೧೪೬ ಚಂದ್ರಶೇಖರ. ಅದನ್ನು ದೂರದಲ್ಲಿಟ್ಟು, ಇದು ಸುಳ್ಳು, ನನ್ನಲ್ಲಿ ಈ ಗುಟ್ಟು ಏತಕ್ಕೆ ? ಅದಕ್ಕೋ ಸ್ಟರ ನಾನು ಸಾಯುವೆನೆ ? ಎಂದಳು. ವಾಹವದತಕಿ ತಾವು ಭೀತರಾಗಬೇಡಿರಿ, ನಾನು ತಮ್ಮನ್ನು ರಕ್ಷಿಸಬಲ್ಲೆನು. ದಳನೀ -ಓಹೊ ! ನಿನ್ನ ತಾತ್ಸರವೇನೋ ಇರಬೇಕು. ನೀನು ಸುಳ್ಳು ಪರವಾ ನೆಯನ್ನು ತಂದು ನನಗೆ ಭಯವನ್ನು ತೋರಿಸಲು ಬಂದೆಯೆ ? ವ ಹವದತ}-ಹಾಗಾದರೆ ಕೇಳ ಬೇಕು, ನಾನು ನಬಾಬರಿಗೆ, ತಾವು ಅಮಿದುಟ ನ ನೌಕದಲ್ಲಿ ಅವನ ಉಪಪತ್ನಿ ಯಾಗಿದ್ದಿರೆಂದು ಬರೆದಿದ್ದೆನು. ಅದಕ್ಕೋಸ್ಕರ ಈ ಪರ ವಾನೆದು ಬಂದಿದೆ. ಕೇ? ದಳನಿಯು ಹುಬ್ಬು ಗಂಟುಹಾಕಿದಳು. ಸ್ಥಿರವಾರಿಶಾಲಿನಿಯಾದ ಲಲಾಟಗಂಗೆ ಯಲ್ಲಿ ತರಂಗವೆದ್ದಿತು. ಭೂಧನುವಿಗೆ ವನ್ಮಥನು ಚಿಂತೆಯೆಂಬ ಹೆದೆಯನ್ನು ಕಟ್ಟಿ ದನು. ಮಹಮದತಕಿ ದು ಮನಸ್ಸಿನಲ್ಲಿ ಪ್ರಮಾದ ವು.ಟಾಯಿತೆಂದು ತಿಳಿದನು. ದಳ ನಿಯು, ಏತಕ್ಕೆ ಬರೆದಿದೆ ? ಎಂದಳು. ಮಹದತಕಿಯು ಮೊಳ ಕಾಲನ್ನೂರಿ ಕುಳಿತು, ಆದ್ರೂಪಾಂತವಾಗಿ ಎಲ್ಲವನ್ನೂ ತಿಳಿಸಿದನು. ದಳನೀ-ನೋಡಬೇಕು, ಪರವಾನೆಯನ್ನು ಪುನಃ ನೋಡುವೆನು. ವಹವದತಕಿರು ಪರವಾನೆಯನ್ನು ಪುನಃ ಕೊಟ್ಟನು, ದಳನಿಯು ತೆಗೆದು ಕೊಂಡು ಚೆನ್ನಾಗಿ ನೋಡಿ, ಯಥಾರ್ಥವೇ ಹೌದು, ಸುಳ್ಳಲ್ಲ. ವಿಪ್ರನೆಲ್ಲಿ ? ಎಂದಳು. ವಿಷವೆಲ್ಲಿ ? ಎಂದು ಹೇಳಿದುದನ್ನು ಕೇ' ವಾಹನದತಕಿಯು ಸಿಸ್ಮಿತನಾದನು. ಅನಂತರ, ವಿಪವೇತಕ್ಕೆ? ಎಂದು ಕೇಳಿದನು. ದಳನೀ_ಪರವಾನೆಯಲ್ಲಿ ಏನು ಅಪ್ಪಣೆಯಾಗಿದೆ ? ಮಹಮದತಕಿ- ತವಗೆ ವಿಪ್ರ ಪಾನಮಾಡಿಸಬೇಕೆಂದು. ದಳನೀ-ಹಾಗಾದರೆ ವಿಷವೆಲ್ಲಿ? ಮಹಮದತಕಿ-ತಾವು ವಿಷಪಾನ ಮಾಡುವಿರೋ ? ದಳನೀ - ನಮ್ಮ ರಾಜರ ಅಪ್ಪಣೆಯನ್ನು ನಾನೇತಕ್ಕೆ ಪಾಲನೆ ಮಾಡಕೂಡದು ? ಮಹಮದತಕಿಯು ಮನಸ್ಸಿನಲ್ಲಿ ಅಟ್ಟೆಯಿಂದ ಸತ್ತುಹೋದನು. ಅನಂತರ, ಆದುದು ಆಯಿತು, ತನಗೆ ವಿಷಸನವನ್ನು ಮಾಡಿಸಲಾರೆನು, ನಾನು ಇದಕ್ಕೆ ಉಪಾಯವನ್ನು ಮಾಡುವೆನೆಂದನು. ದಳನಿಯು ಕಣ್ಣುಗ೦ದ ಕೊಧದಿಂದ ಬೆಂಕಿಯ ಕಿಡಿಗಳು ಉದುರಿದವು. ಆ ಚಿಕ್ಕ ದೇಹವನ್ನು ಉನ್ನತ ಮಾಡಿಕೊಂಡು ದಳನಿಯು ನಿನ್ನಂತಹ ಪಾಪಿಷ್ಯನಿಂದ ಪ) ದಾನವನ್ನು ಗ್ರಹಣ ಮಾಡುವವರು ನಿನಗಿಂತಲೂ ಅಧಮರಾಗಿರಬೇಕು, ವಿಷವನ್ನು ತೆಗೆದುಕೊಂಡು ಬಾ, ಎಂದಳು. ಮಹಮದತಕಿಯು ದಳನಿಯನ್ನು ನೋಡಲಾರಂಭಿಸಿದನು, ಸುಂದರಿ, ಯುವತಿ. ದವನವೆಂಬ ಮಳೆಯಿಂದ ರೂಪದ ನದಿಯು ತುಂಬಿ ಎದ್ದಿದೆ. ಪೂರ್ಣವಸಂತದಲ್ಲಿ 2
ಪುಟ:ಚಂದ್ರಶೇಖರ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.