M೪ ಚಂದ್ರಶೇಖರ. ರು, ಹೇಳು, ಈಗ ಕೇಳಿಸುವುದು ಯಾವ ಶಬ್ಬ ? ಎಂದನು. ಕೈವಲಿನೀ-ಕುದುರೆಯ ಕಾಲಿನ ಶಬ್ದ, ಚಂದಶೇಖರ-ಯಾರು ಬರುತ್ತಾರೆ ? ಕೈವಲಿನೀ-ಮಹಮ್ಮದ ಅರಸನ ಕುದುರೆ-ನಬಾಬನ ಸೈನಿಕ. ಚಂದ್ರ ಶೇಖರ-ಏತಕ್ಕೆ ಬರುತ್ತಾನೆ ? ಶೈವಲಿನೀ-ನನ್ನನ್ನು ಕರೆದುಕೊಂಡು ಹೋಗುವುದಕ್ಕೆ, ನಬಾಬನು ನನ್ನನ್ನು ನೋಡಬೇಕೆಂದಿದ್ದಾನೆ. ಚಂದ್ರಶೇಖರ-ಭಾಸ್ಟರನು ಅಲ್ಲಿಗೆ ಹೋದಮೇಲೆ ನಿನ್ನನ್ನು ನೋಡಬೇಕೆಂದು ಅಪೇಕ್ಷಿಸಿದನೆ ? ಅಥವಾ ಅದಕ್ಕೆ ಪೂರ್ವವೆ ? ಕೈವಲಿನೀ-ಇಲ್ಲ. ಇಬ್ಬರನ್ನೂ ಕರೆತರಬೇಕೆಂದು ಒಂದೇ ತಡವೆ ಅಪ್ಪಣೆ ಮಾಡಿ ದನು. ಚಂದ್ರಶೇಖರ-ಚಿಂತೆಯಿಲ್ಲ, ನಿದ್ರೆಹೋಗು. ಹೀಗೆಂದು ಹೇಳಿ ಚಂದ್ರಶೇಖರನ ಎಲ್ಲರನ್ನೂ ಕರೆದನು. ಅವರು ಬಂದಮೇಲೆ, ಇವಳು ನಿದ್ರೆ ಹೋಗುತ್ತಾಳೆ. ನಿದಾ ಭಂಗವಾದಮೇಲೆ ಈ ಮಾತ್ರದಲ್ಲಿರುವ ಔಷಧ ವನ್ನು ಕುಡಿಸಿರಿ. ಈಗ ನವಾಬನ ಸೈನಿಕನು ಬರುವನು. ನಾಳೆ ಶೈವಲಿನಿಯನ್ನು ಕರೆದುಕೊಂಡು ಹೋಗುವನು. ನೀವೂ ಸಂಗಡ ಹೋಗಬೇಕೆಂದನು. ಎಲ್ಲರೂ ವಿಸ್ಮಿತರಾಗಿ ಭೀತಿಗೊಂಡು, ಏತಕ್ಕೆ ಇವಳನ್ನು ನಬಾಬನ ಬಳಿಗೆ ಕರೆದು ಕೊಂಡು ಹೋಗುವರು ? ಎಂದು ಕೇಳಿದರು. ಚಂದ್ರಶೇಖರ.ಈಗಲೇ ಗೊತ್ತಾಗುವುದು-ಚಿಂತೆಯಿಲ್ಲ. ಮಹಮ್ಮದ ಇರಫನು ಬರುತ್ತಲೆ ಪ್ರತಾಪನು ಅವನನ್ನು ಬರಮಾಡಿಕೊಂಡು ಉಪಚರಿಸಿದನು, ಚಂದ್ರ ಶೇಖರನೂ ಎಲ್ಲಾ ಮಾತನ್ನೂ ಆದ್ರೂಪಾಂತವಾಗಿ ರಮಾ ನಂದಸ್ವಾಮಿಗೆ ಅರುಹಿದನು. ರಮಾನಂದಸ್ವಾಮಿಯು, ನಾವಿಬ್ಬರೇ ನವಾಬನ ದರಬಾ ರಿಗೆ ಹೋಗಬೇಕೆಂದು ಹೇಳಿದನು.
ಪುಟ:ಚಂದ್ರಶೇಖರ.djvu/೧೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.