವ ಮುಹೂರ್ತದಲ್ಲಿ ಅಶ್ವಾರೋಹಿ ದೂತನು ಅರ್ಜಿಯನ್ನು ತೆಗೆದು ಕೊಂಡು ಮಾಂಗೀರಿಗೆ ಹೊರಟನೋ, ಅದೇ ಮುಹೂರ್ತದಲ್ಲಿ ದಲನಿಯ ಶರೀರವೆಲ್ಲಾ ರೋಮಾಂಚಿತವಾಯಿತು. ಆ ಮುಹೂರ್ತದಲ್ಲಿ ಆಕೆಯ ಪಾರ್ಶ್ವದಲ್ಲಿ ಕುಳಿತಿದ್ದ ಬಲಿಪ್ಪನಾದ ಪುರುಷನು ಮೊದಲು ಮಾತನಾಡಿದನು. ಅವನ ಕಂಠಸ್ಸರದ ದೋಷ ದಿಂದಲೋ, ಅಥವಾ ಅವಂಗಳ ಸೂಚನೆಯಾಗಿಯೋ, ಅಥವಾ ಮತ್ಯಾವಕಾರಣದಿಂ ದಲೋ ಆ ಮುಹೂರ್ತದಲ್ಲಿ ದಲನಿಯ ಶರೀರವೆಲ್ಲಾ ಕಂಟಕಿತವಾಯಿತು. ಪಾರ್ಶ್ವದಲ್ಲಿ ಕುಳಿತಿದ್ದವನು, ನಿನ್ನನ್ನು ಬಲ್ಲೆ , ನೀನು ದಲಿನೀಬೇಗಂ ಎಂದನ.. ದಲನಿಯು ನಡುಗಿದಳು. ಸಾರ್ಕ್ಷ್ಯದಲ್ಲಿದ್ದ ಮನುಷ್ಯನು ಪುನಃ, ದುರಾತ್ಮರು ನಿನ್ನನ್ನು ಈ ವಿಜನವಾದ ಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆಂದೂ ಬಲ್ಲೆನೆಂದನು. ದಲನಿಯ ಕಣ್ಣುಗಳಿಂದ ಪ್ರವಾಹವು ಹೊರಟಿತು. ಆಗಂತುಕನು, ಈಗ ನೀನು ಎಲ್ಲಿಗೆ ಹೋಗುವೆಯೆಂದನು.
ಪುಟ:ಚಂದ್ರಶೇಖರ.djvu/೧೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.