ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಚಂದ್ರಶೇಖರ. ನಬಾಬನು ಕಾಗದವನ್ನು ಕೇಳಿ, ಹೆಂಗಸನ್ನು ಕರೆತರುವಹಾಗೆ ಅಪ್ಪಣೆ ಮಾಡಿದ ಪ್ರಕಾರ ಸೈದಅಮಾರಹಸನನು ಹೊರಗೆ ಹೋಗಿ ಹೆಂಗಸನ್ನು ಕರೆತಂದುಬಿಟ್ಟನು. ನೋಡಲಾಗಿ ಕುಲಸಂ. ನಬಾಬನು ರುಮ್ಮನಾಗಿ, ನಿನಗೇನು ಬೇಕು ? ಬಾಂದಿ ! – ಸಾಯುವೆಯೋ ಏನು ? ಎಂದನು. ಕುಲಸಂ ನಬಾಬನನ್ನು ಸ್ಥಿರವಾದ ದೃಷ್ಟಿಯಿಂದ ನೋಡಿ, ನಬಾಬ ! ತಮ್ಮ ಬೇಗಂ ಎಲ್ಲಿ ? ದಳನಿ ಬೀಬಿಯು ಎಲ್ಲಿ ? ಎಂದಳು. ಅವಿವಾರಹಸನನು ಕುಲಸಮಿನ ವಾಕ್ ಪರಂಪರೆಯನ್ನು ಕೇಳಿ ಭೀತನಾಗಿ ನಬಾಬನಿಗೆ ಅಭಿವಂದನ ಮಾಡಿ ಹೊರಟುಹೋದನು. ವಿರಾರಕಾಸೀನು-ಆ ಸಾಸಿವೆಯು ಎಲ್ಲಿದ್ದಾಳೆ ನೀನೂ ಅಲ್ಲಿಗೆ ಜಾಗ್ರತೆಯಾಗಿ ಹೋಗುವೆ. ಕುಲಸಂ-ನಾನೂ ಹೋಗುವೆ. ತಾವೂ ಹೋಗುವಿರಿ, ಆದುದರಿಂದ ತಮ್ಮ ಬಳಿಗೆ ಬಂದೆನು, ಬರುತ್ಯ ಮಾರ್ಗದಲ್ಲಿ ದಳನಿಯು ಆತ್ಮಹತ್ಯೆ ಮಾಡಿಕೊಂಡಳೆಂದು ಕೇಳಿದೆ. ಅದು ನಿಜವೆ ? ಮಾರಕಾಸಿವು – ಆತ್ಮಹತ್ಯೆ ! ರಾಜದಂಡನೆಯಿಂದ ಅವಳು ಸತ್ತಳು. ನೀನು ಅವಳ ದುಷ್ಕರ್ಮಕ್ಕೆ ಸಹಾಯಕಳು, ನಿನ್ನನ್ನು ನಾಯಿಗಳು ತಿನ್ನುವುವು. ಕುಲಸಂ ಕೆಳಗೆ ಬಿದ್ದು ಉರುಡಾಡುತ್ತ ಆರ್ತನಾದ ಮಾಡಲಾರಂಭಿಸಿದಳು, ಮತ್ತು ಬಾಯಿಗೆ ಬಂದಹಾಗೆ ಮಾತನಾಡುತ್ತ ನಬಾಬನನ್ನು ಮನ ಬೈಯುವುದಕ್ಟ್ರಾರಂಭಿಸಿ ದಳು, ಇದನ್ನು ಕೇಳಿ, ಸೈನಿಕರೂ ಉಮಾಗಳ ನೃತ್ಯರೂ ರಕ್ಷಕರೂ ಎಲ್ಲರೂ ಓಡಿಬಂದರು. ಒಬ್ಬನು ಕುಲಸವಳ ತಲೆಯ ಕೂದಲನ್ನು ಹಿಡಿದೆಳದನು, ನಬು ಬನು ನಿಪ್ಪೇಧ ಮಾಡಿದನು. ಅವನಿಗೆ ಆಶ್ಚರೈವುಂಟಾಯಿತು, ನೃತ್ಯನು ಸರಿದು ಹೋದನು, ಆಗ ಕುಲಸವಳು ತಾವೆಲ್ಲರೂ ಬಂದಿದ್ದೀರಿ, ಒಳ್ಳೆಯದಾಯಿತು, ನಾನು ಒಂದು ಅಪೂರ್ವವಾದ ಕಥೆಯನ್ನು ಹೇಳುತ್ತೇನೆ, ಕೇಳಿರಿ. ನನಗೆ ಈಗ ವಧಾಜ್ಞೆ ಯಾ ಗಿದೆ, ನಾನು ಸತ್ತರೆ ಅದನ್ನು ಹೇಳುವವರಿಲ್ಲದಹಾಗಾಗುವುದು, ಈಗಲೇ ಕೇಳಿರಿ ಎಂದು ಹೇಳಿ, ಪ್ರಾರಂಭಿಸಿದಳು: ಕೇಳಿರಿ, ಸುಭಾಬಂಗಾಳಾ ಬಿಹಾರ ಮುಂತಾದ ಪ್ರದೇಶದಲ್ಲಿ ಮಾರಕಾಸಿವನೆಂಬೊಬ್ಬ ಮೂರ್ಖನಾದ ನವಾಬನಿದ್ದಾನೆ. ದಳನಿಯೆಂದು ಅವನ ಬೇಗನೊಬ್ಬಳಿದ್ದಳು. ಅವಳು ನಬಾಬನ ಸೇನಾಪತಿಯಾದ ಗುರಗಣಖಾನನಿಗೆ ತಂಗಿಯಾಗಬೇಕು, ಎಂದಳು. ಇದನ್ನು ಕೇಳುತಲೆ ಮತ್ತಾರೂ ಅವಳಮೇಲೆ ಕೈಮಾಡಲಿಲ್ಲ, ಎಲ್ಲರೂ ಪರಸ್ಪರ ಮುಖವನ್ನು ನೋಡಿದರು, ಎಲ್ಲರ ಕುತೂಹಲವೂ ಹೆಚ್ಚಿತು. ನಬಾಬನೂ ಏನೂ ಹೇಳಲಿಲ್ಲ, ಕುಲಸಂಬಿ ಮುಂದೆ ಹೇಳತೊಡಗಿದಳು :-