ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ. ದರ್ಬಾರಿನಲ್ಲಿ. ಹಾ ಆಡಂಬರದಿಂದ ಅತಿ ವಿಸ್ತಾರವಾದ ಶಿಬಿರದಮಧ್ಯೆ ಬಂಗಾಳಿಯು ಕಡೇರಾಜನು ಕುಳಿತಿದ್ದನು. ಕಡೇರಾಜನೇತಕ್ಕೆಂದರೆ : - ಮಾರ ಕಾಸೀವನ ಅನಂತರ ಬಂಗಾಳಾ ನಬಾಬರೆಂದು ಹೆಸರು ಪಡೆದವ ರಾರೂ ರಾಜತ್ವವನ್ನು ಮಾಡಲಿಲ್ಲ. ಸರಸರವಾಗಿ ಮತ್ತು ಹವಳಗಳಿಂದಲೂ ರಜತಕಾಂಚನಾದಿ ಗ'೦ದಲೂ ಶೋಭಿತವಾದ ಉಚ್ಛವಾದ ಸಿ ಹಾಸನದಮೇಲೆ ನಬಾಬ ಕಾಸಿಂ ಅಲಿಖಾನನು, ಶಿರೋದೇಶದಲ್ಲಿ ಉಜ್ವಲತಮವಾದ ಸೂರೈಪ್ರಭೆಯನ್ನು ಪ್ರತಿಫಲಿಸುವ ವಜಖಂಡ ದಿಂದ ರಂಜಿತವಾದ ಉಮ್ಮಿಷದಿಂದಲಂಕೃತನಾಗಿ ವಿರಾಜಿಸುತಲಿದ್ದನು, ಪಾರ್ಶ್ವ ದಲ್ಲಿ ಶ್ರೇಣೀಬದ್ಧರಾಗಿ ನೃತೃವರ್ಗದವರು ಕೈಕಟ್ಟಿಕೊಂಡು ನಿಂತಿದ್ದರು, ಮಂತ್ರಿ) ವರ್ಗದವರು ಅಪ್ಪಣೆಯನ್ನು ಪಡೆದು ಜಾನುಗಳಿಂದ ಭೂಸ್ಪರ್ಶಮಾಡಿಕೊಂಡು ಶಮ್ಮ ಮಾಡದೆ ಕುಳಿತಿದ್ದರು. ನಬಾಬನು, ಕೈದಿಗಳು ಬಂದಿದ್ದಾರೆ ? ಎಂದನು. ಮಹಮ್ಮದ ಇರಫ - ಎಲ್ಲರೂ ಇದ್ದಾರೆ. ನಬಾಬನು ಮೊದಲು ಲಾರ್ರಸು ಘಾಸ್ಟ್ರನನ್ನು ಕರೆತರುವಹಾಗೆ ಅಪ್ಪಣೆಮಾಡಿ ದನು. ಲಾರ್ರಸು ನಾಸ್ಟ್ರನು ಕರೆತರಲ್ಪಟ್ಟವನಾಗಿ ಸಮುಖದಲ್ಲಿ ನಿಂತನು. ನಬಾಬ -ನೀನು ಯಾರು ? ಲಾರ್ರಸು ನಾಸ್ಟ್ರನು ಈ ತಡವೆ ತನಗೆ ನಿಸ್ತಾರವಿಲ್ಲವೆಂದು ತಿಳಿದಿದ್ದನು. ಇಷ್ಟು ದಿನದಮೇಲೆ, ನಾನು ಇಂಗ್ಲೀಪ ಹೆಸರಿಗೆ ಕಳಂಕವನ್ನುಂಟುಮಾಡಿ,ಈಗ ಇಂಗಿ ಪ್ರರಂತೆ ಸಾಯುವೆನೆಂದು ಹೇ ಕೊಂಡು, ನನ್ನ ಹೆಸರು ಲಾರ್ರಸು ಫಾಸ್ಟ್ರು ಎಂದು ಹೇಳಿದನು. ನಬಾಬ-ನೀನು ಯಾವ ಜಾತಿಳುವನು ? ಫಾಸ್ಯರಇಂಗ್ಲೀಷು. ನಬಾಬ-ಇಂಗ್ಲೀಷರು ನನಗೆ ಶತ್ರುಗಳು-ನೀನು ಶತ್ರುವಾಗಿ ನಮ್ಮ ಶಿಬಿರಕ್ಕೆ ಏತಕ್ಕೆ ಬಂದೆ ?