ಆರನೆಯ ಪರಿಚ್ಛೇದ. ಯೋಗಬಲವೊ ? ಅಥವಾ Psychic Force ? ಈ ಪಧವೇನೋ ಅದನ್ನು ನಾವು ಅರಿಯೆವು, ಆದರೆ ಅದನ್ನು ಸೇವನೆ ಮಾಡಿಸುವುದಕ್ಕೋಸ್ಕರ ಚಂದ್ರಶೇಖರನು ವಿಶೇಷವಾಗಿ ಆತ್ಮಶುದ್ದಿ ಮಾಡಿಕೊಂಡು ಬಂದಿದ್ದನು. ಅವನು ಸ್ವಾಭಾವಿಕವಾಗಿ ಜಿತೇಂ ದಿಯನು, ಕುಪ್ಪಿಪಾಸಾದಿ ಶಾರೀರಕವಾದ ವೃತ್ತಿಗಳನ್ನೆಲ್ಲಾ ಇತರರಿಗಿಂತಲೂ ಬಹಳ ಮಟ್ಟಿಗೆ ಹೆಚ್ಚಾಗಿ ವಶಮಾಡಿಕೊಂಡಿ ದನು. ಈಚೆಗೆ ಕಠೋರವಾದ ಅನಶನವತವನ್ನು ಆಚರಿಸಿ ಬಂದಿದ್ದನು. ಮನಸ್ಸನ್ನು ಕೆಲವುದಿನಗ ತಿಂದ ಈಶ್ಚರಧ್ಯಾನದಲ್ಲಿಟ್ಟಿದ್ದನು- ಪಾರಮಾರ್ಥಿಕವಾದ ಯೋಚನೆ ರತು ಬೇರೆ ಚಿಂತೆಗೆ ಮನಸ್ಸಿನಲ್ಲಿ ಸ್ಥಾನವಿರಲಿಲ್ಲ. - ನಿಷ್ಕರ್ಪೆ ಯಾಗಿದ್ದ ದಿನದಲ್ಲಿ ಚ ದ್ರಶೇಖರನು ಔಷಧವನ್ನು ಸೇವನೆಮಾಡಿಸು ವುದಕ್ಕೆ ಉದ್ಯೋಗಮಾಡಲಾರಂಭಿಸಿದನು. ಶೈವಲಿನಿಗೋಸ್ಕರ ಹಾಸಿಗೆಯನ್ನು ಸಿದ್ಧ ಮಾಡಲಾರಂಭಿಸಿದನು, ಸುಂದರಿಯು ತಂದಿಟ್ಟ ಪರಿಚಾರಿಕೆಯು ಅವನ ಹೇಳಿಕೆಯಪ್ರಕಾರ ಹಾಸಿಗೆಯನ್ನು ಸಿದ್ಧಪಡಿಸಿದಳು. - ಚಂದ್ರಶೇಖರನು ಹೇಳಿದ ಪ್ರಕಾರ ಸುಂದರಿಯು ಶೈವಲಿನಿಯನ್ನು ಬಲವಂತವಾಗಿ ಕರೆತಂದು ಹಾಸಿಗೆಯಲ್ಲಿ ಮಲಗಿಸಿದಳು, ಶೈವಲಿನಿಯು ಮಾತುಕೇಳಳು, ಸುಂದ ರಿಯು ನಿತ್ಯವೂ ಮನೆಗೆ ಹೋಗಿ ಸ್ನಾನಮಾಡುವಳು. ಚಂದ್ರಶೇಖರನು ಎಲ್ಲರನ್ನೂ ಹೊರಗೆ ಹೋಗುವಹಾಗೆ ಹೇಳಿ, ನಾನು ಕರೆದೆ ಕೂಡಲೆ, ಬರಬೇಕೆಂದೂ ಹೇಳಿದನು. ಎಲ್ಲರೂ ಹೊರಗೆ ಹೋದರು-ಚಂದ್ರಶೇಖರನೊಬ್ಬನೇ ಇದ್ದನು. ಎಲ್ಲರೂ ಹೊರಗೆ ಹೋದ ಮೇಲೆ ಕಂದ ಶೇಖರನು ಕೈಯಲ್ಲಿದ್ದ ಔಷಧವನ್ನು ನೆಲದ ಮೇಲಿಟ್ಟು ಕೈವಲಿನಿಯನ್ನು ಕುರಿತು, ಎದ್ದು ಕೂಡು, ಎಂದು ಹೇಳಿದನು. ಶೈವಲಿನಿಯು ಮೆಲ್ಲಮೆಲ್ಲಗೆ ಹಾಡಲಾರಂಭಿಸಿದಳು.ಏಳಲಿಲ್ಲ, ಚಂದ್ರಶೇಖರನು ತನ್ನ ಸ್ಥಿರವಾದ ದೃಷ್ಟಿಯಿಂದ ಅವಳ ಕಣ್ಣುಗಳನ್ನು ನೋಡುತ ಕುಳಿತಿದ್ದನು. ಕ್ರಮವಾಗಿ ಶೈವಲಿನಿಯು ಭೀತಿಗೊಂಡು ಎದ್ದು ಕೂತಳು. ಚಂದಶೇಖರನು ಅವಳನ್ನು ಕುರಿತು, ಒಂದು ಮಾತನ್ನೂ ಹೇಳಬೇಡ-ನನ್ನ ಕಣ್ಣನ್ನೇ ನೋಡುತಲಿರೆಂದು ಹೇಳಿದನು.
ಪುಟ:ಚಂದ್ರಶೇಖರ.djvu/೧೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.