೧೫v ಚಂದ್ರಶೇಖರ ವರ್ತಮಾನವು ಹುಟ್ಟಿ ಅನೇಕರು ನೋಡುವುದಕ್ಕೆ ಬಂದರು, ಸುಂದರಿಯು ಎಲ್ಲರಿಗಿಂ ತಲೂ ಮುಂದಾಗಿ ಬಂದಳು. - ಸುಂದರಿಯು, ಕೈವಲಿನಿಯು ಕಣ್ಣು ಮರೆಯಾಗಿ ಹೋಗಿದ್ದ ಕಾಲದಲ್ಲಿದ್ದ ಅವಸ್ಥೆ ಯನ್ನು ಕೇಳಿರಲಿಲ್ಲ. ಬಂದವಳು ಮೊದಲು ಚಂದ್ರಶೇಖರನಿಗೆ ಪ್ರಣಾಮವನ್ನು ಮಾ ಡಿದಳು. ಚಂದ್ರಶೇಖರನು ಬ್ರಹ್ಮಚಾರಿಯ ವೇಷದಲ್ಲಿದ್ದನು, ಸುಂದರಿಯು ಶೈಲಿ ನಿಯನ್ನು ನೋಡಿ, ಅವಳನ್ನು ಕರೆತಂದುದು ಒಳ್ಳೆಯದಾಯಿತು, ಪ್ರಾಯಶ್ಚತ್ರ ವಾದರೆ ಸರಿಹೋಗುವುದೆಂದಳು. ಆದರೂ ಸುಂದರಿಯು, ಚಂದ್ರಶೇಖರನಿದ್ದರೂ ಶೈವಲಿಯು ಅಲ್ಲಾಡದೆ ಕುಳಿತಿರುವು ದನ್ನು ಕಂಡು ಆಶ್ಚರಪಟ್ಟಳು. ಅವಕುಂಠನವನ್ನು ಕೂಡ ಮುಖದಮೇಲೆ ಎಳೆದು ಕೊಳ್ಳಲಿಲ್ಲ. ಹೂವನ್ನು ನೋಡುತ್ತ ಕಿಲಕಿಲ ನಗುತ್ತಿದ್ದಳು, ಸುಂದರಿಯು, ಇದು ಇಂಗ್ಲೀಷರ ಪದ್ಧತಿಯಾಗಿರಬೇಕು, ಶೈವಲಿನಿಯು ಇಂಗ್ಲೀಷರ ಸಂಸರ್ಗದಿಂದ ಕಲಿತು ಕೊಂಡಿರಬೇಕೆಂದು ಭಾವಿಸಿಕೊಂಡು, ಶೈವಲಿನಿಯ ಹತ್ತಿರ ಹೋಗಿ ಕುಳಿತುಕೊಂಡಳು. ಸ್ವಲ್ಪ ದೂರ ಕೂತಳು. ಅವಳ ಬಟ್ಟೆಯು ತಗಲದಹಾಗೆ ತನ್ನ ಬಟ್ಟೆಯನ್ನು ಮುದು ರಿಕೊಂಡಳು. ಅನಂತರ ನಕ್ಕು, ಶೈವಲಿನಿಯನ್ನು ಕುರಿತು, ಏನೇ, ಗುರುತಿದೆಯೆ ? ಎಂದು ಕೇಳಿದಳು. ಕೈವಲಿನೀ-ಗೊತ್ತಾಯಿತು, ನೀನು ಸಾರ್ವತಿ. ಸುಂದರಿ-ನಾನು ಸತ್ತೆ ! ಮರುದಿನಕ್ಕೆ ಆಗಲೇ ಮರೆತುಹೋಯಿತೆ ! - ಶೈವಲಿನೀ-ಮರೆತೆನೆಗ್ಡೆ ! ನೀನು ನನ್ನ ಅನ್ನ ವನ್ನು ಮುಟ್ಟಿದೆಯೆಂದು ನಿನ್ನ ತಲೆಯಮೇಲೆ ಹೊಡೆಯಲಿಲ್ಲವೆ ? ಪಾರ್ವತಿ ! ಬಂದು ಹಾಡು ಹಾಡೆ, ನೋಡೋಣ. ಹೀಗೆಂದು ಹೇಳಿ ಏನೋ ಹಾಡಿದಳು. ಅನಂತರ, ಇದೇನು ಚೆನ್ನಾಗಿಲ್ಲ, ಪಾರ್ವತಿ! ಅವನು ಇಲ್ಲ. ಬರುವವನು ಬರಲಿಲ್ಲ. ಎಲ್ಲಿಗೋ ಬಂದೆ, ಅಲ್ಲಿಗೆ ಹೋಗಲಿಲ್ಲ. ಮಾ ರನ್ನು ಹುಡುಕುತಲಿದ್ದೆನೋ ಅವನು ಸಿಕ್ಕಲಿಲ್ಲವೆಂದಂದುಕೊಂಡಳು. ಸುಂದರಿಯು ವಿಸ್ಮಿತೆಯಾದಳು.-ಚಂದ್ರಶೇಖರನ ಮುಖವನ್ನು ನೋಡಿದಳು. ಚಂದ್ರಶೇಖರನು ಸುಂದರಿಯನ್ನು ಕರೆದು, ಅವಳ ಕಿವಿಯಲ್ಲಿ, ಹುಚ್ಚಿಯಾಗಿದ್ದಾಳೆಂದನು. ಸುಂದರಿಗೆ ಆಗ ಗೊತ್ತಾಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದಳು, ಸುಂದರಿಯ ಕಣ್ಣುಗಳು ಮೊದಲು ಪ್ರಕಾಶವಾದವು. ಅನಂತರ ಕಣ್ಣು ಸಜಲವಗಿ ತೋಯುತ ಬಂದವು, ಕಡೆಗೆ ಅಶು ಜಲಬಿಂದುವು ಜರಿದುಬಿದ್ದಿತು-ಸುಂದರಿಯು ಅಳಲಾರಂಭಿಸಿದಳು. * ಜಾತಿಯು ಸಂಸಾರಕ್ಕೆ ರತ್ನ ! ಈ ಸುಂದರಿಯು, ಮತ್ತೊಂದು ದಿನ ಕಾದುಮು ನೋವಾಕ್ಕಾಗಿ ಶೈವಲಿನಿಯು ನಕಾ ಸಮೇತವಾಗಿ ಜಲಮಗ್ನ ಯಾಗಿ ಸಾಯಲೆಂದು ಪ್ರಾರ್ಥಿಸಿದ್ದಳು. ಇಂದು ಸುಂದರಿಯಹಾಗೆ ಶೈವಲಿನಿಗೋಸ್ಕರ ಯಾರೂ ಅಪ್ಪು ಕಾತರರಾಗಿರಲಿಲ್ಲ.
ಪುಟ:ಚಂದ್ರಶೇಖರ.djvu/೧೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.