೧೬y ಚಂದಶೇಖರ. ಫಾಸ್ಟರ - ಶೈವಲಿನೀ, ಚಂದ್ರಶೇಖರನ ಪತ್ನಿ. ನಬಾಬ-ನೀನು ಇವಳನ್ನು ಬಲ್ಲಬಗೆ ಹೇಗೆ ? ಫಾಸ್ಟರ - ತಮಗೆ ಏನು ಇಷ್ಟ್ಯವೋ ಆ ಶಿಕ್ಷೆಯನ್ನು ಕೊಡಬಹುದು. ನಾನು ಪ್ರತ್ಯುತ್ತರವನ್ನು ಹೇಳುವುದಿಲ್ಲ. ನಬಾಬ - ನಮ್ಮ ಅಭಿಪ್ರಾಯದಲ್ಲಿ ನಿನ್ನನ್ನು ನಾಯಿಯಿಂದ ಕಚ್ಚಿಸಬೇಕೆಂದಿದೆ. ಫಾಸ್ಟರನ ಮುಖವು ಶುಷ್ಕವಾಯಿತು, ಕೈಕಾಲು ನಡುಗಲಾರಂಭವಾಯಿತು. ಅನಂತರ ಸ್ವಲ್ಪ ಧೈರ್ ವುಂಟಾಯಿತು, ಅನಂತರ, ನನ್ನ ಪ್ರಾಣದಂಡನೆಯೇ ತಮ್ಮ ಅಭಿಸಾ ದುವಾಗಿದ್ದರೆ, ನನಗೆ ಬೇರೆ ವಿಧವಾಗಿ ಪ್ರಾಣದಂಡನೆಯನ್ನು ವಿಧಿಸಬೇಕೆಂದನು. ನಬಾಬ-ಆಗುವುದಿಲ್ಲ. ಈ ದೇಶದ ಪದ್ಧತಿಯೇನೆಂದರೆ, ಅಪರಾಧಿಯನ್ನು ಕಟ ಪರಂತವೂ ನೆಲದಲ್ಲಿ ಹುಗಿದು ಅವನನ್ನು ದಂಶನ ಮಾಡುವುದಕ್ಕೋಸ್ಕರ ಶಿಕ್ಷಿತವಾದ ನಾಯಿಗಳನ್ನಿಟ್ಟಿದ್ದಾರೆ. ನಾಯಿಗಳು ಅಪರಾಧಿಯನ್ನು ಕಡಿಯುತ್ತ ಬಂದಹಾಗೆಲ್ಲಾ ಆ ಘಾಯಗಳಿಗೆ ಉಪ್ಪನ್ನು ತುಂಬಬೇಕು, ನಾಯಿಗಳು ಮಾಂಸಭೋಜನ ಮಾಡಿ ತೃಪ್ತ ವಾಗಿ ಹೋಗುವುವು, ಅರ್ಧಭಕ್ಕನಾದ ಅಪರಾಧಿಯು ಅರ್ಧ ಪೋಥಿತನಾಗಿರುವನು. ನಾಯಿಗತಿಗೆ ಹಸಿವು ಉಂಟಾದರೆ ಪುನಃ ಬಂದು ಉಳಿದಿರುವ ಮಾಂಸವನ್ನು ತಿನ್ನುವುವು. ನಿನಗೂ ಆ ತಕಿಗೂ ಈ ವಿಧವಾದ ಮರಣದಂಡನೆಯು ವಿಧಿಸಲ್ಪಡುವುದು. ಬಂಧನಯುಕ್ತನಾದ ಮಹಮ್ಮದತಕಿಯು ಆರ್ತೆಯಾದ ಪಶುವಿನಹಾಗೆ ಚೀತ್ಕಾರ ಮಾಡಲಾರಂಭಿಸಿದನು. ಭಾಸ್ಟರನು ಮೊಣಕಾಲನ್ನೂರಿ ಕು"ತುಕೊಂಡು ಕೈಮುಗಿದು ಊರ್ಧ್ವನನನನಾಗಿ ಜಗದೀಶ್ವರನನ್ನು ಕೂಗುತ್ತ ಮನಸ್ಸಿನಲ್ಲಿ, ನಾನು ನಿನ್ನನ್ನು ಯಾವಾಗಲೂ ಸ್ಮರಿಸಲಿಲ್ಲ ನಿನ್ನನ್ನು ಧ್ಯಾನಮಾಡಲಿಲ್ಲ. ಚಿರಕಾಲದಿಂದಲೂ ಪಾಪಿಯಾ ಗಿದ್ದೇನೆ ! ನೀನು ಇದೆಯೆಂದು ನನಗೆ ಮನಸ್ಸಿಗೆ ಯಾವಾಗಲೂ ಗೊತ್ತಾಗಲಿಲ್ಲ. ಆದರೆ ಇಂದು ನಾನು ನಿಸ್ಸಹಾಯಕನಾಗಿದ್ದೇನೆ. ಅದು ಕಾರಣ ನಿನ್ನನ್ನು ಸ್ಮರಿಸಿದೆನು, ಹೆ ನಿರುಪಾಯರಿಗೆ ಉಪಾಯನೆ ! ಅಗತಿಕರಿಗೆ ಗತಿಯೆ ! ನನ್ನನ್ನು ರಕ್ಷಿಸು ' ಎಂದು ಪ್ರಾರ್ಥಿ ಸಿದನು ಯಾರೂ ವಿಸ್ಮಿತರಾಗಲಿಲ್ಲ. ಈಶ್ವರನನ್ನು ಒಪ್ಪದಿರುವ ನಿರೀಶ್ವರವಾದಿಗಳ ವಿಪತ್ತಿನಲ್ಲಿ ಬಿದ್ದರೆ ಈಶ್ವರನನ್ನು ಕರೆಯುವರು, ಭಕ್ತಿಭಾವದಿಂದ ಕರೆಯುವರು. ಫಾಸ್ಟ್ರನು ದೇವರನ್ನು ಕರೆದನು. ನಯನವು ವಿನತವಾಗಲಾಗ ಭಾಸ್ಕರನ ದೃಷ್ಟಿಯು ಸಭೆಯ ಹೊರಗಡೆ ಬಿದ್ದಿತು. ಆಗವನು, ಒಬ್ಬ ಜಟಾ ಜೂಟ ಧಾರಿಯಾದ ರಕ್ತ ವಸ್ತ್ರವನ್ನು ವೃದ್ದ ರೈತರು ವಿಭೂತನಾದ ಪುರುಷನು ನಿಂತಿರುವುದನ್ನು ಕಂಡನು. ಆ ಪುರುಷನು ಅವನನ್ನೇ ನೋಡುತ್ತಿದ್ದನು. ಫಾಸ್ಟರನ ದೃಷ್ಟಿಯು ಆತನ ಕಣ್ಣುಗಳ ಮೇಲೆ ಸ್ಥಿರವಾಗಿ ಬಿದ್ದಿತ್ತು-ಕ್ರಮವಾಗಿ ಅವನ ಚಿತ್ರವು ಆ ದೃಷ್ಟಿಗೆ ವಶೀಭೂತವಾಯಿತು, ಕಣ್ಣು
ಪುಟ:ಚಂದ್ರಶೇಖರ.djvu/೧೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.