೧88 ಚಂದ್ರಶೇಖರ. ನನ್ನ ಅನುಮತಿಯಿಲ್ಲದೆ ಕೈವಲಿನಿಯನ್ನು ನೋಡಬೇಡ-ನೀನು ನಾನು ಹೇಳಿದಂತೆ ಕೆಲಸಮಾಡಿದರೆ ಕೈವಲಿನಿಗೆ ಪರಮೋಪಕಾರವಾಗುವುದೆಂದು ಹೇಳಿದನು. ಈ ಮಾತನ್ನು ಹೇಳಿದಮೇಲೆ ಚಂದ್ರಶೇಖರನು ಅಪ್ಪಣೆಯನ್ನು ತೆಗೆದುಕೊಂಡನು. ಅನಂತರ ರಮಾನಂದಸ್ವಾಮಿಯು ಅವನಿಗೆ ತಿಳಿಯದೆ ಅಂಧಕಾರದಲ್ಲಿ ಗುಹೆಗೆ ಪ್ರವೇಶ ಮಾಡಿದನು. - ಅನಂತರ ನಡೆದುದೆಲ್ಲಾ ಪಾಠಕಮಹಾಶದುರ ಸ್ಮರಣೆಯಲ್ಲಿದೆ. ಉನ್ಮಾದಗ್ರಸ್ತೆಯಾದ ಶೈವಲಿನಿಯನ್ನು ಚಂದ್ರಶೇಖರನು ರವಾನಂದಸ್ವಾಮಿಯ ವಶದಲ್ಲಿ ಆ ಗುಹೆಯಲ್ಲಿ ಬಿಟ್ಟು ಹೋದನು. ಅಳುತ್ತ, ಹ, ಗುರುದೇವ ! ಇದೇನು ಮಾಡಿದೆ ? ಎಂದು ಹೇಳಿದನು. ರಮಾನಂದಸ್ವಾಮಿಯು ಶೈವಲಿನಿಯ ಅವಸ್ಥೆಯನ್ನು ಚೆನ್ನಾಗಿ ನೋಡಿ ಸ್ವಲ್ಪ ನಕ್ಕು, ಒಳ್ಳೆಯದೇ ಆಯಿತು. ಚಿಂತಿಸಬೇಡ. ನೀನು ಇಲ್ಲಿಯೇ ಬಂದೆರಡು ದಿನ ವಿದ್ದು ಅನಂತರ ಇವಳನ್ನು ಸಂಗಡ ಕರೆದುಕೊಂಡು ಸ್ವದೇಶಕ್ಕೆ ಹೋಗು. ಇವಳು ಯಾವ ಮನೆಯಲ್ಲಿ ವಾಸವಾಗಿದ್ದಳೊ ಆ ಮನೆಯಲ್ಲಿಯೇ ಇವಳನ್ನು ಇಡು-ಇವಳ ಜತೆಯಲ್ಲಿ ಯಾರು ಸಂಗಾತಿಗಳಾಗಿದ್ದರೋ ಅವರನ್ನೇ ಇವಳೊಂದಿಗೆ ಇರುವಹಾಗೆಮಾಡು. ಪ್ರತಾಪನನ್ನೂ ಅಲ್ಲಿಗೆ ಆಗಾಗ್ಗೆ ಬಂದುಹೋಗುವಹಾಗೆ ಹೇಳು, ನಾನು ಹಿಂದಲಿಂದ ಬರುವೆನೆಂದು ಹೇಳಿದನು. ಗುರುವಿನ ಅಪ್ಪ ಯಮೇರೆ ಚಂದ ಶೇಖಕ ಮನೆಗೆ ಕರೆದು ಕೊಂಡು ಹೋದನು.
ಪುಟ:ಚಂದ್ರಶೇಖರ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.